Advertisement
ಬಳ್ಳಾರಿ, ರಾಯಚೂರಿನ ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುದೀರ್ಘ 12 ಗಂಟೆ ಕಾಲ ತಪಾಸಣೆ ನಡೆಸಿದೆ. ಅನಂತರ ಶಾಸಕರ ಆಪ್ತರನ್ನೂ ವಿಚಾರಣೆ ಮಾಡಿ ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.ಬಳ್ಳಾರಿ ನಗರದ ನೆಹರೂ ಕಾಲೋನಿಯ ಶಾಸಕ ನಾಗೇಂದ್ರ ಮನೆಗೆ ಬೆಂಗಳೂರಿನ 8 ಮಂದಿ ಇಡಿ ಅಧಿಕಾರಿಗಳ ತಂಡ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ, ಮನೆಯಲ್ಲಿರುವ ಸಿಬಂದಿ ಮೂಲಕ ಮಾಹಿತಿ ಪಡೆದಿದ್ದಾರೆ.
ಶಾಸಕ ನಾಗೇಂದ್ರ ಆಪ್ತ ಸಹಾಯಕ ಚೇತನ್ ವಿಚಾರಣೆ ಬೆನ್ನಲ್ಲೇ ನಾಗೇಂದ್ರ ಆಪ್ತರಲ್ಲಿ ಆತಂಕ ಹೆಚ್ಚಾಗಿದೆ. ಈ ಪೈಕಿ ಕೆಲ ಆಪ್ತರಿಗೆ ಇಡಿ ಅಧಿಕಾರಿಗಳು ಕರೆ ಮಾಡಿದಾಗ ಅವರು ಬಳ್ಳಾರಿಯಲ್ಲಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನೀವು ಇಲ್ಲಿಗೆ ಬರದಿದ್ದಲ್ಲಿ ನೋಟಿಸ್ ನೀಡಿ ಬೆಂಗಳೂರಿಗೆ ಕರೆಸುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ನಾಗೇಂದ್ರ ಅವರ ಮಾಧ್ಯಮ ಸಲಹೆಗಾರ ಎಸ್. ನಾಗರಾಜ್ ಎನ್ನುವವರನ್ನು ನಿವಾಸಕ್ಕೆ ಕರೆಸಿದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
Related Articles
ಬೆಂಗಳೂರಿನ ಡಾಲರ್ಸ್ ಕಾಲನಿಯ ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾಜಿ ಸಚಿವರು ಬಳಸುತ್ತಿದ್ದ ಮೊಬೈಲ್, ಕೆಲವು ಕಾಗದ ಪತ್ರ, ಅವರ ಬ್ಯಾಂಕ್ ಖಾತೆಗಳ ದಾಖಲೆ ಪಡೆದು ಪರಿಶೀಲಿಸಲಾಗಿದೆ. ಅವರಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕಿದ ಇಡಿ ಅಧಿಕಾರಿಗಳು, ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್‌ಗೆ ಅವರನ್ನು ಕರೆದೊಯ್ದು ಬ್ಯಾಂಕ್ ವ್ಯವಹಾರದ ಕುರಿತು ಹೇಳಿಕೆ ಪಡೆದಿದ್ದಾರೆ. ಇನ್ನು ಮಹರ್ಷಿ ವಾಲಿ¾ಕಿ ಅಭಿವೃದ್ದಿ ನಿಗಮದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ.
Advertisement