Advertisement

ವಾಲ್ಮೀಕಿ, ಪಟೇಲ್ ಜಯಂತಿ ಆಚರಣೆ

04:51 PM Nov 01, 2020 | Suhan S |

ರಾಮನಗರ: ರಾಮಾಯಣ ಮಹಾ ಕಾವ್ಯದ ಕರ್ತೃ, ಆದಿ ಕವಿ ಮಹರ್ಷಿ ವಾಲ್ಮೀಕಿ ಹಾಗೂ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯ್‌ ಪಟೇಲಗ  ಪ್ರಾತಃಸ್ಮರಣೀಯರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲು ವಾಡಿ ದೇವರಾಜು ಹೇಳಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಸರ್ದಾರ್‌ ಪಟೇಲ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಆದಿಕವಿ ವಾಲ್ಮೀಕಿ ಅವರ ವ್ಯಕ್ತಿತ್ವ ಹಾಗೂ ವಿಚಾರಗಳನ್ನು ರಾಷ್ಟ್ರಕವಿ ಕುವೆಂಪು ಸೇರಿ ದಂತೆ ಕನ್ನಡದ ಬಹುತೇಕ ಕವಿಗಳು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಹಾಗೂ ಭಾರತ ಏಕೀಕರಣದ ಶಿಲ್ಪಿ ಸರ್ದಾರ್‌ ಪಟೇಲರನ್ನು ದೇಶ ಹೆಮ್ಮೆಯಿಂದ ಸ್ಮರಿಸುತ್ತದೆ ಎಂದರು. ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ ಮಾತನಾಡಿ, ವಾಲ್ಮೀಕಿ ಮಹಾಕವಿ ಕ್ರಿಸ್ತಪೂರ್ವ 500 ರಲ್ಲಿ ರಚಿಸಿದ ರಾಮಾಯಣ ಮಹಾವ್ಯ ಇಂದಿಗೂ ಭಾರತೀಯರಿಗೆ ಸ್ಫೂರ್ತಿ ಹಾಗೂ ಭಕ್ತಿಯ ಸಂಕೇತವಾಗಿದೆ. ಅದೇ ರೀತಿ 500 ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಿಸಿದ ಹೆಗ್ಗಳಿ ಕೆಯುಳ್ಳ ಸರ್ದಾರ್‌ ವಲ್ಲಭಭಾಯ್ ಪಟೇಲರು ಏಕತೆಯ ಸಂಕೇತವಾಗಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್‌ ಚಂದ್ರಶೇಖರ ರೆಡ್ಡಿ, ನಗರ ಮಂಡಲ ಕಾರ್ಯದರ್ಶಿ ಜೆ.ದರ್ಶನ್‌, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ವಾಲ್ಮೀಕಿ ತತ್ವಾದರ್ಶ ಅಳವಡಿಸಿಕೊಳ್ಳಿ :

Advertisement

ಚನ್ನಪಟ್ಟಣ: ರಾಮಾಯಣದಂತಹ ಮಹಾ ಕಾವ್ಯವನ್ನು ನೀಡಿದ ಮಹಾಕವಿ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ದಂಡಾಧಿಕಾರಿ ನಾಗೇಶ್‌ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಬೇಟೆಗಾರನಾಗಿ ದರೋಡೆ ಮಾಡಿಕೊಂಡು ಸಮಾಜದ ಕಂಟಕನಾಗಿದ್ದ ವಾಲ್ಮೀಕಿ ಅವರ ಜೀವನ ಬದಲಾಯಿಸಿದ ನಾರದ ಮುನಿಗಳು ಪ್ರಪಂಚದ ಶ್ರೇಷ್ಠ ಕಾವ್ಯ ರಾಮಾಯಣ ರಚಿಸಲು ಕಾರಣರಾದರು ಎಂದರು.

ದಲಿತ ಹಿರಿಯ ಮುಖಂಡ ಕೋಟೆ ಸಿದ್ದರಾಮಯ್ಯ, ಯುವ ಮುಖಂಡ ವಂದಾರಗುಪ್ಪೆ ರಾಜೇಶ್‌ ಮಾತನಾಡಿದರು. ಸಮಾಜ ಕಲ್ಯಾಣಾಧಿಕಾರಿ ಸರೋಜಮ್ಮ, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಶಿವಣ್ಣ, ಶಿಕ್ಷಣ ಸಂಯೋಜಕರಾದ ಗಂಗಾಧರ್‌, ಪ್ರಶಾಂತ್‌, ದಲಿತ ಹಿರಿಯ ಮುಖಂಡರಾದ ನೀಲಸಂದ್ರ ಸದಾನಂದ, ಅಪ್ಪಗೆರೆ ಶ್ರೀನಿವಾಸ್‌, ವೆಂಕಟೇಶ್‌ (ಶೇಠು) ಚಕ್ಕಲೂರು ಚೌಡಯ್ಯ, ಶಾಸಕರ ಆಪ್ತ ಸಹಾಯಕ ಕೆಂಚೇ ಗೌಡ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಜಯರಾಮು, ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ, ವೇದಮೂರ್ತಿ, ಹರೀಶ್‌, ರಮೇಶ್‌, ಚಂದ್ರಕುಮಾರ್‌ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next