Advertisement

ಪ್ರೇಮಿಗಳ ದಿನಕ್ಕೆ “ಮಾತು ಬಾರದ ಹೃದಯಕೆ’ಆಲ್ಬಂ

10:26 AM Feb 14, 2020 | Lakshmi GovindaRaj |

ಸಿನಿಮಾದ ಜೊತೆ ಜೊತೆಗೆ ಕನ್ನಡದಲ್ಲಿ ಒಂದಷ್ಟು ಆಲ್ಬಂಗಳು ಕೂಡಾ ಬರುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಮಾತು ಬಾರದ ಹೃದಯಕೆ’. ಪ್ರೀತಿ ಕುರಿತಾದ ಪರಿಕಲ್ಪನೆಯಲ್ಲಿ ಈ ಆಲ್ಬಂ ಮೂಡಿಬಂದಿದ್ದು, ನವನಟ ಧನ್ವಿತ್‌ ಹಾಗೂ ಐಶ್ವರ್ಯಾ ಸಿಂಧೋಗಿ ಕಾಣಿಸಿಕೊಂಡಿದ್ದಾರೆ.

Advertisement

ಈ ಆಲ್ಬಂ ಅನ್ನು ಸ್ವತಃ ಧನ್ವಿತ್‌ ಅವರೇ ನಿರ್ಮಿಸಿದ್ದಾರೆ. ಪ್ರೇಮಿಗಳ ದಿನಕ್ಕೆ ಆಲ್ಬಂ ಬಿಡುಗಡೆಯಾಗುತ್ತಿದೆ. ಆಲ್ಬಂನ ಹಾಡುಗಳು ಪ್ರೇಮಿಗಳಿಗೆ ಹೆಚ್ಚು ಇಷ್ಟವಾಗಲಿದೆಯಂತೆ. ಶಿವು ನಿರ್ದೇಶನದಲ್ಲಿ ಉದಯ್‌ ಪ್ರಶಾಂತ್‌.ಎಂ ಛಾಯಾಗ್ರಹಣ ಮಾಡಿದ್ದಾರೆ. ಅಭಿಷೇಕ್‌ ಅವರ ಸಂಗೀತ ಮತ್ತು ಗಾಯನವಿದೆ. ಆಲ್ಬಂಗೆ ಇಂದ್ರೇಶ್‌ ನೃತ್ಯ, ಚಂದ್ರು ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next