Advertisement

ವಾಮಂಜೂರು ಸೈಂಟ್ ರೈಮಂಡ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಪ್ರಾರಂಭೋತ್ಸವ

12:16 PM Jun 02, 2019 | Team Udayavani |

ಮಹಾನಗರ: ವಾಮಂಜೂರು ಸೈಂಟ್ ರೈಮಂಡ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2019-20ರ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ 29ರಂದು ಸಂಭ್ರಮದಿಂದ ನಡೆಯಿತು.

Advertisement

ವಿದ್ಯಾರ್ಥಿಗಳನ್ನು ವಾದ್ಯ ಮೇಳದೊಂದಿಗೆ ಶಾಲಾ ಸಭಾಂಗಣಕ್ಕೆ ಸ್ವಾಗತಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಅಧ್ಯಕ್ಷತೆ ವಹಿಸಿದ್ದ ಸಿ| ಸಾಧನಾ ಅವರು ಹೊಸದಾಗಿ ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಹೂವು ನೀಡಿ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣವು ಅತೀ ಅಗತ್ಯ ಎಂದರು.

ಸ್ವಾಗತ ನ್ಯತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳು ತಮ್ಮನ್ನು ಸ್ವಪರಿಚಯಿಸಿದರು.

ವಿದ್ಯಾರ್ಥಿನಿ ಸ್ನೇಹಾ ಅವರು ಶಾಲಾ ಶಿಕ್ಷಣದ ಬಗ್ಗೆ ತನ್ನ ಅನಿಸಿಕೆಯನ್ನು ಹೇಳಿದರು. ಶಿಕ್ಷಕಿ ಜೂಲಿಯೆಟ್ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next