Advertisement

ತ್ಯಾಜ್ಯ ಸಮಸ್ಯೆಗೆ ಮುಕ್ತಿ ಕೊಡಿ

06:00 AM Aug 23, 2018 | Team Udayavani |

ಉಡುಪಿ ನಗರಸಭೆಯ ವಡಭಾಂಡೇಶ್ವರ ವಾರ್ಡ್‌ನಲ್ಲಿ ಕಳೆದ ಅವಧಿಯಲ್ಲಿ ಬಹುತೇಕ ಕೆಲಸಗಳು ನಡೆದಿದ್ದರೂ ಚರಂಡಿ, ಕಾಂಕ್ರಿಟ್‌ ರಸ್ತೆ ಬೀದಿ ದೀಪ ಸೇರಿದಂತೆ ಕೆಲವೊಂದು ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ.

Advertisement

ಮಲ್ಪೆ: ಉಡುಪಿ ನಗರಸಭೆಯ ವಡಭಾಂಡೇಶ್ವರ ವಾರ್ಡ್‌ ಇತಿಹಾಸ ಪುರಾಣ ಪ್ರಸಿದ್ದವಾದ ವಡಭಾಂಡ ಬಲರಾಮ ದೇವಸ್ಥಾನ ಹೊಂದಿದ್ದು, ಈ ಕಾರಣ ವಾರ್ಡ್‌ಗೂ ಇದೇ ಹೆಸರು ಬಂದಿದೆ.  ವಡಭಾಂಡೇಶ್ವರ ವಾರ್ಡ್‌ನಲ್ಲಿ ಮೂರು ಬಬ್ಬುಸ್ವಾಮಿ ದೈವಸ್ಥಾನ, ಬೊಬ್ಬರ್ಯ ಸ್ಥಾನ, ಒಂದು ಚರ್ಚ್‌ ಇದೆ. ಪಡ್ಲನೆರ್ಗಿ, ಉದ್ದಿನಹಿತ್ಲು, ಸಾಲ್ಮರ, ತೊಟ್ಟಂ, ನೆರ್ಗಿ ವಾರ್ಡ್‌ನ ಪಶ್ಚಿಮ ಭಾಗದಲ್ಲಿ ಅರ್ಧ ಬೀಚ್‌ನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಂಧ್ಯಾ ತಿಲಕ್‌ರಾಜ್‌ ಆಯ್ಕೆಯಾಗಿದ್ದರು.

ಈ ಬಾರಿ ತ್ರಿಕೋನ ಸ್ಪರ್ಧೆ 
ವಡಭಾಂಡೇಶ್ವರ ವಾರ್ಡ್‌ನಲ್ಲಿ ಹಿಂದಿನ ಎಲ್ಲ ಅವಧಿಯಲ್ಲೂ  ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಆನಂದಿ ಎರಡು ಬಾರಿ, ಎಂ. ನವೀನ್‌ಚಂದ್ರ ಒಂದು ಅವಧಿಗೆ ಸದಸ್ಯರಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಶರ್ಮಿಳ, ಜೆಡಿಎಸ್‌ನಿಂದ ಪ್ರಮೋದ, ಪಕೇÒತರರಾಗಿ ಆನಂದಿ ಅವರು ಸ್ಪರ್ಧಿಸಿದ್ದು, ಸಂಧ್ಯಾ ತಿಲಕ್‌ರಾಜ್‌ ಅವರು 397 ಮತಗಳಿಂದ ಜಯಗಳಿಸಿ ಆಯ್ಕೆಯಾಗಿದ್ದರು. ಈ ಬಾರಿ ಸಾಮಾನ್ಯ ವರ್ಗಕ್ಕೆ ಈ ಕ್ಷೇತ್ರ ಮೀಸಲಾಗಿದ್ದು  ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಶೇಖರ್‌ ಜಿ. ಕೋಟ್ಯಾನ್‌, ಬಿಜೆಪಿಯಿಂದ ಯೋಗೀಶ್‌ ಸಾಲ್ಯಾನ್‌, ಜೆಡಿಎಸ್‌ನಿಂದ ಶಶಿಧರ್‌ ಅಮೀನ್‌ ಕಣಕ್ಕಿಳಿದಿದ್ದಾರೆ. ಮೂರೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ವಾರ್ಡ್‌ನಲ್ಲಿ ಆಗಬೇಕಾದ ಕೆಲಸಗಳು, ಸಮಸ್ಯೆಗಳು ಹೆಚ್ಚಾಗಿ ಚರ್ಚೆಯಾಗುತ್ತಿವೆ. ಈ ಕಾರಣ ವಿಜೇತ ಅಭ್ಯರ್ಥಿಗಳಿಗೆ ಜನರ ಆಶೋತ್ತರ ಈಡೇರಿಸ ಬೇಕಾದ ಹೆಚ್ಚಿನ ಹೊಣೆ ಇದೆ. 

