Advertisement
ಬೆಳಿಗ್ಗೆ ಬ್ರಹ್ಮಶ್ರೀ ಇರುವೈಲು ಕೇಶವದಾಸ ತಂತ್ರಿ ಮತ್ತು ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳ ನೇತತ್ವದಲ್ಲಿ ಆರಾಧನಾ ಶಕ್ತಿಗಳಾದ ಶ್ರೀ ಮಹಿಷ ಮರ್ದಿನಿ, ಶ್ರೀ ಆರ್ಯಕಾತ್ಯಾಯಿನಿ ದೇವಿ, ಶ್ರೀ ವಿಷ್ಣುಮೂರ್ತಿ, ಶ್ರೀ ಧೂಮಾವತೀ, ರಕ್ತೇಶ್ವರೀ, ಗುಳಿಗ ಸಾನ್ನಿಧ್ಯಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಪಾನಕಪೂಜೆ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಆರ್ಯ-ಮರಾಠ ಸಮಾಜದ ವಾಗ್ಮಾನ್ ಕುಟುಂಬದವರು, ಇತರ ಕುಟುಂಬದವರು, ಇತರ ಸಮಾಜ ಬಂಧುಗಳೇ ಮೊದಲಾದ ಸಾವಿರಕ್ಕೂ ಅಧಿಕ ಮಂದಿ ಈ ಸಂದರ್ಭದಲ್ಲಿ ಭಾಗಿಗಳಾದರು. ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರನ್ನು, ವಾಸ್ತು ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ಸಂಜೆ ದೆ„ವದ ಕೋಲದ ಅಂಗವಾಗಿ ಕುಂಡಂಗುಳಿ ಶ್ರೀ ವಿಷ್ಣುಮೂರ್ತಿ ಮತ್ತು ಧೂಮಾವತಿ ದೆ„ವಸ್ಥಾನದಿಂದ ದೆ„ವಗಳ ಭಂಡಾರ ಆಗಮನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಕೀಚಕ-ಮಾಯಾ ತಿಲೋತ್ತಮೆ ನಡೆಯಿತು.