Advertisement
ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ಮೊದಲ ಹಂತದಲ್ಲಿ ಉನ್ನತಿಗೇರಿಸಲಾಗುತ್ತದೆ. ಇಲ್ಲಿನ “ಡ್ರೈವಿಂಗ್ ಟೆಸ್ಟ್ ಯಾರ್ಡ್’ ಸಂಪೂರ್ಣ ಕಲ್ಲು- ಜಲ್ಲಿ- ಮಣ್ಣಿನಿಂದ ತುಂಬಿದ್ದು, ಮೊದಲ ಬಾರಿಗೆ ಪರೀಕ್ಷೆ ಎದುರಿಸುವವರಿಗೆ ಕಷ್ಟವಾಗುತ್ತಿದೆ ಎಂಬ ಕಾರಣದಿಂದ ಯಾರ್ಡ್‌ನ ಸೀಮಿತ ಭಾಗಕ್ಕೆ ಇಂಟರ್ ಲಾಕ್ ಅಳವಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ಚಾಲನಾ ಪರವಾನಿಗೆ ಪಡೆಯಲು ಬರುವವರಿಗೆ ಆರಾಮವಾಗಿ ಟೆಸ್ಟ್ ಕೊಡಲು ಸಾಧ್ಯವಾಗಬಹುದು.
ಬದಿಗಳಲ್ಲಿ ಕಾಂಪೌಂಡ್ ನಿರ್ಮಿಸಲು ಉದ್ದೇಶಿಸಲಾಗಿದೆ. ವಾಮಂಜೂರು ಟ್ರ್ಯಾಕ್‌ಗೂ ಹೈಟೆಕ್ ಸ್ಪರ್ಶ!
ಎರಡನೇ ಹಂತದಲ್ಲಿ ವಾಮಂಜೂರು ಕೇಂದ್ರವನ್ನು ಮತ್ತಷ್ಟು ಸುಸಜ್ಜಿತಗೊಳಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ. 8 ಮಾದರಿಯಲ್ಲಿ ಸುಸಜ್ಜಿತ ಹಾಗೂ ಆಟೋಮೆಟಿಕ್ ರೀತಿಯ ಟ್ರ್ಯಾ ಕ್ ಸಹಿತ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲು
ತೀರ್ಮಾನಿಸಲಾಗಿದೆ. ಅತ್ಯಾಧುನಿಕ ರೀತಿಯ ‘ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾ ಕ್’ ಇಲ್ಲಿ ಬರುವ ಸಾಧ್ಯತೆ ಇದೆ. ಇದು
ಈಡೇರಿದರೆ, “ಡ್ರೈವಿಂಗ್ ಟೆಸ್ಟ್ ಟ್ರ್ಯಾ ಕ್’ನಲ್ಲಿ ಬೈಕ್ ಮತ್ತು ಕಾರುಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳಿರುತ್ತವೆ.
‘ಎಂಟು’ ಆಕಾರ, ‘ಎಸ್’ ಆಕಾರ, ಹಿಂದೆ-ಮುಂದೆ ಚಾಲನೆ ಇತ್ಯಾದಿ ವ್ಯವಸ್ಥೆಗಳಿರುತ್ತವೆ. ಮಳೆಯಿಂದ ತೊಂದರೆಯಾಗದಂತೆ ಟ್ರ್ಯಾಕ್‌ನಲ್ಲಿ 17 ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಡ್ರೈವಿಂಗ್ ಟೆಸ್ಟ್ ಸಂದರ್ಭ ಬೈಕ್ ಅಥವಾ ಕಾರು ಸಮರ್ಪಕ ರೀತಿಯಲ್ಲಿ ಚಾಲನೆ ಮಾಡಿದ್ದರೆ, ಈ ಸೆನ್ಸಾರ್ ಕಂಪ್ಯೂಟರಿಗೆ ಮಾಹಿತಿ ರವಾನಿಸುತ್ತದೆ.
