Advertisement

Junior ಇಂಡಿಯಾ ಹಾಕಿ ಕ್ಯಾಂಪ್‌ಗೆ ಕೊಡಗಿನ ವಚನ್‌

12:01 AM Jan 28, 2024 | Team Udayavani |

ಸೋಮವಾರಪೇಟೆ: ಕೊಡಗು ಜಿಲ್ಲೆಯ ಹಾಕಿ ಯುವ ಕ್ರೀಡಾಪಟು ವಚನ್‌, ಜೂನಿಯರ್‌ ಇಂಡಿಯಾ ಹಾಕಿ ಕ್ಯಾಂಪ್‌ಗೆ ಆಯ್ಕೆಯಾಗುವ ಮೂಲಕ ಹಾಕಿ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಸೋಮವಾರಪೇಟೆಯ ಕ್ಲಬ್‌ ರಸ್ತೆ ನಿವಾಸಿ ಎಚ್‌.ಎನ್‌. ಅಶೋಕ್‌ ಹಾಗೂ ಎಚ್‌.ಎ. ಸುಜಿನಿ ದಂಪತಿ ಪುತ್ರ, ಎಚ್‌.ಎ. ವಚನ್‌ ಈ ಸಾಧಕ.

Advertisement

ನಗರದ ಒಎಲ್‌ವಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಚನ್‌, ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿದ್ದುಕೊಂಡು ಸೆಂಟ್‌ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಿವೈಇಎಸ್‌ ಕ್ರೀಡಾ ಹಾಸ್ಟೆಲ್‌ನಲ್ಲಿದ್ದು ಜೈನ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಾರೆ.

2019-20, 2021-2023ರ ವರೆಗೆ ಹಾಕಿ ಇಂಡಿಯಾದಿಂದ ಆಯೋಜನೆಗೊಂಡಿದ್ದ ಜೂನಿ ಯರ್‌ ರಾಷ್ಟ್ರೀಯ ಪಂದ್ಯಾ ವಳಿಯಲ್ಲಿ ಭಾಗಿಯಾಗಿ ರುವ ವಚನ್‌, ರಾಜ್ಯಮಟ್ಟದ ಅನೇಕ ಪಂದ್ಯಾವಳಿಯಲ್ಲಿ ಆಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next