Advertisement

ಮತದಾನ ಜಾಗೃತಿಗೆ ಪಾಲಿಕೆ ಅಧಿಕಾರಿಗಳ ವಾಕಥಾನ್‌

12:06 PM Apr 09, 2018 | Team Udayavani |

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಮತದಾನದ ಜಾಗೃತಿಗಾಗಿ ವಾಕಥಾನ್‌ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮೈಸೂರು ರಮಾನಂದರ “ಗೆಜ್ಜೆ ಹೆಜ್ಜೆ’ ರಂಗ ತಂಡದ ಕಲಾವಿದರು “ಇದು ಚುನಾವಣೆ ಸಮಯ’  ಎಂಬ ಬೀದಿ ನಾಟಕ ಪ್ರದರ್ಶಿಸಿದರು.

Advertisement

ಹಡ್ಸನ್‌ ಸರ್ಕಲ್‌ ಬಳಿ ಇರುವ ಕಬ್ಬನ್‌ಪಾರ್ಕ್‌ ಮುಖ್ಯ ದ್ವಾರದಿಂದ ಆರಂಭಗೊಂಡ ವಾಕಾಥಾನ್‌, ಕಸ್ತೂರ್‌ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಮಲ್ಯ ಆಸ್ಪತ್ರೆ ಮುಂಭಾಗ, ರಾಜಾರಾಂ ಮೋಹನ್‌ರಾಯ್‌ ರಸ್ತೆ ಮೂಲಕ ಸಾಗಿ ಬಿಬಿಎಂಪಿ ನೌಕರರ ಸಹಕಾರ ಸಂಘದ ಬಳಿ ಮುಕ್ತಾಗೊಂಡಿತು. ವಾಕಾಥಾನ್‌ನಲ್ಲಿ ಭಾಗವಹಿಸಿದರು “ಮತದಾನ ಕಡ್ಡಾಯ’ ಎಂಬ ಸಂದೇಶ ಹೊಂದಿದ ಟೀಶರ್ಟ್‌ ತೊಟ್ಟು ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಚುನಾಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌, ಮತದಾರರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿಯೇ ಇಂದು ವಾಕಾಥಾನ್‌ ಮತ್ತು ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ.

ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಗರದ ಬೇರೆ ಬೇರೆ ಭಾಗಗಳನ್ನು ಆಯೋಜಿಸಲಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ವಿಶೇಷ ಆಯುಕ್ತ (ಚುನಾವಣೆ) ಮನೋಜ್‌ಕುಮಾರ್‌ ಮೀನಾ, ನಗರ ಜಿಲ್ಲಾಧಿಕಾರಿ ದಯಾನಂದ್‌, ವಿಶೇಷ ಆಯುಕ್ತ ರವೀಂದ್ರ ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next