Advertisement
ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ 85 ಕೋಟಿ ರೂ.ಗೂ ಅಧಿಕ ಅಕ್ರಮ ಹಣ ವರ್ಗಾವಣೆ ಪ್ರಕರಣವು ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಯಿಂದಾಗಿ ಹೊರ ಬಂದಿತ್ತು. ಅವರ ಡೆತ್‌ನೋಟ್‌ನಲ್ಲಿ ನಿಗಮದ ಎಂಡಿ, ಅಕೌಂಟ್ ಆಫೀಸರ್, ಬ್ಯಾಂಕ್ ಅಧಿಕಾರಿಗಳು, ಸಚಿವ ರಾದ ಎಚ್.ಸಿ.ಮಹದೇವಪ್ಪ ಮತ್ತು ಬಿ.ನಾಗೇಂದ್ರ ಅವರ ಖಾತೆಯನ್ನು ಉಲ್ಲೇಖೀಸಿತ್ತಲ್ಲದೆ, ಸಚಿವರ ಮೌಖೀಕ ಆದೇಶ ಮೇರೆಗೆ ಈ ಕೃತ್ಯ ಎಸಗಿರುವುದಾಗಿಯೂ ಇತ್ತು.
ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾ ಕರ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನಕ್ಕೆ ಒಳಪಡುವ ಎಲ್ಲ 19 ನಿಗಮ, ಮಂಡಳಿಗಳ ಹೆಸರಿ ನಲ್ಲಿ ಹೊಸದಾಗಿ ಪ್ರಧಾನ ಲೆಕ್ಕಶೀರ್ಷಿಕೆಯಡಿ ಪ್ರತ್ಯೇಕವಾಗಿ ಠೇವಣಿ ಖಾತೆಗಳನ್ನು ಸಂಬಂಧಿಸಿದ ಖಜಾನೆಯಲ್ಲಿ ತೆರೆಯಲು ಸರಕಾರವು ಮಂಜೂ ರಾತಿ ನೀಡಿದೆ. ಠೇವಣಿ ಖಾತೆಗಳನ್ನು ನಿರ್ವಹಿಸಲು ಖಜಾನೆ ಯೇತರ ಡಿಡಿಒ ಕೋಡ್ ನೀಡಬೇಕೆಂದೂ ಆದೇಶಿಸಿತ್ತು. ಅದರಿಂದಲೇ ಯೋಜನೆ, ಕಾಮಗಾರಿಗೆ ಸಂಬಂಧಿಸಿದ ಅನುದಾನವನ್ನು ವಿನಿ ಯೋಗಿಸಿ ಅನುಷ್ಠಾನ ಗೊಳಿಸುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಚಾಲ್ತಿ ಖಾತೆಯಲ್ಲಿರುವ ಅಷ್ಟೂ ಹಣವನ್ನು ಠೇವಣಿ ಖಾತೆಗೆ ವರ್ಗಾಯಿಸಿ ಬ್ಯಾಂಕ್‌ನಿಂದ ದೃಢೀಕರಣ ಪಡೆಯು ವಂತೆಯೂ ತಿಳಿಸಿತ್ತು. ಅದರ ವರದಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸದಿದ್ದರೆ ಎಂಡಿಗಳನ್ನೇ ಹೊಣೆ ಮಾಡುವುದಾಗಿ 2023ರಲ್ಲೇ ಸೂಚಿಸಿತ್ತು.
