Advertisement
ಈ ಅಭಿಯಾನದಡಿಯಲ್ಲಿ ಅ. 31ರ ವರೆಗೆ 209 ಪ್ರಯಾಣಿಕರನ್ನು ಒಳಗೊಂಡ ಮತ್ತೂಂದು ಗುಂಪುಮುಂಬಯಿಗೆ ಆಗಮಿಸುವ ನಿರೀಕ್ಷೆಯಿದೆ. ಒಟ್ಟು ಪ್ರಯಾಣಿಕರಲ್ಲಿ 38,602 ಮಂದಿ ಮುಂಬಯಿ ಯಲ್ಲಿ ಉಳಿದರೆ, 37,201 ಮಂದಿ ಮುಂಬಯಿಗೆ ಆಗಮಿಸಿ ಮಹಾ ರಾಷ್ಟ್ರದ ಇತರ ಭಾಗಗಳಿಗೆ ತೆರಳಿದ್ದಾರೆ. ಅದೇ, ಉಳಿದ 41,630 ಪ್ರಯಾಣಿಕರು ಇತರ ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ. ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀ ಯರನ್ನು ಮರಳಿ ಮನೆಗೆ ಕರೆತರಲು ಕೇಂದ್ರ ಸರಕಾರವು ಮೇ 7ರಂದು “ವಂದೇ ಭಾರತ್ ಮಿಷನ್’ ಅನ್ನು ಪ್ರಾರಂಭಿಸಿದೆ. ಇತರ ರಾಜ್ಯಗಳ ಪ್ರಯಾಣಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿ ತಿಳಿಸಿದ್ದಾರೆ.
Advertisement
ವಂದೇ ಭಾರತ್ ಮಿಷನ್ 1.17 ಲಕ್ಷ ಪ್ರಯಾಣಿಕರು ವಿದೇಶಗಳಿಂದ ಮುಂಬಯಿಗೆ ಆಗಮನ
08:10 PM Oct 03, 2020 | Suhan S |
Advertisement
Udayavani is now on Telegram. Click here to join our channel and stay updated with the latest news.