Advertisement
ಇದನ್ನೂ ಓದಿ:ಸೈಬರ್ ವಂಚನೆ; ವಿದೇಶಿ ವರನ ಸೋಗಿನಲ್ಲಿ ಯುವತಿಗೆ 2.3 ಲಕ್ಷ ಟೋಪಿ
Related Articles
Advertisement
ಶೇ.40ರಷ್ಟು “ವಂದೇ ಭಾರತ್’ಗೆ ಶಿಫ್ಟ್: “ವಂದೇ ಭಾರತ್’ ಕಾರ್ಯಾರಂಭ ಮಾಡಿದ ನಂತರ ಶತಾಬ್ದಿಯಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಶೇ.40ರಷ್ಟು ಪ್ರಯಾಣಿಕರು ಶತಾಬ್ದಿಯಿಂದ ವಂದೇ ಭಾರತ್‌ಗೆ ವರ್ಗಾವಣೆ ಆಗಿದ್ದಾರೆ. ಇದರಲ್ಲಿ ಎಕ್ಸಿಕ್ಯುಟಿವ್ ಚೇರ್ ಕಾರ್ ಪ್ರಮಾಣ ಹೆಚ್ಚಿದೆ. ಆದರೆ, ಶತಾಬ್ದಿಯಲ್ಲಿ ವಿಮಾನಯಾನದ ಮಾದರಿಯಲ್ಲಿ ಡೈನಾಮಿಕ್ ಫೇರ್ ಅನ್ವಯಿಸು ತ್ತದೆ. ಅಂದರೆ ಆಸನಗಳ ಲಭ್ಯತೆ ಆಧಾರದಲ್ಲಿ ದರ ನಿಗದಿಯಾಗುತ್ತದೆ.
ವಂದೇ ಭಾರತ್‌ದಲ್ಲಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದಾಗ್ಯೂ ಹೊಸ ರೈಲು ಮತ್ತು ಹೈಟೆಕ್ ಸೌಲಭ್ಯಗಳು ಇರುವುದರಿಂದ ಪ್ರಯಾಣಿಕರು “ಶಿಫ್ಟ್’ ಆಗಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪೀಕ್ ಅವಧಿಯಲ್ಲಿ ಅಂದರೆ ರಜಾ ಮತ್ತು ಹಬ್ಬದ ದಿನಗಳಲ್ಲಿ ಈ ಎರಡೂ ರೈಲುಗಳ ಪ್ರಯಾಣಿಕರ ದಟ್ಟಣೆ ಬಗ್ಗೆಯೂ ಅಧ್ಯಯನ ಮಾಡಬೇಕಿದೆ. ಇದಕ್ಕಾಗಿ ತುಸು ಸಮಯ ಕಾದುನೋಡಲಾಗುತ್ತಿದೆ ಎಂದು ಹೇಳಲಾಗಿದೆ.
“ಚೆನ್ನೈನಿಂದ ಮೈಸೂರು ಕಡೆಗೆ ಹೊರಡುವ ಈ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಸನಗಳ ಭರ್ತಿ ಸಾಮರ್ಥ್ಯ ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ) ಸರಾಸರಿ ಶೇ. 64ರಷ್ಟಿದ್ದರೆ, ಸಾಮಾನ್ಯ ಚೇರ್ ಕಾರ್ (ಸಿಸಿ) ಶೇ. 85ರಷ್ಟಿದೆ. ಅದೇ ರೀತಿ, ಮೈಸೂರಿನಿಂದ ವಾಪಸ್ ಚೆನ್ನೈ ಕಡೆಗೆ ಹೊರಡುವ ಮಾರ್ಗದಲ್ಲಿ ರೈಲಿನ ಆಸನಗಳು ಕ್ರಮವಾಗಿ ಶೇ. 75 ಹಾಗೂ ಶೇ. 98ರಷ್ಟಿದೆ.
ಇನ್ನು ವಂದೇ ಭಾರತ್ ರೈಲಿನ ಆಕ್ಯುಪನ್ಸಿ ಚೆನ್ನೈ- ಮೈಸೂರು ಮಾರ್ಗದಲ್ಲಿ ಇಸಿಯಲ್ಲಿ ಸರಾಸರಿ ಶೇ. 147 ಆಸನಗಳು ಭರ್ತಿ ಆಗಿದ್ದರೆ, ಸಿಸಿಯಲ್ಲಿ ಶೇ. 115 ಇದೆ. ಅದೇ ರೀತಿ, ಮೈಸೂರು-ಚೆನ್ನೈ ಮಾರ್ಗದಲ್ಲಿ ಕ್ರಮವಾಗಿ ಶೇ. 125 ಮತ್ತು ಶೇ. 97ರಷ್ಟಿದೆ. ಇದರಲ್ಲಿ ಚೆನ್ನೈ-ಕಾಟ್ಪಾಡಿ, ಕಾಟಾ³ಡಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಕೆಎಸ್‌ಆರ್) ಬೆಂಗಳೂರು ಮತ್ತು ಕೆಎಸ್ ಆರ್- ಮೈಸೂರು ಸೇರಿದಂತೆ ಮೂರು ಕಡೆಯಿಂದ ಸೀಟುಗಳು ಹಂಚಿಕೆಯಾಗಿರುತ್ತದೆ. ಅದನ್ನು ಆದರಿಸಿ ಆಕ್ಯುಪನ್ಸಿ ಲೆಕ್ಕಹಾಕಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸುತ್ತಾರೆ.
130 ಕಿ.ಮೀ. ವೇಗದ ಗುರಿ?“ವಂದೇ ಭಾರತ್’ ಅತಿ ವೇಗವಾಗಿ ಸಂಚರಿಸುವ ರೈಲು ಆಗಿದ್ದರೂ, ಹಳಿಗಳ ವೇಗಮಿತಿ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಹಳಿಗಳ ಅಪ್‌ಗ್ರೇಡ್ ಮಾಡುವ ಮೂಲಕ ಗಂಟೆಗೆ 120-130 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೆಚ್ಚಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಮಾರ್ಗದುದ್ದಕ್ಕೂ ತಿರುವುಗಳು, ಇಳಿಜಾರುಗಳು, ಸೇತುವೆಗಳು, ಲೆವೆಲ್ ಕ್ರಾಸಿಂಗ್‌ಗಳು ಇರುವುದರಿಂದ ಈ ಹೊಸ ರೈಲಿನ ಸರಾಸರಿ ವೇಗ 100 ಕಿ.ಮೀ. ದಾಟುತ್ತಿಲ್ಲ. ಇದರ ಅಧ್ಯಯನ ಕೈಗೆತ್ತಿಕೊಂಡು, ತಿರುವುಗಳನ್ನು ಸಾಧ್ಯವಾದಷ್ಟು ಸರಿಪಡಿಸಿ ವೇಗ ಹೆಚ್ಚಿಸುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಕುಮಾರ ಚಂದರಗಿ