“ಇತ್ತೀಗಷ್ಟೇ ಬಿಗ್‌ಬಾಸ್ ಮನೆಯಿಂದ ನೇರವಾಗಿ ನಮ್ಮ ಮನೆಗೇ ಬಂದಿದ್ದೇನೆ. ತುಂಬ ದಿನಗಳಿಂದ ನಮ್ಮ ಮನೆಯವರ ಜೊತೆಗಿನ ಒಡನಾಟವನ್ನ ಮಿಸ್ ಮಾಡಿಕೊಂಡಿದ್ದೆ. ಈಗಂತೂ ಕೋವಿಡ್ ಲಾಕ್ ಡೌನ್ ಇರೋದ್ರಿಂದ ಮನೆಯಲ್ಲೇ ಇದ್ದೇನೆ. ಲಾಕ್ ಡೌನ್ ಮುಗಿದು, ಎಲ್ಲವೂ ಮೊದಲಿನ ಸ್ಥಿತಿಗೆ
ಬರುವವರೆಗೂ ಮನೆಯಲ್ಲೇ ಇರಬೇಕು ಅಂದುಕೊಂಡಿದ್ದೇನೆ. ಸದ್ಯದ ಮಟ್ಟಿಗೆ ಮುಂದೆ ಸೀರಿಯಲ್ ಮಾಡ್ಬೇಕಾ.. ಅಥವಾ ಸಿನಿಮಾ ಮಾಡ್ಬೇಕಾ… ಅಂಥ ಇನ್ನೂ ಏನೂ ಯೋಚನೆ ಮಾಡಿಲ್ಲ’ ಇದು ನಟಿ ವೈಷ್ಣವಿ ಗೌಡ ಅವರ ಮಾತು.
ಹೌದು,ಕಿರುತೆರೆಯ “ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ನಟಿ ವೈಷ್ಣವಿ ಆನಂತರ “ಬಹುಕೃತ ವೇಷಂ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಹಿರಿತೆರೆಗೂ ಅಡಿಯಿಡುವ ತಯಾರಿಯಲ್ಲಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಬಹುಕೃತ ವೇಷಂ’ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಕೊರೊನಾಕಾರಣದಿಂದ ಚಿತ್ರದ ಕೆಲಸಗಳಿಗೆ ಬ್ರೇಕ್ ಬಿದ್ದಿದ್ದರಿಂದ, ಚಿತ್ರ ತೆರೆಗೆ ಬರೋದು ತಡವಾಗುತ್ತಿದೆ. ಇದರ ನಡುವೆಯೇ ಈ ಬಾರಿ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವೈಷ್ಣವಿ, ಆ ಶೋ ಲಾಕ್‌ಡೌನ್‌ನಿಂದಾಗಿ ಅರ್ಧಕ್ಕೆ ನಿಂತಿದ್ದರಿಂದ ಎಲ್ಲ ಸ್ಪರ್ಧಿಗಳ ಜೊತೆ ಹೊರಕ್ಕೆ ಬಂದಿದ್ದರು. ಸದ್ಯ ಲಾಕ್ ಡೌನ್‌ನಿಂದಾಗಿ ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯುತ್ತಿರುವ ವೈಷ್ಣವಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.
“ಸದ್ಯ ಲಾಕ್‌ಡೌನ್ ಇರೋದ್ರಿಂದ ಎಲ್ಲಚಟುವಟಿಕೆಗಳು ನಿಂತಿವೆ. ಹಾಗಾಗಿ ನಾನೂ ಕೂಡ ಲಾಕ್‌ಡೌನ್ ಮುಗಿಯುವವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಸಕ್ಸಸ್ ಮಾಡುವ ಮೂಲಕಕೋವಿಡ್ ಹರಡದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ನಾನೊಬ್ಬಳು ಸಿಟಿಜನ್ ಆಗಿ ನನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇನೆ. ಈಗ ಎಲ್ಲರೂ ಅವರ ಆರೋಗ್ಯ, ಮನೆಮಂದಿ ರಕ್ಷಣೆ ಮಾಡಿಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದರೆ, ಏನು ಬೇಕಾದರೂ ಮಾಡಬಹುದು. ಪರಿಸ್ಥಿತಿ ಮೊದಲಿನಂತಾದ ಮೇಲೆ ಮುಂದೆ ಮಾಡ ಬೇಕಾಗಿರುವುದು ಇದ್ದೇ ಇರುತ್ತದೆ’ ಅನ್ನೋದು ವೈಷ್ಣವಿ ಮಾತು.
ಇನ್ನುಕಿರುತೆರೆಯಿಂದ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿರುವ ವೈಷ್ಣವಿ ಅವರಿಗೆ ಯಾವುದು ಮೊದಲ ಆದ್ಯತೆ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ. “ನಾನೊಬ್ಬಳುಕಲಾವಿದೆ ಅಷ್ಟೇ. ನನಗೆ ಸೀರಿಯಲ್ ಅಥವಾ ಸಿನಿಮಾ ಅಂಥ ಯಾವುದೇ ವ್ಯತ್ಯಾಸವಿಲ್ಲ. ನನಗೆ ಸಿಕ್ಕ ಅವಕಾಶವನ್ನು ನಾನು ಸಮರ್ಥವಾಗಿ ಬಳಸಿಕೊಳ್ಳಬೇಕು. ನನ್ನ ಕೆಲಸಕ್ಕೆ ನ್ಯಾಯ ಒದಗಿಸಬೇಕು. ಅದನ್ನು ಬಿಟ್ಟು ಉಳಿದ ಸಂಗತಿಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಸದ್ಯಕ್ಕೆ ಮುಂದೆ ಸೀರಿಯಲ್‌ನಲ್ಲೇ ಮುಂದುವರೆಯಬೇಕೋ ಅಥವಾ ಸಿನಿಮಾದಲ್ಲಿ ಮುಂದುವರೆಯಬೇಕೋ ಅನ್ನೋದರ ಬಗ್ಗೆ ಇನ್ನೂ ಯೋಚಿಸಿಲ್ಲ’ ಎನ್ನುತ್ತಾರೆ.
ಸದ್ಯ ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಲಾಕ್ ಆಗಿರುವ ವೈಷ್ಣವಿ, ತಮ್ಮ ಮತ್ತು ಮನೆಯವರ ಆರೋಗ್ಯದಕಡೆಗೆ ಹೆಚ್ಚಿನಕಾಳಜಿ ತೆಗೆದುಕೊಳ್ಳುತ್ತಾರಂತೆ. ಉಳಿದಂತೆ ತನಗಿಷ್ಟವಾದ “ಸಿನಿಮಾಗಳನ್ನು ನೋಡುವುದು, ಪುಸ್ತಕಗಳನ್ನು ಓದುವುದು, ಒಂದಷ್ಟು ವಕೌìಟ್ ಮಾಡೋದು, ದೇಹ ಮತ್ತು ಮನಸ್ಸು ಎರಡನ್ನೂ ಎನರ್ಜಿಟಿಕ್ ಆಗಿ ಇಟ್ಟುಕೊಳ್ಳುವುದು ಇವಿಷ್ಟರ ಕಡೆಗಷ್ಟೇ ನನ್ನ ಹೆಚ್ಚಿನ ಗಮನವಿದೆ’ ಎನ್ನುತ್ತಾರೆ