ಬಸವನಗುಡಿಯ ಸೋಸಲೆ ವ್ಯಾಸರಾಜ ಮಠದಲ್ಲಿರುವ ಶ್ರೀನಿವಾಸನ ಸನ್ನಿಧಾನದಲ್ಲಿ, ವೈಕುಂಠ ಏಕಾದಶಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ, ಶ್ರೀಮದ್ಭಾಗವತ ಪುರಾಣದ ಅಖಂಡ ಪ್ರವಚನ ಮಾಲಿಕೆಯನ್ನು ನಾಡಿನ ಖ್ಯಾತ ವಿದ್ವಾಂಸರಿಂದ ಏರ್ಪಡಿಸಲಾಗಿದೆ. ಪ್ರವಚನಕಾರರಾದ ರಾಮವಿಠ್ಠಲಾಚಾರ್ಯ, ಹರಿದಾಸ ಭಟ್, ಎಚ್. ಸತ್ಯನಾರಾಯಣಾಚಾರ್ಯ, ಕರ್ನೂಲ್ಶ್ರೀನಿವಾಸಾಚಾರ್ಯ, ಬಾಳಿಗಾರು ರುಚಿರಾಚಾರ್ಯ, ಕಲ್ಲಾಪುರ ಪವಮಾನಾಚಾರ್ಯ, ಶ್ರೀಹರಿ ಆಚಾರ್ ವಾಳ್ವೆಕರ್, ಪಂಚಮುಖೀ ಪವಮಾನಾಚಾರ್ಯ, ಸತ್ಯಧ್ಯಾನಾಚಾರ್ ಕಟ್ಟಿ, ಗುಡೆಬಲ್ಲೂರು ವೆಂಕಟನರಸಿಂಹಾಚಾರ್ಯ, ವಿಠೊಬಾಚಾರ್ಯ, ಬ್ರಹ್ಮಣ್ಯಾಚಾರ್ಯರು ಬೆಳಗ್ಗೆ 8.30 ರಿಂದ ರಾತ್ರಿ 11.30 ರವರೆಗೆ ನಿರಂತರವಾಗಿ ಸತ್ಕಥಾ ಉಪನ್ಯಾಸ ನಡೆಸಿಕೊಡಲಿದ್ದಾರೆ.
ಎಲ್ಲಿ?: ಶ್ರೀ ಸೋಸಲೆ ವ್ಯಾಸರಾಜಮಠ, ಬೆಣ್ಣೆ ಗೋವಿಂದಪ್ಪ ರಸ್ತೆ, ಬಸವನಗುಡಿ
ಯಾವಾಗ?: ಜ. 6, ಸೋಮವಾರ ಬೆಳಗ್ಗೆ 8ರಿಂದ