Advertisement

Valmiki caste; ಕಿಚ್ಚ ಸುದೀಪ್ ಅವರಿಗೆ ಕಿವಿಮಾತು ಹೇಳಿದ ಸಚಿವ ರಾಜಣ್ಣ

07:13 PM Jun 18, 2023 | Team Udayavani |

ದಾವಣಗೆರೆ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ ಇಬ್ಬರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

Advertisement

ಭಾನುವಾರ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋ ಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಇದುವರೆಗೂ ಅರ್ಧಕ್ಕೆ ಅಂತ ಯಾರು ಹೇಳಿಲ್ಲ. ಅದ್ದರಿಂದ ಸಿದ್ದಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಹ ಮುಖ್ಯಮಂತ್ರಿಯಾಗಿ ಐದು ವರ್ಷ ಮುಂದುವರೆಯುತ್ತಾರೆ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.

ಸಿದ್ದರಾಮಯ್ಯ ಸಿಎಂ ಆಗಿ ಮುಂದಿನ ಐದು ವರ್ಷ ಇರುತ್ತಾರೆ. ಅಧಿಕಾರ ಹಂಚಿಕೆ ವಿಚಾರವನ್ನ ಎಐಸಿಸಿ ಚರ್ಚೆ ಮಾಡುತ್ತದೆ. ಜನರ ವಿಶ್ವಾಸ ಏನಿದೆಯೋ ಅದರಂತೆ ನನ್ನ ವಿಶ್ವಾಸವಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಬಡವರ ಕಣ್ಣೀರು ಹೊರೆಸುವ ಕೆಲಸ ಮಾಡುತ್ತಿದ್ದಾರೆ. ಬಡವರು ಅವರ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ನಂಬಿಕೆಗೆ ಅನುಗುಣವಾಗಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುತ್ತಾರೆ. ಹಾಗಾಗಿ ಅಂತವರು ಮುಖ್ಯಮಂತ್ರಿಯಾಗಿ ಹೆಚ್ಚು ಕಾಲ ಇರಬೇಕು ಎನ್ನುವುದು ನಮ್ಮ ಆಸೆ. ಎಐಸಿಸಿಯವರು ನಾಳೆನೇ ಬಿಡಿ ಎಂದರೆ ಸಿದ್ದರಾಮಯ್ಯ ನಾಳೆನೇ ಬಿಡುತ್ತಾರೆ. ಅವರು ಏನು ನಿರ್ಣಯ ತೆಗೆದುಕೊಂಡಿದ್ದಾರೋ ಅದರಂತೆ ನಡೆಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೇಡಿಕೆ ನ್ಯಾಯಸಮ್ಮತವಾದುದು
ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ನ್ಯಾಯಸಮ್ಮತವಾದುದು.ಮಗು ಅತ್ತರೆ ತಾನೇ ತಾಯಿ ಹಾಲು ಕೊಡುವುದು. ಹಾಗೆಯೇ ನ್ಯಾಯಯುತವಾದ ಬೇಡಿಕೆ ಏಕೆ ಕೇಳಬಾರದರು. ಕೇಳುವುದರಲ್ಲಿ ತಪ್ಪೇನಿದೆ ಎಂದು ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಪಡೆದುಕೊಂಡು ಸಮಾಜದ ಬೆಳವಣಿಗೆ ಸಹಕಾರಿ ಆಗಬೇಕು. ಮುಂದಿನ ದಿನಮಾನಗಳಲ್ಲಿ ವಾಲ್ಮೀಕಿ ಸಮುದಾಯದಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತೇವೆ. ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಡೀ ಸಮುದಾಯದ ಮಹಾದಾಸೆಯಾಗಿದೆ. ಹಾಗಂತ ನನಗೇ ಮಾಡಿ ಎಂದು ಕೇಳುತ್ತಿಲ್ಲ. ಸಮಯ ಬಂದಾಗ ಉಪ ಮುಖ್ಯಮಂತ್ರಿ ಸ್ಥಾನಕ್ಕೂ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

Advertisement

ಕಿಚ್ಚನಿಗೆ ಕಿವಿಮಾತು…

ನಟ ಕಿಚ್ಚ ಸುದೀಪ್ ನಮ್ಮ ವಾಲ್ಮೀಕಿ ಸಮಾಜದ ಮೇರು ನಟರು. ಡಾ| ರಾಜ್‌ಕುಮಾರ್ ಅವರು ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು. ಆದರೆ, ರಾಜಕೀಯದಿಂದ ದೂರ ಇದ್ದಿದ್ದಕ್ಕೆ ಅವರನ್ನು ದೇವತಾ ಮನುಷ್ಯ ಎಂದು ಎಲ್ಲ ಸಮುದಾಯದವರು ಗುರುತಿಸುತ್ತಾರೆ. ಸಿನಿಮಾ ನಟರು ರಾಜಕೀಯ ಬರುವುದರಿಂದ ಗೌರವ ಕಡಿಮೆಯಾಗುತ್ತದೆ. ಒಂದು ಸಮುದಾಯದ ಅಭ್ಯರ್ಥಿಗಳ ಪರ ಮತ್ತು ವಿರುದ್ದ ಮಾಡಿದಾಗ. ಅ ಸಮುದಾಯ ದವರೇ ಪರ ಇರುತ್ತಾರೆ. ವಿರುದ್ಧವೂ ಆಗುತ್ತಾರೆ. ಹಾಗಾಗಿ ಅಂತದ್ದಕ್ಕೆ ಅವಕಾಶ ಕೊಡಬೇಡಿ ಎಂದು ಸುದೀಪ್ ಅವರಿಗೆ ಕಿವಿಮಾತು ಹೇಳಿರುವುದಾಗಿ ಸಚಿವ ರಾಜಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next