Advertisement
ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ಗುರುವಾರ ನಡೆದ ಕಲೆಯ ಮೂಲಕ ರಾಷ್ಟ್ರಪ್ರೇಮ ಉತ್ತೇಜಿಸುವ ದೃಷ್ಟಿಯಿಂದ ಕಲಾ ಸಂಘಟಕ ಸುಧಾಕರ ಆಚಾರ್ಯರ ಅವರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಯಲ್ಲಿ ನಿರಂತರ 25 ವರ್ಷಗಳ ಕಾಲ ಭಾಗವತಿಕೆ ನಡೆಸಿಕೊಟ್ಟ ಅವರು ರಜತ ಗೌರವ ಸ್ವೀಕರಿಸಿ ಮಾತನಾಡಿದರು.
Related Articles
Advertisement
ಸಂಘಟಕ ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ, ಆಚಾರ್ಯ ಯಾಸ್ಕಾ, ಮೇದಿನಿ ಆಚಾರ್ಯ ಭಾಗವಹಿಸಿದ್ದರು. ಡಾ| ವಿಟ್ಲ ಹರೀಶ್ ಜೋಷಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ತ್ರಿಲೋಚನ ಶಾಸ್ತ್ರೀ, ಡಾ| ಪೃಥ್ವಿರಾಜ್ ಕವತ್ತಾರ್, ಮಹೇಂದ್ರ ಆಚಾರ್ಯ ಹೇರಂಜೆ, ರತನ್‌ರಾಜ್ ರೈ ಮಣಿಪಾಲ, ಅಜಿತ್ ಕುಮಾರ್ ಅಂಬಲಪಾಡಿ, ವಸಂತ ಪಾಣಾಜೆ, ನರಸಿಂಹ ಭಟ್ ಖಂಡಿಗೆ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಪ್ರೊ| ಪವನ್ ಕಿರಣಕೆರೆ ಪ್ರಸ್ತಾವನೆಗೈದರು. ಸುಜಯೀಂದ್ರ ಹಂದೆ ನಿರೂಪಿಸಿ, ವಂದಿಸಿದರು.
.”ವೈಕುಂಠ ದರ್ಶನ’ ತಾಳಮದ್ದಳೆ”ಅನ್ನಬ್ರಹ್ಮನ ನಾಡಲ್ಲಿ ನಾದಬ್ರಹ್ಮ
ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಾಗವತ-ಕವಿ ಬೊಟ್ಟಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಆಧಾರಿತ “ವೈಕುಂಠ ದರ್ಶನ’ ಯಕ್ಷಗಾನ ತಾಳಮದ್ದಳೆ ನೆರವೇರಿತು. ತಾಳಮದ್ದಳೆ ಹಿಮ್ಮೇಳದಲ್ಲಿ ಎಂ. ದಿನೇಶ್ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ, ಭರತ್‌ರಾಜ್ ಶೆಟ್ಟಿ ಸಿದ್ಧಕಟ್ಟೆ, ಗುರುಪ್ರಸಾದ್ ಬೊಳಂಜಡ್ಕ, ಸಮರ್ಥ ಉಡುಪ, ಅದ್ವೆ„ತ್ ಕನ್ಯಾನ, ರಾಜೇಂದ್ರ ಕೃಷ್ಣ, ಪಾತ್ರ ವರ್ಗದಲ್ಲಿ ಮಹೇಂದ್ರ ಆಚಾರ್ಯ ಹೇರಂಜೆ, ಸುಣ್ಣಂಬಳ ವಿಶ್ವೇಶ್ವರ ಭಟ್, ಹಿರಣ್ಯ ವೆಂಕಟೇಶ್ ಭಟ್, ಹರೀಶ್ ಬಳಂತಿಮುಗರು, ಪ್ರೊ| ಪವನ್ ಕಿರಣಕೆರೆ, ಸುಜಯೀಂದ್ರ ಹಂದೆ, ವಾಸುದೇವ ರಂಗಭಟ್ ಭಾಗವಹಿಸಿದ್ದರು.
ಪ್ರೊ| ಪವನ್ ಕಿರಣಕೆರೆ ಅವರ ನಾದ ನಿರ್ದೇಶನದಲ್ಲಿ ವೈಕುಂಠದ ಭಾಗವತರ ಸಮ್ಮೇಳವದ ಕಲ್ಪನೆಯಡಿಯಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಲಯದ 6ನೇ ತರಗತಿಯಿಂದ ಪದವಿ-ಸ್ನಾತಕೋತ್ತರ ಪದವಿ ವರೆಗಿನ ವಿದ್ಯಾರ್ಥಿಗಳು, ಎಂಜಿನಿಯರ್, ವೈದ್ಯರನ್ನು ಒಳಗೊಂಡ 6 ತೆಂಕುತಿಟ್ಟು, 6 ಬಡಗುತಿಟ್ಟು, 6 ಮಹಿಳಾ ಭಾಗವತರ ಜತೆಗೆ 7 ಚೆಂಡೆ-ಮದ್ದಳೆ ವಾದಕರನ್ನು ಸೇರಿಸಿ 25 ಯುವ ಯಕ್ಷಾವತಾರಿಗಳ ಸಾಂಗತ್ಯದಲ್ಲಿ ವೈಕುಂಠದ ಭಾಗವತರ ಸಮ್ಮೇಳವ ಕಲ್ಪನೆಯಲ್ಲಿ “ನಾದ ವೈಕುಂಠ’ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಪೂರ್ವರಂಗದ ಸ್ತುತಿ ಪದ್ಯಗಳು, ಅಪರೂಪದ ಶೃಂಗಾರ ಪದ್ಯಗಳು ಹಾಗೂ ಸಾಂ ಕ ಪ್ರಸ್ತುತಿಯಲ್ಲಿ ಅಷ್ಟಕಗಳ ನಾವಿನ್ಯ ಪ್ರಯೋಗದೊಂದಿಗೆ ಪ್ರಸ್ತುತಗೊಂಡ “ನಾದ ವೈಕುಂಠ’ವು ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಮೂಲಕ ಯಕ್ಷಕಲೋಕದಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.