Advertisement

ಕಲ್ಲು ತುಂಬಿದ ಲಾರಿಗಳಿಂದ ಹದಗೆಟ್ಟಿದೆ ವಾಲ್ತಾಜೆ ರಸ್ತೆ

03:51 PM Jun 19, 2018 | |

ನಿಡ್ಪಳ್ಳಿ: ಇಲ್ಲಿಯ ಶಾಂತಾದುರ್ಗಾ ದೇವಾಲಯದ ಬಳಿಯಿಂದ ವಾಲ್ತಾಜೆಗಾಗಿ ಬಡಗನ್ನೂರಿನ ತಲೆಂಜಿ ಸಂಪರ್ಕಿಸುವ ಪಂಚಾಯತ್‌ ರಸ್ತೆ ತೀರಾ ಹದಗೆಟ್ಟಿದ್ದು, ಕೆಸರುಮಯವಾಗಿ ಸಂಚರಿಸಲು ಅಸಾಧ್ಯವಾದ ಸ್ಥಿತಿಗೆ
ತಲುಪಿದೆ.

Advertisement

ಡೊಂಬಟೆಬರಿ ಕಾಲನಿಯಿಂದ ಮುಂದೆ ವಾಲ್ತಾಜೆಯಲ್ಲಿ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ನಿಲ್ಲುತ್ತದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾದರೆ, ಪಾದಚಾರಿಗಳಿಗೂ ನಡೆದಾಡದ ಸ್ಥಿತಿಯಿದೆ. ಶಾಲಾ ಮಕ್ಕಳಿಗೂ ಬಹಳ ತೊಂದರೆಯಾಗುತ್ತಿದೆ. ಪಂಚಾಯತ್‌ನಲ್ಲಿ ಈ ಬಗ್ಗೆ ತಿಳಿಸಿದರೂ ಗಮನ ನೀಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲ್ಲಿನ ಲಾರಿಗಳ ಸಂಚಾರ
ಈ ಪರಿಸರದಲ್ಲಿ ಕೆಂಪು ಕಲ್ಲಿನ ಕೊರೆಗಳು ಇಡೀ ವರ್ಷ ಕಾರ್ಯಾಚರಿಸುತ್ತಿದ್ದು, ಕಲ್ಲು ಹೊತ್ತ ಲಾರಿಗಳು ಈ ಕಚ್ಚಾ ರಸ್ತೆಯಲ್ಲಿ ಸಂಚರಿಸುತ್ತವೆ. ಘನ ಭಾರ ಹೊತ್ತ ಲಾರಿಗಳು ಚಲಿಸುತ್ತಿರುವುದರಿಂದ ಮಳೆಗಾಳದಲ್ಲಿ ರಸ್ತೆಗಳು ಹಾಳಾಗುತ್ತಿವೆ. ಇಡೀ ವರ್ಷ ಲಾರಿ ಸಂಚರಿಸಿದರೂ ರಸ್ತೆ ಹಾಳಾದರೆ ದುರಸ್ತಿಗೆ ಮುಂದಾಗುತ್ತಿಲ್ಲ. ಕಲ್ಲಿನ ಲಾರಿಗಳ ಸಂಚಾರದಿಂದಲೇ ರಸ್ತೆಗಳು ಹಾಳಾಗುತ್ತಿದ್ದು, ಮಳೆಗಾಳದಲ್ಲಿ ಆದರೂ ಸಂಚಾರ ತಡೆಹಿಡಿದರೆ ರಸ್ತೆ ಉಳಿದೀತು.
ಅಧಿಕಾರಿಗಳು ಎಚ್ಚೆತ್ತು, ಮಳೆಗಾಲದಲ್ಲಿ ಕಲ್ಲು ಹೊತ್ತ ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದುರಸ್ತಿಗೆ ಕ್ರಮ ಕೈಗೊಳ್ಳಿ
ಮಳೆಗಾಲ ಆರಂಭವಾದ ನಂತರ ಈ ರಸ್ತೆಯಲ್ಲಿ ಸಂಚರಿಸಲು ತುಂಬಾ ತೊಂರೆಯಾಗುತ್ತಿದೆ. ಇದಕ್ಕೆ ಕಲ್ಲು ಹೊತ್ತ ಲಾರಿಗಳ ಸಂಚಾರವೇ ಮುಖ್ಯ ಕಾರಣವಾಗಿದೆ. ಕೆಸರುಮಯ ರಸ್ತೆಯಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ. ಹಳ್ಳಿ ಜನರ ನೋವು ಯಾರಿಗೂ ಅರ್ಥವಾಗುವುದಿಲ್ಲವೇ?
 - ಸುಧಾಕರ ವಾಲ್ತಾಜೆ,
    ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next