Advertisement

ಮೀಸಲೇತರ ವರ್ಗಗಳಿಗೆ ಶೇ.25ರ ಕೋಟಾ: ವಘೇಲಾ ಆಗ್ರಹ

04:09 PM Oct 05, 2017 | Team Udayavani |

ಅಹ್ಮದಾಬಾದ್‌ : ಗುಜರಾತ್‌ನಲ್ಲಿ  ಮೀಸಲೇತರ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ  ಶೇ.25ರ ಮೀಸಲಾತಿಯನ್ನು ಕಲ್ಪಿಸಬೇಕೆಂದು ಮಾಜಿ ಹಿರಿಯ ಕಾಂಗ್ರೆಸಿಗ ಹಾಗೂ “ಜನವಿಕಲ್ಪ’ ನೂತನ ರಾಜಕೀಯ ಪಕ್ಷದ ನೇತಾರ ಶಂಕರ್‌ ಸಿಂಗ್‌ ವಘೇಲಾ ಅವರು ಆಗ್ರಹಿಸಿದ್ದಾರೆ.

Advertisement

ಮೀಸಲಾತಿ ಪ್ರಮಾಣವನ್ನು ಶೇ.49.5ರ ಪ್ರಮಾಣಕ್ಕೆ ಸುಪ್ರೀಂ ಕೋರ್ಟ್‌ ಸೀಮಿತಗೊಳಿಸಿರುವ ಹೊರತಾಗಿಯೂ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಹೆಚ್ಚುವರಿಯಾಗಿ ಮೀಸಲೇತರ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.25ರ ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ ಎಂದು ಗುಜರಾತ್‌ ಮಾಜಿ ಮುಖ್ಯಮಂತ್ರಿ ವಘೇಲಾ ಹೇಳಿದರು.  

ತಮಿಳು ನಾಡಿನಲ್ಲಿ ಈಗಾಗಲೇ ಶೇ.69ರ ಮೀಸಲಾತಿ ಇದೆ; ಗುಜರಾತ್‌ನಲ್ಲಿ ಕೂಡ ಮೀಸಲೇತರ ವರ್ಗಗಳಿಗೆ ಶೇ.25ರ ಹೆಚ್ಚುವರಿ ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ ಎಂದು ವಘೇಲಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next