Advertisement
ತಮಿಳುನಾಡು ಗಡಿಯಲ್ಲಿ ಅಕ್ಕಸಾಲಿಗರು ನಕಲಿ ನಾಣ್ಯಗಳನ್ನು ಟಂಕಿಸುತ್ತಿದ್ದು, ಈಗಾಗಲೇ ಆಂಧ್ರಪ್ರದೇಶದಲ್ಲಿ 10 ರೂ. ನಾಣ್ಯಗಳನ್ನು ರದ್ದುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 10 ರೂ. ನಾಣ್ಯಗಳನ್ನು ಹಿಂಪಡೆಯಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದರಿಂದ ಆಂಧ್ರಪ್ರದೇಶ ಗಡಿಯ ಕುಪ್ಪಂ ಮತ್ತು ತಮಿಳುನಾಡು ಗಡಿಯ ವೇಪನಪಲ್ಲಿ ಹಾಗೂ ತೊಪ್ಪನಹಳ್ಳಿ, ಮುಷ್ಟ್ರಹಳ್ಳಿ, ದೋಣಿಮಡಗು ಗ್ರಾಮಗಳಲ್ಲಿ ಯಾರೊಬ್ಬರೂ 10.ರೂ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಇಲ್ಲಿ ಈ ನಾಣ್ಯ ತಾನಾಗಿಯೇ ಸ್ಥಗಿತವಾಗಿದೆ.
ದೇಶದಲ್ಲಿ 500 ಹಾಗೂ 1000 ಮುಖಬೆಲೆಯ ನೋಟುಗಳು ಅಮಾನ್ಯಗೊಂಡ ನಂತರ ಚಿಲ್ಲರೆ ಸಮಸ್ಯೆ ನೀಗಿಸಲು 10 ರೂ. ನಾಣ್ಯಗಳನ್ನು ಬ್ಯಾಂಕುಗಳು ಜನರಿಗೆ ನೀಡಿದ್ದವು. ವದಂತಿಗಳಿಂದ ಜನರು ನಾಣ್ಯಗಳನ್ನು ಮತ್ತೆ ಬ್ಯಾಂಕಿಗೆ ಹಿಂದಿರುಗಿಸಲು ಜಮಾಯಿಸಿದ್ದಾರೆ. ಸಿಬ್ಬಂದಿ ಎಷ್ಟೇ ಹೇಳಿದರೂ ಜನ ನಂಬದೆ ಜಮಾ ಮಾಡುತ್ತಿದ್ದಾರೆ.