ಆದ ಕೆಲಸ
ಕಾಂಕ್ರೀಟ್‌

ವಡಭಾಂಡೇಶ್ವರ- ತೊಟ್ಟಂ ಮುಖ್ಯ ರಸ್ತೆ 1 ಕೋ. ರೂ. ವೆಚ್ಚದಲ್ಲಿ, ಮಂಜುನಾಥೇಶ್ವರ ಭಜನಾ ಮಂದಿರದಿಂದ ಪೊಟ್ಟಳಿವೆಗೆ ರಸ್ತೆ 50 ಲಕ್ಷ ರೂ. ವೆಚ್ಚದಲ್ಲಿ  ಕಾಂಕ್ರೀಟೀಕರಣ ಆಗಿದೆ. ಗಾಂಧಿಕಟ್ಟೆಯಿಂದ ತೊಟ್ಟಂವರೆಗೆ ಕಡಲತೀರದಲ್ಲಿ ಸೇತುವೆ ಸಹಿತ ಇಂಟರ್‌ಲಾಕ್‌ ರಸ್ತೆ ನಿರ್ಮಾಣವಾಗಿದೆ.

ಚರಂಡಿ 
ತೊಟ್ಟಂ ಮುಖ್ಯ ರಸ್ತೆಯಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ, ನೆರ್ಗಿ 1ನೇ ಕ್ರಾಸ್‌ ಮತ್ತು 2ನೇ ಕ್ರಾಸ್‌, ಉದ್ದಿನ ಹಿತ್ಲುವಿನಲ್ಲಿ ಚರಂಡಿ, ನೆರ್ಗಿ 3ನೇ ಕ್ರಾಸ್‌ ಮತ್ತು 4ನೇ ಕ್ರಾಸ್‌- ಸರಸ್ವತಿ ಭಜನಾ ಮಂದಿರದ ಬಳಿ ಬಲರಾಮ ದೇವಸ್ಥಾನದ ಮುಂಭಾಗದಲ್ಲಿ  ಕಾಮಗಾರಿ ನಡೆಯಲಿದೆ

Advertisement

ಬೀದಿ ದೀಪ
ವಡಭಾಂಡೇಶ್ವರ ವೃತ್ತ, , ಸಿಟಿಜನ್‌ ಸರ್ಕಲ್‌, ಬೀಚ್‌ ಸರ್ಕಲ್‌, ಬಲರಾಮ ದೇವಸ್ಥಾನ, ಮಂಜುನಾಥೇಶ್ವರ ಮತ್ತು ಪಂಡರೀನಾಥ ಭಜನಾ ಮಂದಿರದ ಬಳಿ ಮಿನಿಮಾಸ್ಕ್, ಬೀಚ್‌ ಗಾಂಧಿ ಸರ್ಕಲ್‌ನಿಂದ ತೊಟ್ಟಂ ಪೊಟ್ಟಳಿವೆಯವರೆಗೆ ಸಮುದ್ರತೀರದಲ್ಲಿ ಎಲ್‌ಇಡಿ ದೀಪ, ತೊಟ್ಟಂ ಮುಖ್ಯರಸ್ತೆಯಲ್ಲಿ ಸೋಡಿಯಂ ದೀಪ ತೆಗೆದು ಎಲ್‌ಇಡಿ ಅಳವಡಿಕೆ.

