Advertisement
ಜ. 1ರಂದು ವಡಾಲ ಎನ್‌ಕೆಇಎಸ್ ಶಿಕ್ಷಣ ಸಂಸ್ಥೆಯ ಪದವಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಾರದಾಪೀಠವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾಸಂಸ್ಥೆಗಳಲ್ಲಿ ಸಂಸ್ಕಾರ ಬೋಧನೆ ಬಹಳ ಮುಖ್ಯವಾಗಿದೆ. ಪ್ರತಿಯೋರ್ವನ ಜೀವನಕ್ಕೆ ಉಪ ಯೋಗವಾಗುವಂತಹ ಜ್ಞಾನವನ್ನು ಪಡೆದು ತಮ್ಮ ಹಾಗೂ ಸಮಾಜವನ್ನು ಉದ್ಧಾರ ಮಾಡುವಂತಹ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಶಿಕ್ಷಕನಾದವನು ಸತತವಾದ ಅಧ್ಯ ಯನದ ಮುಖಾಂತರ ಅತ್ಯಂತ ಹೆಚ್ಚಿನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯೆಯಲ್ಲಿ ಲೌಖೀಕ ಮತ್ತು ಅಲೌಖೀಕ ವಿದ್ಯೆ ಬಹಳ ಪ್ರಾಮುಖ್ಯತೆಯನ್ನು ಪಡೆದಿವೆ. ವೇದ-ವೇದಾಂತ, ಉಪನಿಷತ್, ಪುರಾಣಗಳನ್ನೊಳಗೊಂಡ ಶಾಸ್ತ್ರವಿದ್ಯೆ, ಸಾಂಪ್ರದಾಯಿಕ ವಿದ್ಯೆಯಾಗಿದ್ದು, ಅಂದು ದೊರೆಯುತ್ತಿದ್ದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಇಂದು ಕೂಡ ದೊರೆಯಬೇಕಾಗಿದೆ. ಸಂಸ್ಕೃತಿಯ ಕುರಿತು ಗೌರವ ಬರುವಂತಹ ಶಿಕ್ಷಣವನ್ನು ನೀಡಬೇಕಾಗಿದೆ. ಧರ್ಮಶಾಸ್ತ್ರದಲ್ಲಿ ತಿಳಿಸಿದಂತೆ ಏಕಾದಶಿ ವ್ರತ, ಉಪವಾಸ ಮೊದಲಾದವುಗಳನ್ನು ಬೇರೆಯ ವರಿಂದ ತಿಳಿದುಕೊಳ್ಳುವ ಬದಲು ವಿದ್ಯಾಸಂಸ್ಥೆಗಳು ಸಂಸ್ಕಾರ ಬೋಧನೆ ಮಾಡಿದರೆ ಉತ್ತಮ ನಾಗರಿಕರಾಗಲು ಸಾಧ್ಯವಿದೆ ಎಂದು ನುಡಿದು, ಶೃಂಗೇರಿ ಶಾರದಾ ಪೀಠದ 36ನೇ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರ ಅನುಗ್ರಹ ತಮ್ಮೆಲ್ಲರಿಗೆ ಸದಾ ಇರಲಿ ಎಂದು ಹಾರೈಸಿದರು.
Related Articles
Advertisement
ಶ್ರೀಗಳು ಭಕ್ತರನ್ನು ಮಂತ್ರಾಕ್ಷತೆ ಯನ್ನಿತ್ತು ಹರಸಿದರು.