Advertisement

ವಂದೇ ಭಾರತ್ ಮಿಷನ್: ಕತಾರ್ ನ ದೋಹಾದಿಂದ ಮಂಗಳೂರಿಗೆ ಬಂದಿಳಿದ ವಿಮಾನ

11:37 PM Jun 19, 2020 | Hari Prasad |

ಬೆಂಗಳೂರು: ಕೋವಿಡ್ 19 ಸಂಬಂಧಿ ಲಾಕ್ ಡೌನ್ ಕಾರಣದಿಂದ ಗಲ್ಫ್ ರಾಷ್ಟ್ರಗಳಲ್ಲಿ ತೊಂದರೆಗೆ ಸಿಲುಕಿದ್ದ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ಫಲ ನೀಡಿದೆ.

Advertisement

ಲಾಕ್ ಡೌನ್ ಜಾರಿಗೊಂಡ ಇಷ್ಟು ದಿನಗಳ ಕಾಲ ಸ್ವದೇಶಕ್ಕೆ ಮರಳಲು ಕತಾರ್ ಮತ್ತು ಇನ್ನಿತರ ಗಲ್ಫ್ ದೇಶಗಳಲ್ಲಿದ್ದ ಅನಿವಾಸಿ ಕನ್ನಡಿಗರು ಸಾಕಷ್ಟು ಪರದಾಡುತ್ತಿದ್ದರು.

ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳಿಗೆ ಅಲ್ಲಿನ ಕನ್ನಡ ಸಂಘಟನೆಗಳೂ ಸೇರಿದಂತೆ ಹಲವಾರು ಜನ ನಿರಂತರ ಮನವಿ ಸಲ್ಲಿಸಿ ಪ್ರಯತ್ನಿಸಿದ್ದರ ಫಲವಾಗಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ದೋಹಾದಿಂದ ಮಂಗಳೂರಿಗೆ ಮೊದಲ ವಿಮಾನ ಇಂದು ಸಾಯಂಕಾಲ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿತು.

ಇದು ಕರಾವಳಿ ಭಾಗದ ಜನರಿಗೆ ಬಹಳ ದೊಡ್ಡ ಪರಿಹಾರವಾಗಿದೆ, ಕತಾರ್ ನಲ್ಲಿ ಕನ್ನಡಿಗ ಜನಸಂಖ್ಯೆಯ ಕರಾವಳಿ ಭಾಗದವರು ಆ ದೇಶದಲ್ಲಿ ನಮ್ಮ ಕನ್ನಡಿಗರು ಅನುಭವಿಸುತ್ತಿರುವ ನೋವಿನ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡಿಕೊಳ್ಳಲಾಗಿತ್ತು,

ಕತಾರ್ ನಲ್ಲಿ ನಮ್ಮ ಕನ್ನಡಿಗರಿಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಅಲ್ಲಿನ ಕನ್ನಡಿಗರು ಧನ್ಯವಾದಗಳನ್ನ ಸಲ್ಲಿಸಿದ್ದಾರೆ.

Advertisement

ವಾಪಸಾತಿ ಪಟ್ಟಿಯನ್ನು ಭಾರತದ ರಾಯಭಾರ ಕಚೇರಿಯಿಂದ ತಯಾರಿಸಲಾಗಿದ್ದು, ಅಲ್ಲಿ ವೃದ್ಧರು, ಗರ್ಭಿಣಿಯರು, ಕಡಿಮೆ ಸಂಬಳ ಪಡೆಯುವ ಕಾರ್ಮಿಕರು ಹಾಗೂ ಉದ್ಯೋಗ ಕಳೆದುಕೊಂಡವರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗಿದೆ.

ಇದರ ಜೊತೆಗೆ ಜೂನ್ 6 ರ ಶನಿವಾರ ಹೃದಯಾಘಾತದಿಂದ ಮೃತಪಟ್ಟ ಮಂಗಳೂರಿನ ಚಾಲಕನ ಮೃತದೇಹವನ್ನೂ ಇದೇ ವಿಮಾನದಲ್ಲಿ ತರಲಾಯಿತು

ಭಾರತೀಯ ಸಮುದಾಯಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಭಾರತೀಯ ರಾಯಭಾರಿ ಪಿ.ಕುಮಾರನ್ ಮತ್ತು ರಾಯಭಾರ ಕಚೇರಿ ಅಧಿಕಾರಿಗಳಿಗೂ ಸಹ ಅಲ್ಲಿನ ಕನ್ನಡಿಗರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next