Advertisement
ನಗರದ ಮಂತ್ರಾಲಯ ರಸ್ತೆಯಲ್ಲಿ ದದ್ದಲ್ ತಮ್ಮ ಆಪ್ತ ಶಿವಪ್ಪ ನಾಯಕ ಅವರ ಕಾರಿನಲ್ಲಿ ಮಂತ್ರಾಲಯದ ಕಡೆಗೆ ಹೋಗುವ ವೀಡಿಯೋ ತುಣುಕು ಹರಿದಾಡುತ್ತಿದೆ. ಶನಿವಾರ ತಡರಾತ್ರಿ ದದ್ದಲ್ ಮನೆಗೆ ಬಂದಿದ್ದು, ರವಿವಾರ ಬೆಳಗ್ಗೆ ವಾಪಸ್ ತೆರಳಿದ್ದಾರೆ ಎನ್ನಲಾಗುತ್ತಿದೆ. ಅವರು ಬಳಸುತ್ತಿದ್ದ ಕಾರು ಬಿಟ್ಟು ಬೇರೆ ಕಾರಿನಲ್ಲಿ ಹೋಗಿದ್ದಾರೆ. ಆದರೆ ಈ ಬಗ್ಗೆ ಅವರ ಆಪ್ತರು ಗುಟ್ಟು ಬಿಟ್ಟು ಕೊಡುತ್ತಿಲ್ಲ.
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದಲ್ಲಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್‌ಗೆ ನಿಗಮದ ದುಡ್ಡು ಹೋಗಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಸುಳಿವು ಸಿಕ್ಕಿದೆ ಎನ್ನಲಾಗಿದ್ದು, ವಶಕ್ಕೆ ಪಡೆದು ಇಲ್ಲವೇ ಬಂಧಿಸಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇ.ಡಿ. ಅಧಿಕಾರಿಗಳು ತಮ್ಮ ಹಿಂದೆ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ದದ್ದಲ್ ಧಾರ್ಮಿಕ ಕೇಂದ್ರಗಳಿಗೆ ಸುತ್ತಾಡುತ್ತಾ ಕಣ್ತಪ್ಪಿಸಿ ಒಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದದ್ದಲ್ ನಡೆ ಅನುಮಾನಕ್ಕೀಡು ಮಾಡಿದೆ.
Related Articles
ಮತ್ತೂಂದೆಡೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಶಾಸಕ ದದ್ದಲ್‌ಗೆ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಹಾಜರಾಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. ಏಕೆಂದರೆ ಶುಕ್ರವಾರ ಎಸ್‌ಐಟಿ ವಿಚಾರಣೆ ವೇಳೆ ತಮ್ಮನ್ನು ಬಂಧಿಸುವಂತೆ ಎಸ್‌ಐಟಿ ಅಧಿಕಾರಿ ಗಳಿಗೆ ದದ್ದಲ್ ಅವರೇ ಹೇಳಿದ್ದರು ಎನ್ನಲಾಗುತ್ತಿದೆ.
Advertisement
ಕೇಂದ್ರ ಸರಕಾರದ ಅಧೀನದಲ್ಲಿರುವ ಇ.ಡಿ. ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದರೆ ಹಗರಣದ ಇಂಚಿಂಚೂ ಮಾಹಿತಿಯನ್ನು ತಮ್ಮಿಂದ ಜಾಲಾಡಬಹುದು ಎಂಬ ಭೀತಿಯಿಂದ ಎಸ್‌ಐಟಿ ಅಧಿಕಾರಿಗಳ ಬಳಿ ಈ ಹಿಂದೆ ಬಂಧಿಸುವಂತೆ ದುಂಬಾಲು ಬಿದ್ದಿದ್ದರು. ಇದನ್ನು ಕೇಳಿ ಎಸ್‌ಐಟಿ ಅಧಿಕಾರಿಗಳೇ ಒಂದು ಕ್ಷಣ ತಬ್ಬಿಬ್ಟಾಗಿದ್ದರು ಎಂದು ತಿಳಿದು ಬಂದಿದೆ. ಸೋಮವಾರ ಅವರನ್ನು ಎಸ್‌ಐಟಿ ಬಂಧಿಸುತ್ತದೋ ಅಥವಾ ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆಯಲಿ ದ್ದಾರೋ ಎಂಬುದು ಕುತೂಹಲಕ್ಕೀಡು ಮಾಡಿದೆ.