Advertisement

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ

12:00 PM Oct 12, 2019 | Team Udayavani |

ಅಳ್ನಾವರ: ವಾಲ್ಮೀಕಿ ಜಯಂತಿಯನ್ನು ಅ. 13ರಂದು ಪಟ್ಟಣದಲ್ಲಿ ತಾಲೂಕಾಡಳಿತ ಹಾಗೂ ಪಪಂ ಸಹಯೋಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ತಹಶೀಲ್ದಾರ್‌ ಅಮರೇಶ ಪಮ್ಮಾರ ತಿಳಿಸಿದರು.

Advertisement

ತಾಲೂಕು ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಎಲ್ಲ ಸಮುದಾಯದ ಜನರು ಪಾಲ್ಗೊಳ್ಳಲು ಪ್ರೇರೇಪಿಸುವುದು ಮತ್ತು ಗ್ರಾಮ ಪಂಚಾಯತ ಸದಸ್ಯರ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಿಳಿಸಲು ಅಗತ್ಯ ಕ್ರಮ ಕೈಕೊಳ್ಳಲಾಗಿದೆ. ರವಿವಾರ ಬೆಳಗ್ಗೆ 9:30ಕ್ಕೆ ಪಪಂ ಕಾರ್ಯಾಲಯದಲ್ಲಿ ಜಯಂತ್ಯುತ್ಸವ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಉಪ ತಹಶೀಲ್ದಾರ್‌ ಶಿವಾನಂದ ಹೆಬ್ಬಳ್ಳಿ, ಸಮಾಜದ ಮುಖಂಡ ಯಲ್ಲಪ್ಪ ಹೂಲಿ, ನಾಗೇಂದ್ರ ಕುನ್ನೂರಕರ, ಯಲ್ಲಾರಿ ಹುಬ್ಬಳ್ಳಿಕರ, ಪ್ರವೀಣ ಪವಾರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next