Advertisement

ವಲ್ಲಭಾಪೂರ ಆಂಜನೇಯಸ್ವಾಮಿಗೆ ಯುಗಾದಿ ಹಬ್ಬದ ಮುಳ್ಳು ಕಂಟಿ ಸೇವೆಯ ಪರಾಕಾಷ್ಟೆ ವೈಭವ

06:59 PM Mar 23, 2023 | Team Udayavani |

ಗಂಗಾವತಿ: ಭಾರತೀಯರು ಹಬ್ಬ ಹರುದಿನಗಳ ಮೂಲಕ‌ ಕೌಟುಂಬಿಕ ಸಂತೋಷವನ್ನು ಕಳೆಯುತ್ತಾರೆ. ಯುಗಾದಿ ಹಬ್ಬ ಕರುನಾಡಿನ ಸಾಂಸ್ಕೃತಿಕ ಸೊಬಗನ್ನು ಹರಡುವ ಹಬ್ಬವಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕು ವಲ್ಲಭಾಪೂರ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬವನ್ನು ಸಡಗರದಿಂದ ಸಂಪ್ರದಾಯಿಕವಾಗಿ ಆಚರಣೆ ಮಾಡುತ್ತಾರೆ. ಯುಗಾದಿ ಅಮಾವಾಸ್ಯೆ, ಪಾಡ್ಯ ಮರುದಿನ ಶ್ರೀ ಆಂಜನೇಯ ಸ್ವಾಮಿ ಗೆ ಮುಳ್ಳು ಕಂಟಿ ಸೇವೆ ಸಮರ್ಪಣೆಯನ್ನು ಡೊಳ್ಳು, ತಾಷಾ ಜನಪದ ಮೆರವಣಿಗೆಯ ಮಧ್ಯೆ ಮಾಡಲಾಗುತ್ತದೆ. ಪವಿತ್ರವಾದ ಕಾರಿ ಗಿಡವನ್ನು ಬೇರು‌ ಸಮೇತ ಕಿತ್ತು ಬಂದು ಗ್ರಾಮದ ಮಧ್ಯದಲ್ಲಿ ಮುಳ್ಳಿನ ಕಂಟಿಯನ್ನು ಸಂಗ್ರಹ ಮಾಡಿ ಸುತ್ತಲೂ ಡೊಳ್ಳು ತಾಷಾ ಜನಪದ ಕಲಾ ತಂಡಗಳ ಸದ್ದಿಗೆ ನೆರೆದ ಭಕ್ತರು ಜಾತಿ ಬೇಧ ಮರೆತು ಕುಣಿಯುತ್ತಾರೆ.

Advertisement

ಈ ಮಧ್ಯೆ ದೇವರು ಮೈಯಲ್ಲಿ ಆವಾಹನೆ ಆದವರು ಮುಳ್ಳು ಕಂಟಿಗೆ ಜಿಗಿದು ಪ್ರವೇಶ ಮಾಡುತ್ತಾರೆ. ನೆರೆದ ಜನರು ಆಂಜನೇಯನಿಗೆ ಜೈಕಾರ ಹಾಕಿ ಮುಳ್ಳಿನ ಕಂಟಿಗೆ ಧುಮುಕಿದವರ‌ ಮೇಲೆ ನೀರನ್ನು ಸುರಿದು ಅವರನ್ನು ಎತ್ತಿಕೊಂಡು ಹೋಗಿ ಆಂಜನೇಯನ ದೇವಾಲಯದಲ್ಲಿ ವಿಭೂತಿ ಆದಾರ ಹಚ್ವಿ ಮಲಗಿಸುತ್ತಾರೆ. ಮೆರವಣಿಗೆ ದೇವಾಲಯದ ಹತ್ತಿರ ಬಂದ ತಕ್ಷಣ ಪಟಾಕ್ಷಿ(ಧ್ವಜ) ಹರಾಜು ಮಾಡಿ ಅನ್ಬ ಪ್ರಸಾದ ಸ್ವೀಕರಿಸಿ ಮನೆ ತೆರಳುತ್ತಾರೆ. ಇಡೀ ಗ್ರಾಮವೇ ನಿಂತು ಯುಗಾದಿ ಆಚರಣೆ ಭಾವೈಕ್ಯಯನ್ನು‌ ಸಾರುತ್ತದೆ.

ಇಂತಹ ಹಬ್ಬಗಳನ್ನು ಪ್ರತಿ‌ ಗ್ರಾಮದಲ್ಲಿ ಆಚರಣೆ ಮಾಡುವ ಮೂಲಕ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next