ಕುಡಿಯುವ ನೀರು
ವಡಭಾಂಡೇಶ್ವರ ಬಳಿಯ ಬೈಕಾಡ್ತಿ ಪಂಜುರ್ಲಿ ರಸ್ತೆಯ ಪರಿಸರ, ಸಾಲ್ಮರ, ಬೀಚ್‌ ತೊಟ್ಟಂ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಈ ಭಾಗದಲ್ಲಿ ಹೆಚ್ಚುವರಿ ಪೈಪ್‌ ಅಳವಡಿಸಿ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಆಗದ ಕೆಲಸ
ತಡೆಗೋಡೆ 

ತೊಟ್ಟಂ ಪುರ್ಟಾಡೋ ಗೆಸ್ಟ್‌ ಹೌಸ್‌ನಿಂದ ಉತ್ತರಕ್ಕೆ ಪ್ರತಿ ವರ್ಷ ಕಡಲ ಕೊರೆತ ಸಮಸ್ಯೆ ಎದುರಾಗುತ್ತಿದೆ. ಈ ಮಳೆಯಲ್ಲೂ ತೀವ್ರಕೊರೆತ ಉಂಟಾಗಿತ್ತು. ಸಮೀಪದಲ್ಲಿ ಮನೆಗಳಿರುವುದರರಿಂದ ಶಾಶ್ವತ ತಡೆಗೋಡೆ ಆಗಬೇಕಾಗಿದೆ.

ಚರಂಡಿ ಬೇಕು
ವಡಭಾಂಡೇಶ್ವರದದಿಂದ ತೊಟ್ಟಂ ಸುಜಾತ ಹೋಟೆಲ್‌ವರೆಗೆ ಒಂದು ಬದಿ ಚರಂಡಿ ನಿರ್ಮಾಣವಾದರೂ ನೀರು ಹರಿಯುತ್ತಿಲ್ಲ.ಸುಜಾತ ಹೋಟೇಲ್‌ನಿಂದ ಮುಂದೆ ಚರ್ಚ್‌ ವರೆಗೆ ಎರಡೂ ಬದಿ ಚರಂಡಿ ನಿರ್ಮಾಣ ಆಗಬೇಕಾಗಿದೆ. ಬಲರಾಮ ದೇವಸ್ಥಾನದ ಎದುರು  ಚರಂಡಿ ಬೇಕಿದೆ.

ಫ‌ುಟ್‌ಪಾತ್‌
ಈ ವಾರ್ಡ್‌ನ ಪಡ್ಲ ನೆರ್ಗಿ ಈಗಿರುವ ಡಾಮಾರು ರಸ್ತೆ ಸಂಪೂರ್ಣ ಹಾಳಾಗಿದೆ. ಕಾಂಕ್ರೀಟ್‌ ರಸ್ತೆ ಕಾಮಗಾರಿ ಅಗತ್ಯ ಆಗಬೇಕಿದೆ. ವಡಭಾಂಡೇಶ್ವರ ಸರ್ಕಲ್‌ನಿಂದ ಉದ್ದಿನಹಿತ್ಲು ಪ್ರಮುಖ ರಸ್ತೆಗೂ ಕಾಂಕ್ರೀಟ್‌ ಆಗಬೇಕಾಗಿದೆ.

ತ್ಯಾಜ್ಯ ಸಮಸ್ಯೆ
ತ್ಯಾಜ್ಯ ಸಮಸ್ಯೆ ವಾರ್ಡ್‌ ನಲ್ಲಿದೆ. ಮೆಸ್ಕಾಂ ಕಚೇರಿ, ಬೀಚ್‌ ದ್ವಾರ, ಬಲರಾಮನಗರದ ಬಳಿ ತ್ಯಾಜ್ಯರಾಶಿ ಕಂಡುಬರುತ್ತಿದೆ. ಬೇರೆಡೆಗೆ ಸಾಗುವವರು ಇಲ್ಲಿ ಕಸವನ್ನು ಎಸೆದು ಹೋಗುತ್ತಿದ್ದು ವಿಲೇವಾರಿ ಆದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಪುರುಷರು: 1406
ಮಹಿಳೆಯರು: 1496
ಒಟ್ಟು  ಮತದಾರರು:2902

Advertisement

Udayavani is now on Telegram. Click here to join our channel and stay updated with the latest news.

Next