Related Articles
Advertisement
ದಿನಕ್ಕೆ 100 ಜನರುವಾಮಂಜೂರಿನಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನದವರೆಗೆ 100ರಿಂದ 125ರಷ್ಟು ಜನರು ವಾಹನ ಚಾಲನಾ ಪರೀಕ್ಷೆಯಲ್ಲಿ
ಭಾಗವಹಿಸುತ್ತಾರೆ. ಮಂಗಳೂರಿನ ಇನ್ ಸ್ಪೆಕ್ಟರ್ ಸೇರಿದಂತೆ 2-3 ಅಧಿಕಾರಿಗಳು ಇಲ್ಲಿಕಾರ್ಯ ನಿರ್ವಹಿಸುತ್ತಾರೆ. ಈ ಮಧ್ಯೆ, ಸುರತ್ಕಲ್ ಆರ್‌ಟಿಒ ಕಚೇರಿ ಪ್ರತ್ಯೇಕವಾಗಿಆರಂಭಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ವೆಂಬರ್‌ಗಿಂತ ಮೊದಲು ಇದು ತೆರೆದುಕೊಳ್ಳಲಿದೆ. ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯೂ ಇದೇ ಸಮಯದಲ್ಲಿ ಆರಂಭವಾಗಲಿದ್ದು, ಈ ಎರಡೂ ಕೇಂದ್ರಗಳನ್ನು ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರಕ್ಕೆ ಜೋಡಿಸಲು ತೀರ್ಮಾನಿಸಲಾಗಿದೆ. ಶುರುವಾಗದ ‘ಭಾರೀ ವಾಹನಗಳ ತರಬೇತಿ ಸಂಸ್ಥೆ’
ಲಾರಿ, ಬಸ್ಸು ಸೇರಿದಂತೆ ಘನ ವಾಹನಗಳ ತರಬೇತಿಯನ್ನು ಇಲ್ಲಿಯವರೆಗೆ ಖಾಸಗಿಯವರೇ ನೀಡುತ್ತಿದ್ದರು. ಆದರೆ, ಇಲ್ಲಿ ಪಾರದರ್ಶಕತೆಯ ಕೊರತೆ ಕಾಣಿಸುತ್ತಿದ್ದು, ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಮನಗಂಡ ಸರಕಾರ ಸಾರಿಗೆ ಇಲಾಖೆಯ ಮೂಲಕವೇ ಘನ ವಾಹನಗಳ ಚಾಲಕರಿಗೆ ತರಬೇತಿ ನೀಡಲು ನಿರ್ಧರಿಸಿತ್ತು. ಇದಕ್ಕಾಗಿ ಮಂಗಳೂರಿನಲ್ಲಿ ‘ಭಾರೀ ವಾಹನಗಳ ತರಬೇತಿ ಸಂಸ್ಥೆ’ ಆರಂಭಕ್ಕೆ ಸರಕಾರ ಮುಂದಡಿ ಇಟ್ಟಿದೆ. ಸಚಿವ
ಸಂಪುಟದಲ್ಲಿ 15 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಇನ್ನೂ ಈ ಯೋಜನೆ ಆರಂಭ ಹಂತವನ್ನು ಕಂಡಿಲ್ಲ. ನೂತನ ಸಂಸ್ಥೆಯು ನಗರ ಹೊರಭಾಗ ಕೊಣಾಜೆಯ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಸಮೀಪದಲ್ಲಿ ಸ್ಥಾಪನೆಯಾಗಲಿದೆ. ಪಕ್ಕದಲ್ಲೇ ‘ಹೈಟೆಕ್ ಡ್ರೈವಿಂಗ್ ಟೆಸ್ಟ್‌ಟ್ರ್ಯಾಕ್’ ನಿರ್ಮಾಣವಾಗಲಿದ್ದು, ವಾಹನಗಳ
“ಇನ್‌ಸ್ಪೆಕ್ಷನ್ ಟೆಸ್ಟಿಂಗ್ ಸೆಂಟರ್’ ಕೂಡ ಆರಂಭವಾಗಲಿದೆ. ಆದರೆ, ಈ ಮೂರೂ ವ್ಯವಸ್ಥೆಗಳು ಯಾವಾಗ ಆರಂಭವಾಗಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ವಾಮಂಜೂರಿನಲೇ ಡ್ರೈ ವಿಂಗ್ ಟೆಸ್ಟ್..!
