Advertisement

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

12:10 PM Mar 19, 2024 | Team Udayavani |

ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ “ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲುಗಳ ಮೇಲಿನ ಕಲ್ಲೆಸತ ಪ್ರಕರಣಗಳು ನಡೆದಿದ್ದು, ಇಲಾಖೆಯ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

Advertisement

ಇದೀಗ ಕಿಡಿಗೇಡಿಗಳು ವಂದೇ ಭಾರತ್‌ ರೈಲುಗಳ ಮೇಲೆ ಪದೇ ಪದೆ ಕಲ್ಲು ತೂರಾಟ ಮಾಡುತ್ತಿರುವುದರಿಂದ ಇಲಾಖೆಗೆ ಭಾರೀ ನಷ್ಟ ಉಂಟಾಗುತ್ತದೆ.

50 ಪ್ರಕರಣ ದಾಖಲು: ಬೆಂಗಳೂರು ನೈಋತ್ಯ ರೈಲ್ವೇ ವಿಭಾಗದಲ್ಲಿ 2023ರಲ್ಲಿ 40 ಹಾಗೂ 2024ರ ಮಾರ್ಚ್‌ ವರೆಗೆ 10 ಪ್ರಕರಣ ಸೇರಿದಂತೆ ಒಟ್ಟು 50 ಪ್ರಕರಣಗಳು ವರದಿಯಾಗಿದ್ದು, 59 ಆರೋಪಿ ಗಳನ್ನು ರೈಲ್ವೇ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಬೇರೆ ಭಾಗಕ್ಕೆ ಹೋಗುವ ಮೂರು ವಂದೇ ಭಾರತ್‌ ರೈಲುಗಳ ಮೇಲೆ ಒಂದೂವರೆ ವರ್ಷದಲ್ಲಿ 50 ಬಾರಿ ಕಲ್ಲು ತೂರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ರೈಲುಗಳ ಕಿಟಿಕಿಯ ಗಾಜುಗಳಿಗೆ ಹಾನಿಯಾಗಿದೆ. ಒಂದು ಕಿಟಕಿ ಗಾಜು ಬದಲಾವಣೆಗೆ  15 ರಿಂದ 18 ಸಾವಿರ ವೆಚ್ಚವಾಗುತ್ತದೆ. ಬಾಣಸವಾಡಿಯ ಲೋಕೋಶೆಡ್‌ನ‌ಲ್ಲಿ ದುರಸ್ತಿಕಾರ್ಯ ನಡೆಸಲಾಗುತ್ತದೆ.

ಪತ್ತೆಯೇ ದೊಡ್ಡ ಸವಾಲು: ವಂದೇ ಭಾರತ್‌ ರೈಲುಗಳು ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ಇಂತಹ ಸಂದರ್ಭದಲ್ಲಿ ಕಲ್ಲು ಎಸೆಯುವವರನ್ನು ಪತ್ತೆ ಮಾಡುವುದು ತುಸು ಕಷ್ಟ. ರೈಲು ಒಳಗೆ ಹಾಗೂ ಹೊರಗೆ ಆಳವಡಿಸಲಾದ ಸಿಸಿ ಕ್ಯಾಮೆರಾ ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ಇನ್ನೂ ಕೃತ್ಯ ಎಸಗುವವರಲ್ಲಿ 18ವರ್ಷದೊಳಗಿನ ಮಕ್ಕಳು ಹಾಗೂ ಮದ್ಯ ವ್ಯಸನಿಗಳೇ ಹೆಚ್ಚಿದ್ದಾರೆ. ಇನ್ನೂ ಮಕ್ಕಳು ತಮಾಷೆ ಗಾಗಿ ಕಲ್ಲು ತೂರುವುದನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೇ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಂಡು ಕಲ್ಲೆಸೆಯದಂತೆ ಮನವಿ ಮಾಡಲಾಗುತ್ತಿದ್ದಾರೆ.

ಕಲ್ಲು ಎಸೆಯುವ ನಗರದ ಪ್ರಮುಖ ಸ್ಥಳಗಳು ಇವು :

Advertisement

ಬೆಂಗಳೂರಿನ ಬಾಣಸವಾಡಿ, ಯಶವಂತಪುರ, ಕೊಡಿಗೇಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಹೊಸೂರು, ದಂಡು ನಿಲ್ದಾಣದವರೆಗಿನ ಕೆಲ ಸ್ಥಳಗಳನ್ನು ಕಲ್ಲು ಎಸೆಯುವ ಬ್ಲಾಕ್‌ಸ್ಪಾಟ್‌ಗಳಾಗಿ ಗುರುತಿಸಲಾಗಿದೆ. ಈ ಮಾರ್ಗದ ಜನವಸತಿ ಸ್ಥಳಕ್ಕೆ ತೆರಳಿ ಕಲ್ಲ ಎಸೆಯುವವರ ಕುರಿತು ರೈಲ್ವೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಇನ್ನೂ ಅಪರಾಧಿಗಳಿಗೆ ರೈಲ್ವೆ ಹಳಿಯಲ್ಲಿ ಅತಿಕ್ರಮಣ ಸೆಕ್ಷನ್‌ 147 ಮತ್ತು ಉದ್ದೇಶ ಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯ ಉಂಟು ಮಾಡುವುದು ಸೆಕ್ಷನ್‌ 153ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಅಪರಾಧ ಸಾಬೀತಾದರೆ 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್‌ ಅಪರಾಧವಾಗಿದೆ. ರೈಲ್ವೆ ಪೋಲಿಸ್‌ ಅಧಿಕಾರಿಗಳು ವಾರಕ್ಕೊಮ್ಮೆ ಗುರುತಿಸಲಾದ ಬ್ಲ್ಯಾಕ್‌ ಸ್ಪಾರ್ಟ್‌ಗಳಿಗೆ ತೆರಳಿ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ. -ತ್ರಿನೇತ್ರಾ, ಹೆಚ್ಚುವರಿ ವ್ಯವಸ್ಥಾಪಕ, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next