Advertisement

5, 7ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ

02:45 AM Jul 14, 2017 | Harsha Rao |

ಬೆಂಗಳೂರು: ಕಲಿಕಾ ಸಾಮರ್ಥ್ಯ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಸಕ್ತ ವರ್ಷದಿಂದ ಐದು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ಮಾದರಿಯ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ
ಸಚಿವ ತನ್ವೀರ್‌ಸೇಠ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾಲ್ಕು ಮತ್ತು ಆರನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹಾಗೂ ಶಿಕ್ಷಕರ ಬೋಧನಾ ಸಾಮರ್ಥ್ಯದ ಮೌಲ್ಯಮಾಪನ ಮಾಡಲು ಮೌಲ್ಯಾಂಕನ ಪರೀಕ್ಷೆ ಸಹಕಾರಿ. ಆದ್ದರಿಂದ ಈ ವರ್ಷದಿಂದ ಐದು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳಿಗೂ ಈ ಪರೀಕ್ಷೆ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

Advertisement

ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) ಈ ಪರೀಕ್ಷೆ ನಡೆಸುತ್ತದೆ. ಮೌಲ್ಯಾಂಕನ ಪರೀಕ್ಷೆಯಲ್ಲಿ ಮಕ್ಕಳ ಬೌದ್ಧಿಕ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಂತೆಯೇ ಈ ಪರೀಕ್ಷೆಗಳಿದ್ದರೂ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ. ಬದಲಿಗೆ ಪೂರಕ ತರಬೇತಿ ನೀಡಲಾ ಗುವುದು. ವಿದ್ಯಾರ್ಥಿ ತಪ್ಪು ಉತ್ತರ ಬರೆದಿದ್ದ ಪ್ರಶ್ನೆಗಳನ್ನು ಗುರುತಿಸಿ ಅದರ ಸರಿ ಉತ್ತರವನ್ನು ಅದೇ ವಿದ್ಯಾರ್ಥಿಗೆ ಮತ್ತೆ ಮನವರಿಕೆ ಮಾಡಿಸುವ ಕೆಲಸವನ್ನು ಶಿಕ್ಷಕರು ಮಾಡಿಸಲಿದ್ದಾರೆ.

ಇದರಿಂದ ಶಿಕ್ಷಕರ ಬೋಧನಾ ಸಾಮರ್ಥ್ಯ ಕೂಡ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಕಡ್ಡಾಯ: ಕೇಂದ್ರೀಯ ವಿಶ್ವವಿದ್ಯಾಲಯ, ಕೇಂದ್ರ ಪಠ್ಯಕ್ರಮದ ಶಾಲೆಗಳು ಸೇರಿ ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಪ್ರಸಕ್ತ ವರ್ಷದಿಂದ ಕನ್ನಡವನ್ನು ಒಂದು ವಿಷಯವಾಗಿ ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ
ಸರ್ಕಾರ ಮೇ 29ರಂದು ಸುತ್ತೋಲೆ ಹೊರಡಿಸಿದ್ದು, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ
ಕಲಿಸುವುದು ಕಡ್ಡಾಯವಾಗಿದೆ. ಆದೇಶ ಉಲ್ಲಂ ಸುವ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಅನುಮತಿ
ನಿರಾಕರಿಸಲಾಗುವುದು ಎಂದು ಸೇs… ಹೇಳಿದರು.

ಮಾನ್ಯತೆ ರದ್ದು ಎಚ್ಚರಿಕೆ: ಎಸ್‌ಎಸ್‌ಎಲ್‌ಸಿಯಲ್ಲಿ ಶೂನ್ಯ ಫ‌ಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅಂತಹ ಶಾಲೆಗಳಿಗೆ ಮೂಲಸೌಕರ್ಯ ಇಲ್ಲದಿದ್ದರೆ ಶೈಕ್ಷಣಿಕ ಮಾನ್ಯತೆ ರದ್ದುಪಡಿಸಲಾಗುವುದು ಎಂದರು.

Advertisement

10 ಸಾವಿರ ಶಿಕ್ಷಕರ ನೇಮಕ: ರಾಜ್ಯ ಸರ್ಕಾರ 10 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದ್ದು, ಅದರಲ್ಲಿ 6826 ಶಿಕ್ಷಕರನ್ನು ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗುವುದು. ಈ ಬಾರಿ ವರ್ಗಾವಣೆ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಹೊಸ ಕಾಯ್ದೆ ಅನ್ವಯ 22 ದಿನಗಳೊಳಗೆ ಕೌನ್ಸಿಲಿಂಗ್‌ ಮುಗಿಸಲು ಚಿಂತನೆ ನಡೆಸಲಾಗಿದೆ
ಎಂದರು.

Advertisement

Udayavani is now on Telegram. Click here to join our channel and stay updated with the latest news.

Next