ಕೊಣಾಜೆಯಲ್ಲಿ ಸುಸಜ್ಜಿತ ಡ್ರೈವಿಂಗ್ ಟ್ರ್ಯಾ ಕ್ ನಿರ್ಮಾಣಗೊಂಡರೆ, ಮಂಗಳೂರಿನಲ್ಲಿ ಎಲ್‌ಎಲ್‌ಆರ್ (ಕಲಿಕಾ ಚಾಲನಾ ಪರವಾನಿಗೆ) ಪಡೆದು, ಮೊದಲ ಚಾಲನಾ ಪರೀಕ್ಷೆ ನಡೆಸಲು ಕೊಣಾಜೆಗೆ ಹೋಗುವ ಬಗ್ಗೆ ಪ್ರಸ್ತಾವನೆ ಇತ್ತು. ಆದರೆ, ಇದರಲ್ಲಿ ಈಗ ಬದಲಾವಣೆ ಆಗಿದೆ. ಅದರಂತೆ, ಕೊಣಾಜೆಯಲ್ಲಿ ಘನವಾಹನಗಳ ಪರವಾನಿಗೆ ನವೀಕರಣಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮುಂದೆಯೂ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರದಲ್ಲೇ ಟೆಸ್ಟ್ ನಡೆಸಬೇಕಾಗಿದೆ. ಈ ಮಧ್ಯೆ, ಸುರತ್ಕಲ್ ಆರ್‌ಟಿಒ ಕಚೇರಿ ನವೆಂಬರ್ ಒಳಗೆ ಉದ್ಘಾಟನೆಗೊಳ್ಳುವ ಕಾರಣದಿಂದ ಈ ವ್ಯಾಪ್ತಿಯವರೂ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರಕ್ಕೆ ಬಂದು ಟೆಸ್ಟ್ ನೀಡಬೇಕಾಗಿದೆ. ಬಂಟ್ವಾಳದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭವಾಗುತ್ತಿದ್ದು, ಇಲ್ಲಿನವರೂ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರದಲ್ಲೇ ಟೆಸ್ಟ್ ನೀಡಬೇಕಾಗಿದೆ. ಇದರಿಂದ ಹೆಚ್ಚುವ ಒತ್ತಡ ನಿಭಾಯಿಸಲು ವಾಮಂಜೂರು ಟ್ರ್ಯಾಕನ್ನೇ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ
ಕೊಣಾಜೆಯಲ್ಲಿ ‘ಭಾರೀ ವಾಹನಗಳ ತರಬೇತಿ ಸಂಸ್ಥೆ’ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದಕ್ಕೂ ಮೊದಲು ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ‘ಡ್ರೈವಿಂಗ್ ಟೆಸ್ಟ್ ಯಾರ್ಡ್’ಗೆ ಇಂಟರ್‌ಲಾಕ್ ಅಳವಡಿಸಲು ಉದ್ದೇಶಿಸಲಾಗಿದೆ. ಜತೆಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ಶೀಘ್ರದಲ್ಲಿ ಇದರ ಕಾಮಗಾರಿ ನಡೆಯಲಿದೆ.
– ಜಿ.ಎಸ್. ಹೆಗಡೆ, ಉಪ ಸಾರಿಗೆ
ಆಯುಕ್ತರು, ಮಂಗಳೂರು