Advertisement

ಮೀಸಲಾತಿಗಾಗಿ ಇಂದಿನಿಂದ ವಾಲ್ಮೀಕಿ ಶ್ರೀ ಏಕಾಂಗಿ ಧರಣಿ

11:52 AM Feb 10, 2022 | Team Udayavani |

ಹರಿಹರ: ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಫೆ.10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏಕಾಂಗಿಯಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ.

Advertisement

ಗುರುಪೀಠದ ಆವರಣದಲ್ಲಿ ಬುಧವಾರ ನಡೆದ ಶ್ರೀಮಠದ 24ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ ಗದ್ದುಗೆ ಪೂಜೆ ಮತ್ತು ಸರಳ ರಥೋತ್ಸವ ನಂತರ ಆಯೋಜಿಸಿದ್ದ
ರಾಜ್ಯಮಟ್ಟದ ಸಭೆಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಬಿಜೆಪಿ ಸರ್ಕಾರ ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವ ವಿಷಯದಲ್ಲಿ ಉದ್ದೇಶಪೂರ್ವಕವಾಗಿಯೇ ಕಾಲಹರಣ ಮಾಡುತ್ತಿದೆ. ಮೀಸಲಾತಿ ಹೆಚ್ಚಳ ಕುರಿತು ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದೆ.

ಮೀಸಲಾತಿ ಹೆಚ್ಚಳದ ಪರಿಶೀಲನೆಗೆಂದು ಸರ್ಕಾರ ಮೊದಲು ನ್ಯಾ| ನಾಗಮೋಹನ ದಾಸ್‌ ಸಮಿತಿ ರಚಿಸಿತು. ನಂತರ ಸಮಿತಿ ವರದಿ ಜಾರಿಗಾಗಿ ಉಪ ಸಮಿತಿ ರಚಿಸಿತು. ಈಗ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಕಾಲಹರಣ ಮಾಡುತ್ತಿದೆ.

ಸರ್ಕಾರಗಳ ಧೋರಣೆಯಿಂದ ನಾಯಕ ಸಮಾಜಕ್ಕೆ ಶೇ.7.5 ಮೀಸಲಾತಿ ಕನಸಾಗಿಯೇ ಉಳಿಯುತ್ತಿದೆ. ನ್ಯಾಯಯುತ ಮೀಸಲಾತಿಗಾಗಿ ನಾವು ನಿಷ್ಠುರತೆಯಿಂದ ಹೋರಾಡಬೇಕಾದ
ಅನಿವಾರ್ಯತೆ ಎದುರಾಗಿದೆ ಎಂದರು. ಈಗಿನ ಶೇ.3ರ ಮೀಸಲಾತಿ ಹಲವು ದಶಕಗಳ ಹಿಂದಿನ ಜನಗಣತಿ ಆಧರಿಸಿದ್ದು. ಪ್ರಸ್ತುತ ಜನಗಣತಿ ಪ್ರಕಾರ ಎಸ್‌ಟಿ ಮೀಸಲು ಪ್ರಮಾಣವನ್ನು
ಶೇ.8.5 ಅಥವಾ ಶೇ.9ರಷ್ಟು ನಿಗದಿ ಮಾಡಬೇಕಾಗುತ್ತದೆ. ಮೀಸಲಾತಿ ಎನ್ನುವುದು ಆರ್ಥಿಕ ಮಾನದಂಡವಲ್ಲ.

ಅದೊಂದು ಸಾಮಾಜಿಕ ನ್ಯಾಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಮಾಜದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಸಂವಿಧಾನಬದ್ಧ ಮೀಸಲು ಕೊಡಿಸಬೇಕಿದೆ. ಮಹರ್ಷಿ
ವಾಲ್ಮೀಕಿ ಹಾಗೂ ಡಾ| ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿ ನಾನು ಏಕಾಂಗಿಯಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇನೆ. ರಾಜ್ಯದ ಯಾವ ಜಿಲ್ಲೆಯಿಂದಲೂ ಸಮುದಾಯದವರು ಧರಣಿ ಸ್ಥಳಕ್ಕೆ ಬರಬಾರದೆಂದು ಸೂಚನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next