Advertisement

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

12:52 AM Oct 27, 2020 | mahesh |

ಲಂಡನ್‌/ಮುಂಬಯಿ: ಆಕ್ಸ್‌ಫ‌ರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಜತೆಗೂಡಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆ ಪ್ರಯೋಗಕ್ಕೆ ಸಿದ್ಧರಾಗಿ ರುವಂತೆ ಲಂಡನ್‌ನ ಪ್ರಮುಖ ಆಸ್ಪತ್ರೆ ಯೊಂದಕ್ಕೆ ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಲಸಿಕೆಯ ಮೊದಲ ಬ್ಯಾಚ್‌ ತಲುಪಲಿದೆ. ನ.2ರಿಂದ ರೋಗಿಗಳ ಮೇಲೆ ಲಸಿಕೆ ಪ್ರಯೋಗಿಸಲು ಆಸ್ಪತ್ರೆ ಸಜ್ಜಾಗಿದೆ ಎಂದು “ದಿ ಸನ್‌’ ಪತ್ರಿಕೆ ವರದಿ ಮಾಡಿದೆ.

Advertisement

ಕೊರೊನಾ ವಿರುದ್ಧ ಲಸಿಕೆ ಕಂಡುಹಿಡಿ ಯಲು ಜಗತ್ತಿನಾದ್ಯಂತ ಪ್ರಯೋಗಗಳು ನಡೆದಿವೆಯಾದರೂ, ಇಲ್ಲಿಯವರೆಗೂ ಅತಿ ಸಕ್ಷಮ ಲಸಿಕೆಯಾಗಿ ಹೊರಹೊಮ್ಮುವ ಲಕ್ಷಣ ತೋರುತ್ತಿರುವುದು ಆಕ್ಸ್‌ಫ‌ರ್ಡ್‌ ವಿ.ವಿ ಅಭಿವೃದ್ಧಿ ಪಡಿಸುತ್ತಿರುವ “ಎಝಡ್‌ಡಿ1222′ ಎನ್ನುವ ಲಸಿಕೆ. ಆಕ್ಸ್‌ಫ‌ರ್ಡ್‌ ಅಭಿವೃದ್ಧಿಪಡಿ ಸುತ್ತಿರುವ ಲಸಿಕೆ ಸುಮಾರು 1 ವರ್ಷದವರೆಗೆ ಜನರನ್ನು ಕೋವಿಡ್‌ನಿಂದ ದೂರವಿಡಬಲ್ಲದು ಎನ್ನುವ ಭರವಸೆಯಲ್ಲಿದ್ದಾರೆ ಆಸ್ಟ್ರಾಜೆನೆಕಾದ ಸಿಇಒ ಪ್ಯಾಸ್ಕಲ್‌ ಸೋರಿಯೋಟ್‌. ಗಮ ನಾರ್ಹ ಸಂಗತಿಯೆಂದರೆ, ಈ ಲಸಿಕೆಯು ವಯೋವೃದ್ಧರಲ್ಲಿ ರೋಗನಿರೋಧಕ ಶಕ್ತಿ ಯನ್ನು ಅತೀವವಾಗಿ ವೃದ್ಧಿಸುತ್ತಿರುವುದು ಕಂಡು ಬರುತ್ತಿದೆ ಎಂದು “ಫೈನ್ಯಾನ್ಶಿಯಲ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿದರೆ ಸೋಂಕಿನ ಹರಡುವಿಕೆ ಪ್ರಮಾಣ ಶೇ.24ರಷ್ಟು ತಡೆಯಲು ಸಾಧ್ಯವೆಂದು ಲ್ಯಾನ್ಸೆಟ್‌ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next