Advertisement
ಅವರು ರವಿವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ವಡಭಾಂಡೇಶ್ವರ ದೇವಸ್ಥಾನ ದೊಡ್ಡ ತಪಸ್ವಿಗಳಿಂದ ನಿರ್ಮಿತವಾದ ಕ್ಷೇತ್ರ. ಉಡುಪಿಯಲ್ಲಿ ಕೃಷ್ಣ ಪಶ್ಚಿಮಾಭಿಮುಖವಾಗಿದ್ದರೆ, ಮಲ್ಪೆಯಲ್ಲಿ ಬಲರಾಮ ಪೂರ್ವಾಭಿಮುಖವಾಗಿದ್ದಾನೆ. ಅಣ್ಣ ತಮ್ಮಂದಿರು ಅಭಿಮುಖವಾಗಿ ಇರುವ ಕ್ಷೇತ್ರದಲ್ಲಿ ಯಾವುದೇ ಜೀರ್ಣೋದ್ಧಾರ ಕಾರ್ಯದಲ್ಲಿ ನಾವು ತೊಡಗಿದಾಗ ಇಲ್ಲಿ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದರು.
Related Articles
Advertisement
ಇಂದು ಬ್ರಹ್ಮಕುಂಭಾಭಿಷೇಕ, ಮಹಾ ಅನ್ನಸಂತರ್ಪಣೆಮಾ. 25ರಂದು ಬೆಳಗ್ಗೆ 6.45ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಬಳಿಕ ನ್ಯಾಸಪೂಜೆ ಪ್ರಸನ್ನಪೂಜೆ ಅವಸೃತಬಲಿ, ಮಹಾ ಮಂತ್ರಕ್ಷತೆ, ಪ್ರಸಾದ ವಿತರಣೆ, ಪಲ್ಲಪೂಜೆಯಾಗಿ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ಧ ತಂಡದಿಂದ ಭಜನೆ ಜರಗಲಿದ್ದು, ಸಂಜೆ ನಿತ್ಯಬಲಿ, ರಂಗಪೂಜೆಯ ಬಲಿ, ರಂಗಪೂಜೆ ಸೇವೆ ನಡೆಯಲಿದೆ.