Advertisement
ಚರಂಡಿಯಲ್ಲಿ ವಿದ್ಯುತ್ ಕಂಬಗಳು:
Related Articles
Advertisement
ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗಳಷ್ಟೇ ಓಡಾಟಕ್ಕೆ ಮುಕ್ತವಾಗಿದ್ದು ಒಂದು ಸರ್ವಿಸ್ ರಸ್ತೆಯಿಂದ ಇನ್ನೊಂದು ರಸ್ತೆಗೆ ಫ್ಲೈ ಒವರ್ ಹಾಗೂ ಅಂಡರ್‌ಪಾಸ್ ಮೂಲಕವೇ ಬರಬೇಕಾಗುತ್ತದೆ. ಇದರಿಂದಾಗಿ ಎಲ್‌ಐಸಿ ರಸ್ತೆ, ಲೋಕೋಪಯೋಗಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಡೇರಹೋಬಳಿ ರಸ್ತೆ, ವ್ಯಾಸರಾಜ ಮಠ ಮೊದಲಾದೆಡೆಗೆ ಬರುವವರು ಶಾಸ್ತ್ರಿ ಸರ್ಕ್‌ಲ್‌ನಿಂದ ಫ್ಲೈಒವರ್ ಅಡಿಯಲ್ಲಿ ಸಾಗಿ ಬಸ್ರೂರು ಮೂರು ಕೈ ತಲುಪಿ ಅಂಡರ್‌ಪಾಸ್ ಮೂಲಕ ಇನ್ನೊಂದು ಬದಿಯ ಸರ್ವಿಸ್ ರಸ್ತೆಗೆ ಬಂದು ಬೊಬ್ಬರ್ಯನಕಟ್ಟೆ ತಲುಪಬೇಕಾಗುತ್ತದೆ. ಕೊಂಕಣ ಸುತ್ತಿ ಮೈಲಾರ ಬರುವ ವ್ಯವಸ್ಥೆ ಬೇಡ ಎಂದು ಅನೇಕರು ಈಗ ಸುತ್ತುಬಳಸುವ ದಾರಿ ಬದಲು ಭಂಡಾರ್‌ಕಾರ್ಸ್ ಕಾಲೇಜು ಸಮೀಪದ ರಸ್ತೆ ಮೂಲಕ ಕಾಲೇಜಿನ ಹಿಂದಿನಿಂದಾಗಿ ವ್ಯಾಸರಾಜ ಮಠದ ರಸ್ತೆ ಮೂಲಕ ಎಲ್‌ಐಸಿ ರಸ್ತೆ ತಲುಪುತ್ತಿದ್ದಾರೆ. ಅಥವಾ ವಡೇರಹೋಬಳಿ ಶಾಲೆ ಬಳಿಯ ರಸ್ತೆಯಿಂದಾಗಿ ತೆರಳುತ್ತಾರೆ. ಹೀಗೆ ಹೋಗುವಲ್ಲಿ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆ ವ್ಯಾಸರಾಜ ಮಠದ ಮೂಲಕ ಸಾಗುತ್ತದೆ. ಅಲ್ಲಿ ಚರಂಡಿಗೆ ಹಾಕಿದ ಸ್ಲ್ಯಾಬ್ ಕುಸಿದಿದೆ. ಪಕ್ಕನೆ ನೋಡುವಾಗ ರಸ್ತೆಯೇ ಕುಸಿದಂತಿದೆ. ಸಣ್ಣಪುಟ್ಟ ವಾಹನಗಳು, ಕಾರು ಈ ರಸ್ತೆ ಮೂಲಕ ಹೋಗುವಾಗ ಅದರ ಅಡಿಭಾಗ ರಸ್ತೆಗೆ ತಾಗುತ್ತದೆ. ಇದರಿಂದ ನಿಯಂತ್ರಣ ತಪ್ಪುತ್ತದೆ. ಈ ಕುರಿತು ಪುರಸಭೆ ಗಮನ ಹರಿಸಿದಂತಿಲ್ಲ. ಇಲ್ಲಿ ವಾಹನಗಳ ಓಡಾಟ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದ್ದರಿಂದ ದುರಸ್ತಿ ಅನಿವಾರ್ಯವಾಗಿದೆ.
ಚರಂಡಿಯಲ್ಲಿಯೇ ವಿದ್ಯುತ್ ಕಂಬ ಇರುವುದು, ರಸ್ತೆ ಕುಸಿತಕ್ಕೊಳ ಗಾಗಿರುವುದು ತಿಳಿದುಬಂದಿದ್ದು ಪುರಸಭೆ ಗಮನಕ್ಕೆ ತರಲಾಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ.-ರೋಹಿಣಿ ಉದಯ ಕುಮಾರ್, ಸದಸ್ಯರು, ಪುರಸಭೆ
ವಡೇರಹೋಬಳಿ ಬಳಿ ರಸ್ತೆ ಕುಸಿತ ಹಾಗೂ ವಿದ್ಯುತ್ ಕಂಬ ಚರಂಡಿಯಲ್ಲಿ ಇರುವ ಕುರಿತು ಎಂಜಿನಿಯರ್ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ಸರಿಪಡಿಸಲಾಗುವುದು.-ವೀಣಾ ಭಾಸ್ಕರ ಮೆಂಡನ್,ಅಧ್ಯಕ್ಷರು, ಪುರಸಭೆ