ಮುಂಬಯಿ: ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಇದರ 65 ನೇ ವಾರ್ಷಿಕ ಶ್ರೀ ಗಣೇಶೋತ್ಸವವು ಆ. 2 ರಿಂದ ಆ. 12 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇದರ ಪೂರ್ವಭಾವಿ ಸಭೆಯು ಜೂ. 9 ರಂದು ಸಂಜೆ ವಡಾಲದ ಶ್ರೀ ರಾಮ ಮಂದಿರದ ದ್ವಾರಕಾನಾಥ ಭವನದಲ್ಲಿ ನಡೆಯಿತು.
ಸಾಮೂಹಿಕ ದೇವತಾ ಪ್ರಾರ್ಥನೆ ಹಾಗೂ ಗೋವಿಂದ ಆಚಾರ್ಯ ಅವರಿಂದ ವೇದಘೋಷದ ಬಳಿಕ ಜಿಎಸ್‌ಬಿ ಗಣೇಶೋತ್ಸವ ಸಮಿತಿಯ ವಿಶ್ವಸ್ಥ ಅಧ್ಯಕ್ಷ ರಾಜನ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಸ್ತ ಮಂಡಳಿಯ ಸದಸ್ಯರನ್ನು, ಸಂಚಾಲಕ ಮಂಡಳಿಯನ್ನು, ಸ್ವಯಂ ಸೇವಕ-ಕಾರ್ಯಕರ್ತರನ್ನು ಸ್ವಾಗತಿಸಿ, ಸಮಿತಿಯ ಸಭೆಯ ಉದ್ದೇಶ-ಮಹತ್ವವನ್ನು ವಿವರಿಸಿದರು.
ವಿಶ್ವಸ್ತ ಕಾರ್ಯದರ್ಶಿಗಳಾದ ಮುಕುಂದ ಕಾಮತ್ ಮುಂಬರುವ ಸೆಪ್ಟಂಬರ್‌ನಲ್ಲಿ ಜರಗುವ ಗಣೇಶೋತ್ಸವದಲ್ಲಿ ಸರ್ವರೂ ಸಕ್ರಿಯರಾಗಿ, ಉತ್ಸವವನ್ನು ಕೈಗೊಳ್ಳಲು ಪರಿಶ್ರಮಿ ಸಲು ಎಲ್ಲರು ಸಹಕರಿಸಬೇಕು. ಸಮಿತಿಯ ಸದಸ್ಯರಿಂದ ಅವರು, ಗಣೇಶೋತ್ಸವವನ್ನು ಇನ್ನಷ್ಟು ಅದ್ದೂರಿಯಿಂದ ನೆರವೇರಿಸಲು ವಿಶೇಷ ಸಲಹೆ-ಸೂಚನೆಗಳನ್ನು ನೀಡಲು ವಿನಂತಿಸಿದರು. ಬಳಿಕ ಸಮಿತಿಯ ಸದಸ್ಯರಾದ ಎನ್. ಎನ್. ಪಾಲ್, ಜಿ. ಎಂ. ಕಾಮತ್, ಸಂತೋಷ್ ಭಟ್, ಸುರೇಶ್ ಕಾಮತ್, ನಾಗರಾಜ ಕಿಣಿ, ನಾಗೇಶ್ ಪೋವಾRರ್, ಕಮಲಾಕ್ಷ ಸರಾಫ್ ಇನ್ನಿತರರು ಸಲಹೆ ಸೂಚನೆಗಳನ್ನಿತ್ತು ವಿಚಾರ-ವಿನಿಮಿಯ ನಡೆಸಿದರು.
ವಿಶ್ವಸ್ತರಾದ ಶಾಂತಾರಾಮ ಭಟ್, ರಾಜೀವ ಶೆಣೈ, ಉಮೇಶ್ ಪೈ, ಪ್ರಮೋದ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಸದಸ್ಯರಾದ ಎಸ್. ಎಸ್. ಭಟ್, ಜಿ. ಎಸ್. ಭಟ್, ಹರಿಮಾಣಿ ಶಾನ್‌ಭಾಗ್, ವಿ. ಎಸ್. ಕಾಮತ್, ಕೃಷ್ಣಾನಂದ ಶೆಣೈ, ವಿ. ಎನ್. ಶ್ಯಾನ್‌ಭಾಗ್ ಇನ್ನಿತರರು ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಸದಸ್ಯರಾದ ಅರುಣಾ ನಾಯಕ್, ಆಶಾ ನಾಯಕ್ ಇನ್ನಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.