ಚಿಂಚೋಳಿ: ಪರಿಶಿಷ್ಟ ಜಾತಿ(ಮೀಸಲು) ವಿಧಾನಸಭೆ ಮತಕ್ಷೇತ್ರಕ್ಕೆ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್ ರಮೇಶ ಯಾಕಾಪುರ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೆಂಬಲಿಗರು ಬಸ್ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ದಲಿತ ವಿರೋಧಿ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪ್ರತಿಭಟನೆ ನಡೆಸಿದರು.
ಚಿಂಚೋಳಿ ಮತಕ್ಷೇತ್ರದ ಅನೇಕ ಗ್ರಾಮಗಳಿಂದ ಆಗಮಿಸಿದ ಸಂಜೀವನ್ ಯಾಕಾಪುರ ಬೆಂಬಲಿಗರು ಸುನೀಲ ವಲ್ಯಾಪುರೆ ಹಟಾವೋ ಬಿಜೆಪಿ ಬಚಾವೋ ಎನ್ನುವ ಘೋಷಣೆ ಕೂಗಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಲಿತ ವಿರೋಧಿ ಆಗಿದ್ದಾರೆ. ಜಿಲ್ಲೆಯಲ್ಲಿ ಬಲಗೈ ಸಮುದಾಯಕ್ಕೆ ಸೇರಿದ ಐದು ಲಕ್ಷ ಮತದಾರರಿದ್ದಾರೆ.
ಆದರೂ ಉದ್ದೇಶಪೂರ್ವಕವಾಗಿ ಟಿಕೆಟ್ ನೀಡದೇ ವಂಚಿಸಿದ್ದಾರೆ. ಸುನೀಲ ವಲ್ಯಾಪುರೆ 2008ರಲ್ಲಿ ಮೊದಲ ಸಲ ಚಿಂಚೋಳಿ ಮತಕ್ಷೇತ್ರದಿಂದ ಸ್ಪಧಿ ìಸಿ ಗೆಲುವು ಸಾಧಿ ಸಿದಾಗ ಮತಕ್ಷೇತ್ರವನ್ನು ಅಭಿವೃದ್ಧಿಗೊಳಿಸದೆ ಅನೇಕ ನಿಷ್ಠಾವಂತ ಮೂಲ ಬಿಜೆಪಿ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡಿದ್ದರು.
2013ರಲ್ಲಿ ಕೆಜೆಪಿಯಿಂದ ಸ್ಪ ರ್ಧಿಸಿ ಭಾರಿ ಅಂತರದಲ್ಲಿ ಸೋಲು ಕಂಡಿದ್ದರು. ಈಗ ಮತ್ತೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಯುವ ಮುಖಂಡ ಶರಣು ಮೋತಕಪಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹುಳಗೇರಾ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ,
ಯಡಿಯೂರಪ್ಪ ದಲಿತರ ಮನೆಯಲ್ಲಿ, ಕೊಳಗೇರಿ ನಿವಾಸಿಗಳ ಮನೆಯಲ್ಲಿ ಉಪಹಾರ ಸೇವನೆ ಮಾಡುತ್ತಿರುವುದು ಕೇವಲ ನಾಟಕ ಮಾತ್ರ ಎಂದು ವ್ಯಂಗವಾಡಿದರು. ಪ್ರತಿಭಟನೆಯಲ್ಲಿ ರಮೇಶ ಯಾಕಾಪುರ, ಶರಣಪ್ಪ ತಳವಾರ, ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ರೇವಣಸಿದ್ದಪ್ಪ ಮಜ್ಜಗಿ, ಶ್ರೀಧರ ಪಾಟೀಲ, ಲಾಲಪ್ಪ ಹೋಳ್ಕರ, ವಿಷ್ಣುಕಾಂತ ಮೂಲಗೆ, ರೇವಣಸಿದ್ದ ಬಡಾ ರಟಕಲ್, ಗುರುಲಿಂಗಪ್ಪ ಚಿಟ್ಟಾ, ಯಶವಂತರೆಡ್ಡಿ,
ಸಂತೋಷ ಪಾಟೀಲ ಹಂದ್ರೋಳಿ, ಪ್ರಶಾಂತ ರಾಜಾಪುರ, ಗುರುರಾಜ ಭರತನೂರ, ಮುಕುಂದ ಕೊಡದೂರ, ಶಶಿಕಾಂತ ಆಡಕಿ, ತರುಣಶೇಖರ, ಸಂಗು ಮುನ್ನೋಳಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು. ಕಾಳಗಿ, ಕೊಡದೂರ, ಚಿಮ್ಮನಚೋಡ, ಚಂದನಕೇರಾ, ಕುಂಚಾವರಂ, ಕೋಡ್ಲಿ, ರಟಕಲ್, ಚಿಂಚೋಳಿ, ಹಸರಗುಂಡಗಿ, ಅರಣಕಲ್, ತೆಂಗಳಿ, ಮೋಘಾ ಇನ್ನಿತರ ಗ್ರಾಮಗಳಿಂದ ಬೆಂಬಲಿಗರು ಆಗಮಿಸಿದ್ದರು.