Advertisement
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ರಾಜಸ್ತಾನಕ್ಕೆ ಲಸಿಕೆಅಮೆರಿಕಾದಿಂದ ತೆಗೆದುಕೊಂಡು ಬಂದರಾ?ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡಬಾರದು. ಆಡಳಿತ ಪಕ್ಷದವರಾಗಲಿ,ವಿರೋಧ ಪಕ್ಷದವರಾಗಲಿ ಕೊರೊನಾ ಬಗ್ಗೆಆರೋಪ ಮಾಡಿದರೆ ಸಣ್ಣವರಾಗುತ್ತಾರೆ ಎಂದುತಿಳಿಸಿದರು.
Related Articles
Advertisement
ಆಕ್ಸಿಜನ್ಗಾಗಿ ಕೇಂದ್ರಕ್ಕೆ ಪತ್ರ: ಉಸಿರಾಟದಸಮಸ್ಯೆ ಹೊಂದಿರುವ ಕೊರೊನಾ ಸೋಂಕಿತರಿಗೆಅಗತ್ಯವಿರುವ ಆಕ್ಸಿಜನ್ ಪೂರೈಸಲು ಮುಂದಿನಒಂದು ತಿಂಗಳ ಸೋಂಕಿತರ ಅಂದಾಜು ಇಟ್ಟುಕೊಂಡು 1500 ಮೆಟ್ರಿಕ್ ಟನ್ ಪೂರೈಸುವಂತೆಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸದ್ಯಕ್ಕೆಆಕ್ಸಿಜನ್ ಕೊರತೆ ಇಲ್ಲವೆಂದು ಸುಧಾಕರ್‌ತಿಳಿಸಿದರು.ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಕುರಿತು ಸಚಿವರಾದ ಜಗದೀಶ್ ಶೆಟ್ಟರ್,ಬಸವರಾಜ್ ಬೊಮ್ಮಾಯಿ,ಬೆಂಗಳೂರು ದಕ್ಷಿಣಕ್ಷೇತ್ರದ ಸಂಸದ ತೇಜಸc ಸೂರ್ಯ ಅವರೊಂದಿಗೆಆಕ್ಸಿಜನ್ ಉತ್ಪಾದಿಸುವ ಕಂಪನಿಗಳ ಮಾಲೀಕರು,ಸರಬರಾಜುದಾರರ ಸಭೆ ನಡೆಸಿದ್ದೇವೆ. ರಾಜ್ಯಕ್ಕೆಬೇಕಾಗುವಷ್ಟು ಜಂಬೋ ಸಿಲಿಂಡರ್, ಆಕ್ಸಿಜನ್‌ಸಿಲಿಂಡರ್ ಒದಗಿಸುವ ಭರವಸೆ ನೀಡಿದ್ದಾರೆಎಂದು ಹೇಳಿದರು.
ಎಲ್ಲಾ ವಯೋಮಾನದವರಿಗೆ ಲಸಿಕೆ: ರಾಜ್ಯದಎಲ್ಲಾ ವಯೋಮಾನದವರಿಗೂ ಲಸಿಕೆ ಹಾಕಲುಸರ್ಕಾರ ಸಿದ್ಧವಿದೆ. ಮೇ 1ರಿಂದ ಶುರುಮಾಡುತ್ತೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿನಡೆಯಲಿರುವ ಸಭೆಯಲ್ಲಿ ಲಸಿಕೆ ಖರೀದಿ, ಲಸಿಕೆಹಾಕುವ ಬಗ್ಗೆ ತೀರ್ಮಾನ ಮಾಡುತ್ತೇವೆ.ಉಚಿತವಾಗಿ ಕೊಡಬೇಕೋ ಅಥವಾ ದರನಿಗದಿಪಡಿಸಬೇಕೇ ಎನ್ನುವ ಚರ್ಚೆ ಆಗಿಲ್ಲ. ಸಿಎಂನೇತೃತ್ವದಲ್ಲಿ ನಡೆಯುವ ಸಭೆಯ ಬಳಿಕ ಅಂತಿಮನಿರ್ಧಾರವಾಗಲಿದೆ ಎಂದು ಸ್ಪಷ್ಟ ಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿರೋಹಿಣಿ ಸಿಂಧೂರಿ, ಜಿಪಂ ಸಿಇಒ ಎ.ಎಂ.ಯೋಗೀಶ್, ನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಮೈಸೂರು ವೈದ್ಯಕೀಯ ಕಾಲೇಜು ಮತ್ತುಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜು, ಜಿÇÉಾ ಸರ್ಜನ್ ಡಾ.ಟಿ.ಶಿವಪ್ರಸಾದ್, ನೋಡಲ್ ಅಧಿಕಾರಿ ಡಾ.ಪಿ.ರವಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವಿಭಾಗೀಯ ಜಂಟಿನಿರ್ದೇಶಕ ವಿಜಯಕುಮಾರ್,ಉಪ ನಿರ್ದೇಶಕ ಡಾ.ರಾಮಚಂದ್ರ ಇನ್ನಿತರರುಹಾಜರಿದ್ದರು.