ಮಂಗಳೂರು: ಶರತ್ ಹತ್ಯೆ ಪ್ರಕರಣ ಸೇರಿದಂತೆ ಹಿಂದೂ ಸಮುದಾಯದ ಮೇಲಿನ ಎಲ್ಲ ದಾಳಿಗಳ ಕುರಿತಂತೆ ಸಮಗ್ರವಾಗಿ ತನಿಖೆ ನಡೆಸಲು ರಾಷ್ಟ್ರೀಯ ತನಿಖಾದಳ(ಎನ್‌ಐಎ)ಕ್ಕೆ ಪ್ರಕರಣವನ್ನು ಒಪ್ಪಿಸಬೇಕು ಎಂದು ಹಿಂದೂ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಹಿಂದೂಗಳ ಮೇಲೆ ದಬ್ಟಾಳಿಕೆ, ತುಷ್ಟೀಕರಣ ನೀತಿ ಅನುಸರಿಸುತ್ತಿದ್ದು, ಇದರಿಂದ ಕರಾವಳಿ ಭಯೋತ್ಪಾದಕರ ಅಡಗುದಾಣವಾಗುತ್ತಿದೆ. ಇದರಲ್ಲಿ ಕೋಮುವಾದ, ಭಯೋತ್ಪಾದನೆ ಅಲ್ಲದೆ ಜೆಹಾದಿ ತಂತ್ರ ಅಡಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕಾದ ರಾಜ್ಯ ಸರಕಾರ ಹಿಂದೂಗಳ ಮೇಲೆ ದಬ್ಟಾಳಿಕೆ, ತುಷ್ಟೀಕರಣ ನೀತಿಯನ್ನೇ ಮುಂದು
ವರಿಸಿಕೊಂಡು ಹೋಗುತ್ತಿದೆ ಎಂದರು.
ಹಿಂದೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಶೆಟ್ಟಿ ಅಡ್ಯಾರ್‌ಪದವು, ಉಪಾಧ್ಯಕ್ಷರಾದ ಸುಶಾಂತ್ ಅಮೀನ್, ಶ್ರುತಿನ್ ಕಡೇಶಿವಾಲಯ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಬರ್ಕೆ, ಸಂಘಟನಾ ಪ್ರಮುಖ್ ಗಣೇಶ್ ಕುಲಾಲ್ ಕೆದಿಲ, ಸಹಕಾರ್ಯದರ್ಶಿ ಪ್ರಶಾಂತ್ ಗುರುಪುರ ಉಪಸ್ಥಿತರಿದ್ದರು.