Advertisement

ವಂದೇ ಭಾರತ ರೈಲಿಗೆ ವರ್ಷ ಪೂರ್ಣ; 92 ಕೋಟಿ ರೂ. ಗಳಿಕೆ

08:40 AM Feb 20, 2020 | Hari Prasad |

ಹೊಸದಿಲ್ಲಿ: ಮೇಕ್‌ ಇನ್‌ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಒಂದು ವರ್ಷ ಸಂದಿವೆ. ಸಂಪೂರ್ಣ ಸ್ವದೇಶಿ ಖ್ಯಾತಿಯ ಈ ರೈಲು ದಿಲ್ಲಿ-ವಾರಣಾಸಿ ನಡುವೆ ಸಂಚರಿಸುತ್ತಿದೆ. ಶತಾಬ್ಧಿ ಎಕ್ಸ್‌ಪ್ರೆಸ್‌ ಬದಲು ಹಳಿಗೆ ಇಳಿದಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಈಗಾಗಲೇ 3.8 ಲಕ್ಷ ಕಿ.ಮೀ. ಸಂಚಾರ ನಡೆಸಿದೆ. ಇದರಿಂದ 92.29 ಕೋಟಿ ರೂ. ಸಂಪಾದಿಸಿದೆ.

Advertisement

ಈ ರೈಲು ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ಇತರ ದಿನಗಳಲ್ಲಿ ಓಡಾಡುತ್ತಿದ್ದು, ದಿಲ್ಲಿಯಿಂದ ವಾರಾಣಸಿಗೆ 8 ಗಂಟೆಯ ಪ್ರಯಾಣಾವಧಿ ಹೊಂದಿದೆ. ಇದು 16 ಎಸಿ ಬೋಗಿಗಳನ್ನು ಹೊಂದಿದ್ದು, ಅಟೋಮೆಟಿಕ್‌ ಡೋರ್‌ಗಳು, ಸ್ಲೈಡಿಂಗ್‌ ಡೋರ್‌ಗಳನ್ನು ಹೊಂದಿದೆ. ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಪ್ರತಿ ಕೋಚ್‌ನಲ್ಲಿ ಜಿಪಿಎಸ್‌ ತಂತ್ರಜ್ಞಾನ, ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ ಮನರಂಜನೆಗೆ ಬೇಕಾದ ವ್ಯವಸ್ಥೆ, ಹೊಸ ತಂತ್ರಜ್ಞಾನದ ಮೊಬೈಲ್‌ ಚಾರ್ಜಿಂಗ್‌ ಆಯ್ಕೆಗಳು ಇದರಲ್ಲಿದೆ.

ಸಾಮಾನ್ಯ ರೈಲಿನ ಒಂದು ಬೋಗಿಗಳಲ್ಲಿ 78 ಆಸನಗಳ ವ್ಯಸಸ್ಥೆಗಳಿದ್ದರೆ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ 52 ಸುಖಾಸನ ಸೀಟುಗಳನ್ನು ನೀಡಲಾಗಿದೆ. ಅದೇ ರೀತಿ ಟ್ರೈನ್‌ನ ನಡುವೆ ಎರಡು ಎಕ್ಸಿಕ್ಯೂಟಿವ್‌ ಕಂಪಾರ್ಟ್ಮೆಂಟ್‌ ಇದೆ.

ಭಾರತದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಟ್ರೈನ್‌ ಅನ್ನು ಖರೀದಿಸಲು ಪೆರು, ಇಂಡೋನೇಷ್ಯಾ, ಸಿಂಗಾಪುರ್‌, ಮಲೇಷ್ಯಾ ಮತ್ತು ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ಆಸಕ್ತಿವಹಿಸಿದೆ ಎಂದು ರೈಲ್ವೇ ಮಂಡಳಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next