ನವ ದೆಹಲಿ : ಕೋವಿಡ್ ವಿರುದ್ಧ ಲಸಿಕೆಗಳ ಡೋಸ್ ಕೊರತೆಯು ಒಂದು ಗಂಭೀರ ವಿಚಾರ ಅದು ಉತ್ಸವ ಅಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ನಿನ್ನೆ(ಏ.8) ಕೋವಿಡ್ ಸೋಂಕಿನ ಎರಡನೇ ಅಲೆ ಜಾಸ್ತಿಯಾಗುತ್ತಿರುವ ಕಾರಣದಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ವಿಡಿಯೋ ಸಂವಾದ ನಡೆಸಿ, ಮಾತನಾಡಿದರು. ಏಪ್ರಿಲ್ 11 ಹಾಗೂ 14 ರ ನಡುವೆ ದೇಶವ್ಯಾಪಿ “ಲಸಿಕೆ ಉತ್ಸವ”ವನ್ನು ಆಚರಿಸಲು ಕರೆ ನೀಡಿದ್ದರು. ಆದರೇ, ಪ್ರಧಾನಿ ಕರೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಓದಿ : ನೆನಪಿರಲಿ..ನಿಮ್ಮನ್ನು ಪ್ರಶ್ನಿಸುವವರು ನೀವೇ ಆಗಬೇಕು..!
ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಲಸಿಕಾ ಕೇಂದ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಆಗುತ್ತಿದೆ ಎನ್ನುವುದು ವರದಿಯಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದೆ. ಲಸಿಕೆ ಕೇಂದ್ರಗಳು ಸ್ಥಗಿತಗೊಳ್ಳುತ್ತಿವೆ. ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೋವಿಡ್ ಲಸಿಕೆಗಳ ರಫ್ತಿನ ಕೊರತೆಯ ಬಗ್ಗೆ ಗಾಂಧಿ ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೆಚ್ಚುತ್ತಿರುವ ಕೋವಿಡ್ ಬಿಕ್ಕಟ್ಟಿನ ಮಧ್ಯೆ, ಲಸಿಕೆಗಳ ಕೊರತೆಯು ಬಹಳ ಗಂಭೀರವಾದ ವಿಷಯವಾಗಿದೆ. ಅದು “ಉತ್ಸವ” ಅಲ್ಲ. ಯಾವುದೇ ಪಕ್ಷಪಾತವಿಲ್ಲದೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸಹಾಯ ಮಾಡಬೇಕು. ಈ ಸಾಂಕ್ರಾಮಿಕ ರೋಗವನ್ನು ನಾವು ಒಟ್ಟಾಗಿ ಸೋಲಿಸಬೇಕು ”ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಓದಿ : ‘ಮಿನಿ ಪಾಕಿಸ್ತಾನ್’ ಎಂದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ? : ಮಮತಾ ವಾಗ್ಬಾಣ