ಒಡಿಶಾ: ಆಲಿಕಲ್ಲು ಮಳೆಯಿಂದ ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಾನಿಯಾಗಿದ್ದು ಇದರಿಂದಾಗಿ ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇ 22 ರಂದು (ಸೋಮವಾರ) ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಒಡಿಶಾದ ಭದ್ರಕ್ ರೈಲು ನಿಲ್ದಾಣದಿಂದ ಹೊರಟ ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೆಲವು ವಿಭಾಗಗಳ ಗಾಜಿನ ಕಿಟಕಿಗಳು ಆಲಿಕಲ್ಲು ಮಳೆಯಿಂದಾಗಿ ಹಾನಿಯಾಗಿದೆ ಜೊತೆಗೆ ಮುಖ್ಯ ಎಂಜಿನ್‌ನ ವಿಂಡ್‌ಸ್ಕ್ರೀನ್‌ಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ರೈಲು ಹಳಿ ಮೇಲೆ ಮರದ ಕೊಂಬೆ ಬಿದ್ದಿರುವುದರಿಂದ ರೈಲು ಸಂಚಾರ ಸಂಪೂರ್ಣ ವ್ಯತ್ಯಯವಾಗಲಿದೆ. ಇದುವರೆಗೂ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಆಗ್ನೇಯ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.