Related Articles
Advertisement
ಬ್ಯಾಂಕ್, ಸಹಕಾರ ಸಂಘ, ಐಟಿ ಕಂಪೆನಿಗಳಿಗೆ ಹಣಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ವಸಂತನಗರದಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ 187.33 ಕೋಟಿ ರೂ. ಇಟ್ಟಿತ್ತು. ಸರಕಾರದ ಅನುಮತಿ ಇಲ್ಲದೆ, ಎಂ.ಜಿ. ರಸ್ತೆಯ ಶಾಖೆಯಲ್ಲಿ ಉಪಖಾತೆಯನ್ನು ತೆರೆದು ಅಷ್ಟೂ ಹಣವನ್ನು ಅಲ್ಲಿ ಜಮೆ ಮಾಡಲಾಗಿತ್ತು. ಬಳಿಕ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್‌ನಿಂದ 88.62 ಕೋಟಿ ರೂ.ಗಳು ನಿಗಮ ಎಂಡಿ ಮತ್ತು ಲೆಕ್ಕಾಧಿಕಾರಿ ಸಹಿ ಇರುವ ಚೆಕ್ ಹಾಗೂ ಆರ್‌ಟಿಜಿಎಸ್ ಪತ್ರ ಆಧರಿಸಿ 14 ಅನಾಮಧೇಯ ಖಾತೆಗಳಿಗೆ ವರ್ಗಾವಣೆ ಆಗಿದೆ. ಮೇ 22ರಂದು ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದ್ದು, ಸ್ಕ್ಯಾನ್ ಮಾಡಿದ ಸಹಿಯನ್ನು ಯಾವುದೇ ಪರಿಶೀಲನೆ ಇಲ್ಲದೆ ಬಿಡುಗಡೆ ಮಾಡಿರುವುದು ಪತ್ತೆಯಾಗಿದೆ. ಈ ಹಣ ವರ್ಗಾವಣೆ ಆಗಿರುವ ಸಂದೇಶವು ನಿಗಮದ ಎಂಡಿಯ ಅಧಿಕೃತ ಮೊಬೈಲ್ ಸಂಖ್ಯೆಗಾಗಲೀ, ಇ-ಮೇಲ್ ವಿಳಾಸಕ್ಕಾಗಲೀ ಬಂದಿಲ್ಲ. ಆದರೆ ಈ ಬಗ್ಗೆ ಬ್ಯಾಂಕ್‌ನ ಉಪಪ್ರಧಾನ ವ್ಯವಸ್ಥಾಪಕರನ್ನು ವಿಚಾರಿಸಿದಾಗ ರತ್ನಾಕರ್ ಬ್ಯಾಂಕ್‌ಗೆ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದ್ದು, ಆ ಬ್ಯಾಂಕಿನವರನ್ನು ವಿಚಾರಿಸಿದಾಗ 14 ವರ್ಚುವಲ್ ಬ್ಯಾಂಕ್ ಖಾತೆಗಳ ಮೂಲಕ ಪ್ರಸಿದ್ಧ ಐಟಿ ಕಂಪೆನಿಗಳು ಹಾಗೂ ಹೈದರಾಬಾದ್‌ನಲ್ಲಿರುವ ಸಹಕಾರ ಸಂಘದ ಖಾತೆಗೆ ತಲುಪಿದೆ. ಈ ಬಗ್ಗೆ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರಿಂದ ಉತ್ತರ ಕೇಳಿದ ಬೆನ್ನಲ್ಲೇ ಅವರ ಆತ್ಮಹತ್ಯೆ ನಡೆದಿತ್ತು. ಏನಿದು ಪ್ರಕರಣ?
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಮೇ 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 87 ಕೋ. ರೂ.ಗಳನ್ನು ಸಚಿವರ ಮೌಖೀಕ ಆದೇಶದಂತೆ ಬೇರೆ ಖಾತೆಗಳಿಗೆ ವರ್ಗಾಯಿಸ ಲಾಗಿದೆ. ಇದಕ್ಕೆ ತಾನು ಬಾಧ್ಯಸ್ಥ ನಲ್ಲ ಎಂದು ಮರಣಪತ್ರದಲ್ಲಿ ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಸಚಿವ ನಾಗೇಂದ್ರ
ರಾಜೀನಾಮೆ ನೀಡಬೇಕು
ವಾಲ್ಮೀಕಿ ಅಭಿವೃದ್ಧಿ ನಿಗಮದ ಅ ಧಿಕಾರಿ ಆತ್ಮಹತ್ಯೆ ಅಹಿತಕರ ಘಟನೆ. ಅವರು ಯಾರ್ಯಾರ ಹೆಸರು ಬರೆದಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟು ಅವರ ಗೌರವವನ್ನು ಉಳಿಸಿಕೊಳ್ಳಬೇಕು.
-ಬಿ.ಎಸ್.ಯಡಿಯೂರಪ್ಪ,
ಮಾಜಿ ಮುಖ್ಯಮಂತ್ರಿ