ದಾವಣಗೆರೆ: ಸರ್ಕಾರ ಎಲ್ಲ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆ, ಕಾರ್ಯಕ್ರಮ ಜಾರಿಗೊಳಿಸಿದೆ. ಮುಂದೆಯೂ ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಬುಧವಾರ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಜ್ ಯಾತ್ರಾರ್ಥಿಗಳಿಗೆ ಲಸಿಕೆ, ಚುಚ್ಚುಮದ್ದು ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ 243 ಯಾತ್ರಾರ್ಥಿಗಳು ಪವಿತ್ರ ಹಜ್ ಯಾತ್ರೆ
ಕೈಗೊಳ್ಳಲಿದ್ದಾರೆ. ನಮ್ಮ ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯಲ್ಲಿ ಎಲ್ಲ ಸಮುದಾಯ ಬಾಂಧವರು ಶಾಂತಿ, ಸೌಹಾರ್ದìತೆಯಿಂದ ಬದುಕಲು
ಆಶೀರ್ವದಿಸುವಂತೆ ಹಾಗೂ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಬರಗಾಲ ಇದೆ. ಈ ವರ್ಷ ಉತ್ತಮ ಮಳೆ-ಬೆಳೆ ಆಗಲಿ
ಎಂದು ಅಲ್ಲಾಹುನಲ್ಲಿ ಪ್ರಾರ್ಥಿಸೋಣ ಎಂದರು.
ತಂಜಮೀನ್ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಸಾದಿಕ್ ಪೈಲ್ವಾನ್ ಮಾತನಾಡಿ, ಹಜ್ ಯಾತ್ರೆ ಎಲ್ಲರಿಗೂ ಕ್ಷೇಮ, ಶ್ರೇಯಸ್ಸು, ಅಭಿವೃದ್ಧಿ ಕೋರುವ ಯಾತ್ರೆ. ಪವಿತ್ರ ಹಜ್ ಯಾತ್ರೆಯ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು. ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಶಿರಾಜ್, ದೂಡಾ ಮಾಜಿ ಅಧ್ಯಕ್ಷ ಆಯೂಬ್ ಪೈಲ್ವಾನ್, ಶೇಕ್ ಅಹ್ಮದ್, ಕೆ. ಜಾವೆದ್‌ಸಾಬ್, ಅಬ್ದುಲ್ ಗಣತಿಯಾರ್, ಸೈಯದ್ ಹಬೀಬ್‌ಸಾಬ್, ಎಂ.ಎನ್. ಸಮೀವುಲ್ಲಾ, ಟಾರ್ಗೆಟ್ ಅಸ್ಲಂ, ಆರಿಫ್ ಪೈಲ್ವಾನ್, ಡಾ| ನಜೀರ್ ಅಹ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್.ಡಿ. ನೀಲಾಂಬಿಕಾ, ನಿವಾಸಿ ವೈದ್ಯಾಧಿ ಕಾರಿ ಡಾ| ಎಂ.ಎಸ್. ರಾಘವೇಂದ್ರಸ್ವಾಮಿ ಇತರರು ಇದ್ದರು.