Advertisement

ಶೇ.7 ಮೀಸಲಾತಿ ಸಮಾಜಕ್ಕೆ ದೊಡ್ಡ ಕೊಡುಗೆ

04:31 PM Oct 10, 2022 | Team Udayavani |

ಗುಂಡ್ಲುಪೇಟೆ: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7ಕ್ಕೆ ಏರಿಕೆ ಮಾಡುವ ಮೂಲಕ ಸಮುದಾಯಕ್ಕೆ ಸರ್ಕಾರ ಬಹುದೊಡ್ಡ ಕೊಡುಗೆ ನೀಡಿದೆ. ಇದರಿಂದ ಭವಿಷ್ಯದಲ್ಲಿ ಸಮುದಾಯದ ಜನರು ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶ ಪಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮಾಯಣ ದೇಶದ ದೊಡ್ಡ ಪವಿತ್ರ ಗ್ರಂಥವಾಗಿದ್ದು, ಇದರಲ್ಲಿ ಬರುವ ಪಾತ್ರಗಳನ್ನು ವಾಲ್ಮೀಕಿ ಮಹರ್ಷಿ ವಿಭಿನ್ನವಾಗಿ ಚಿತ್ರಿಸಿದ್ದಾರೆ. ಈ ಕಾರಣ ವಾಲ್ಮೀಕಿಯವರನ್ನು ಪ್ರತಿಯೊಬ್ಬರು ಸ್ಮರಣೆ ಮಾಡಬೇಕು ಎಂದರು.

1 ಕೋಟಿ ವಿಶೇಷ ಅನುದಾನ: ಸಮಾಜದಲ್ಲಿ ಒಳ್ಳೆಯವಿಚಾರಗಳಿಗೆ ಕೊನೆ ಇಲ್ಲ ಎಂಬುದಕ್ಕೆ ರಾಮಾಯಣ ಸಾಕ್ಷಿಯಾಗಿದೆ. ಇದೇ ಕಾರಣಕ್ಕೆ ಪ್ರಸ್ತುತದಲ್ಲೂ ಇದ್ದು, ರಾಮ, ಲಕ್ಷ್ಮಣ, ಸೀತೆ ಇತರ ಪಾತ್ರಗಳು ನಮ್ಮ ಕಣ್ಣಿಗೆ ಕಟ್ಟಿದಂತಿವೆ. ದೇಶದ ಐಕ್ಯತೆ ಸಲುವಾಗಿ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ವಾಲ್ಮೀಕಿಯವರ ಹೆಸರಿನಲ್ಲಿ ಭವನಗಳ ನಿರ್ಮಾಣ ಆಗುತ್ತಿವೆ. ಪ್ರಶಸ್ತಿ ಕೊಡಲಾಗುತ್ತಿದೆ. ಜಯಂತಿ ದಿನ ರಜೆ ಘೋಷಣೆ ಆಗಿದೆ. ಪಟ್ಟಣದ ವಾಲ್ಮೀಕಿ ಭವನ ಪೂರ್ಣಗೊಳಿಸಲು 1 ಕೋಟಿ ವಿಶೇಷ ಅನುದಾನ ಕೊಡಿಸುವ ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಕೊಡುಗೆ: ಪುರಸಭೆ ಅಧ್ಯಕ್ಷ ಪಿ.ಗಿರೀಶ್‌ ಮಾತನಾಡಿ, ಸತತ 35-40 ವರ್ಷದಿಂದ ಮೀಸಲಾತಿ ಹೆಚ್ಚಳಕ್ಕೆ ನಾಯಕ ಸಮುದಾಯ ನಿರಂತವಾಗಿ ಹೋರಾಟ ಮಾಡುತ್ತಲೆ ಬಂದಿದೆ. ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ 246 ದಿನದ ವನವಾಸ ಮಾಡಿದ ಹಿನ್ನಲೆ ಎಸ್ಸಿ, ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳದ ಹೋರಾಟದಲ್ಲಿ ಸಫ‌ಲತೆ ಸಿಕ್ಕಿದೆ. 2010ರಂದು ಶ್ರೀರಾಮುಲು ಅವರ ನಿರಂತರ ಒತ್ತಡ ಪರಿಶ್ರಮದ ಮೇಲೆ ಅಂದು ಬಿ.ಎ.ಯಡಿಯೂರಪ್ಪ ವಾಲ್ಮೀಕಿ ಜಯಂತಿ ಸರ್ಕಾರಿ ರಜೆ ಘೋಷಣೆ ಮಾಡಿದರು. ಜೊತೆಗೆ ಬಿಜೆಪಿ ಸರ್ಕಾರ ಪರಿವಾರ- ತಳವಾರ ವನ್ನು ಎಸ್ಟಿಗೆ ಸೇರಿಸುವ ಮೂಲಕ ಕೊಡುಗೆ ನೀಡಿದೆ ಎಂದರು.

Advertisement

ಈ ಸಂದರ್ಭದಲ್ಲಿ ಎಸ್‌ಎಸ್‌ ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಮುಖ್ಯ ಭಾಷಣಕಾರ ಚಂದ್ರಶೇಖರ್‌, ಅತ್ಯುತ್ತಮ ಶಿಕ್ಷಕ ಸಿದ್ದರಾಜು ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್‌.ಮಲ್ಲೇಶ್‌, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌, ಪುರಸಭೆ ಸದಸ್ಯ ಎನ್‌.ಕುಮಾರ್‌, ಮುಖ್ಯ ಭಾಷಣಕಾರ ಚಂದ್ರಶೇಖರ್‌ ಮಾತನಾಡಿದರು. ತಹಶೀಲ್ದಾರ್‌ ಸಿ.ಜಿ.ರವಿಶಂಕರ್‌, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಎಚ್‌. ಎಂ.ಮಹೇಶ್‌, ಸದಸ್ಯರಾದ ಎನ್‌.ಕುಮಾರ್‌, ಅಣ್ಣಯ್ಯಸ್ವಾಮಿ, ಕುಮಾರ್‌, ಶಶಿಧರ್‌ ಪಿ.ದೀಪು, ನಾಗೇಶ್‌, ವೀಣಾ ಮಂಜುನಾಥ, ಕಿರಣ್‌, ಶ್ರೀನಿವಾಸ ನಾಯಕ(ಕಣ್ಣಪ್ಪ), ಸಿದ್ದಯ್ಯ, ಹನುಮಂತಶೆಟ್ಟಿ, ತಾಪಂ ಇಒ ಜಿ.ಶ್ರೀಕಂಠರಾಜೇ ಅರಸ್‌, ಬಿಇಒಎಸ್‌.ಸಿ.ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪುರಸಭೆ ಸಿಒ ಆರ್‌. ಹೇಮಂತರಾಜು, ಎಸ್ಸಿ ಎಸ್ಟಿ ಹಿತರಕ್ಷಣಾ ಸಮಿತಿ ಬಸವರಾಜು, ಚಿಕ್ಕಾಟಿ ಶಿವಣ್ಣನಾಯಕ, ಗುಂಡ್ಲುಪೇಟೆ ರಾಮು, ಮಾಧು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next