Advertisement

ಸಮಾಜ ಸಂಘಟನೆಗಾಗಿ ವಾಲ್ಮೀಕಿ ಜಾತ್ರೆ ಆಯೋಜನೆ

06:08 AM Jan 25, 2019 | |

ಚನ್ನಗಿರಿ: ರಾಜನಹಳ್ಳಿಯಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷ ಪಿ. ಲೋಹಿತ್‌ ಕುಮಾರ್‌ ಮನವಿ ಮಾಡಿದ್ದಾರೆ.

Advertisement

ತಾಲೂಕಿನ ಹರೋಸಾಗರದಲ್ಲಿ ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ವಾಲ್ಮೀಕಿ ಸಮುದಾಯ ಸಂಘಟನೆ ಸಭೆಯಲ್ಲಿ ಜಾತ್ರಾ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶ ದಲ್ಲಿರುವ ವಾಲ್ಮೀಕಿ ಸಮುದಾಯದವರಿಗೆ ವಾಲ್ಮೀಕಿ ಜಾತ್ರೆ ಕುರಿತು ಜಾಗೃತಿಯನ್ನು ಮೂಡಿಸುವ ಮೂಲಕ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ವಾಲ್ಮೀಕಿ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ಜಾತ್ರೆಯ ಮೂಲಕ ಸಮಾಜವನ್ನು ಸಂಘಟಿಸ ಲಾಗುತ್ತಿದೆ. ಆದ್ದರಿಂದ ಯುವ ಸಮೂಹವು ಜಾತ್ರೆಯ ಕುರಿತು ಅತಿ ಹೆಚ್ಚು ಪ್ರಚಾರವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ರಾಜನಹಳ್ಳಿ ಗುರುಪೀಠದ 21ನೇ ವಾರ್ಷಿಕೋತ್ಸವ, ಲಿಂ| ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಗಳ 12 ನೇ ವರ್ಷದ ಪುಣ್ಯಾರಾಧನೆ ಹಾಗೂ ಪ್ರಸನ್ನಾನಂದ ಸ್ವಾಮೀಜಿಗಳ 11ನೇ ವರ್ಷದ ಪಟ್ಟಾಧಿಕಾರ ಮಹೋತ್ಸವವು ಫೆ. 8 ಮತ್ತು 9 ರಂದು ನಡೆಯಲಿದೆ. ವಾಲ್ಮೀಕಿ ಜಾತ್ರೆಗೆ ಸರ್ವರೂ ತನು-ಮನ-ಧನದಿಂದ ಸಹಕರಿಸಬೇಕು ಎಂದರು.

ನಾವು ನಾಯಕ ಸಮಾಜದವರು ಎಂದು ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ, ಪದವಿ ಪಡೆದು ನೌಕರಿ ಗಿಟ್ಟಿಸಿಕೊಂಡಿದ್ದಾರೆ. ನಮಗಾಗುತ್ತಿರುವ ಅನ್ಯಾಯ ಸರಿಪಡಿಸುವ ದೃಷ್ಟಿಯಿಂದ ಶ್ರೀಮಠದಿಂದ ಪುಸ್ತಕ ನೀಡುತ್ತಿದ್ದು, ಅದರಲ್ಲಿ ಪ್ರತಿಯೊಬ್ಬರ ಹೆಸರು, ತಂದೆ ಹೆಸರು, ಬೆಡಗು, ದೂರವಾಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ತುಂಬಿ ಮರಳಿಸಬೇಕು ಎಂದು ಹೇಳಿದರು.

Advertisement

ಸಮಾಜದ ಮುಖಂಡ ಕೊಂಡದಹಳ್ಳಿ ಜಯ್ಯಣ್ಣ ಮಾತನಾಡಿ, ತಾಲೂಕಿನಲ್ಲಿ ಅತಿಹೆಚ್ಚು ವಾಲ್ಮೀಕಿ ಸಮುದಾಯದವರು ಇದ್ದಾರೆ. ಆದರೆ ಸಂಘಟನೆಯ ಕೊರತೆಯಿಂದ ಶೋಷಿತ ಬದುಕನ್ನು ನಡೆಸುತ್ತಿದ್ದಾರೆ. ಸಮಾಜದ ಜಾಗೃತಿ ಸಂಘಟನೆಗಾಗಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಂಡಿದ್ದು, ಎಲ್ಲರೂ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಾತ್ರಾ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರು ವಾಲ್ಮೀಕಿ ಜಾತ್ರಾ ಪೋಸ್ಟರ್‌ಗಳನ್ನು ಗ್ರಾಮಸ್ಥರೊಂದಿಗೆ ಬಿಡುಗಡೆಗೊಳಿಸಿದರು. ಕತ್ತಲಗೆರೆ, ಕಶೆಟ್ಟೆಹಳ್ಳಿ, ಬೆಳಲಗೆರೆ, ರೆಡ್ಡಿಹಳ್ಳಿ, ಕುರುಬರಹಳ್ಳಿ, ಮರಬನಹಳ್ಳಿ, ಕೋಟೆಹಾಳ್‌, ಬಸವಾಪಟ್ಟಣ, ಚಿರಡೋಣಿ, ಕಂಸಾಗರ, ಕೆಂಗಾಪುರ, ಕಣಿವೆಬಿಳಚಿ, ಸೇವಾನಗರ, ತ್ಯಾವಣಿಗೆ ಗ್ರಾಮಗಳಲ್ಲಿ ಜಾತ್ರೆ ಕುರಿತು ಜಾಗೃತಿ ಮೂಡಿಸಲಾಯಿತು.

ಜಾತ್ರಾ ಸಮಿತಿ ಸದಸ್ಯರಾದ ಚಿಕ್ಕಕೋಗಲೂರು ರಾಜಶೇಖರ್‌, ಹರೋನಹಳ್ಳಿ ಎಚ್.ಅಶೋಕ್‌, ಅಗರಬನ್ನಿಟ್ಟಿ ಕುಬೇರಪ್ಪ, ಬೆಳಲಗೆರೆ ರಂಗನಾಥ್‌, ದೊಡ್ಡೇಶ್‌, ಎಪಿಎಂಸಿ ಸದಸ್ಯ ಜಯ್ಯಪ್ಪ, ಮುಖಂಡರಾದ ಅಖಡದ ರುದ್ರಪ್ಪ, ಉಪನಾಯಕನಹಳ್ಳಿ ಶಿವರಾಜ್‌ಕುಮಾರ್‌, ಹರೋಸಾಗರ ಗ್ರಾಮಸ್ಥರಾದ ಶಿವಪ್ಪ, ರಂಗಪ್ಪ, ವಾಲ್ಮೀಕಿ ಸಂಘದ ಅಧ್ಯಕ್ಷ ಎಸ್‌. ಹರೀಶ್‌, ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ, ಸಿ.ರಮೇಶ್‌ ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next