ಹೊಸದಿಲ್ಲಿ/ವೆಲ್ಲಿಂಗ್ಟನ್: ದೇಶದಲ್ಲಿ ಸೋಮವಾರ ಒಂದೇ ದಿನ 88.13 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದ ಬಳಿಕ ಒಂದು ದಿನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಿದ್ದು ಇದು ದಾಖಲೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್‌ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ 7 ಗಂಟೆಯ ವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ 62,12,108 ಸೆಷನ್‌ಗಳ ಮೂಲಕ 55,47,30, 609 ಡೋಸ್ ಲಸಿಕೆ ನೀಡಲಾಗಿದೆ. ಹೀಗಾಗಿ ದೇಶದಲ್ಲಿ ಲಸಿಕೆ ಪಡೆದವರ ಒಟ್ಟು ಸಂಖ್ಯೆ 55.47 ಕೋಟಿಗೆ ಏರಿಕೆ ಯಾ ಗಿದೆ. 18 ವರ್ಷ ಮೇಲ್ಪಟ್ಟ ಶೇ.45 ಮಂದಿಗೆ ಮೊದಲ ಡೋಸ್ ಲಸಿಕೆ, ಶೇ.13 ಮಂದಿಗೆ ಎರಡು ಡೋಸ್ ನೀಡಿಕೆ ಪೂರ್ತಿ ಯಾಗಿದೆ. ರಾಜ್ಯಗಳಿಗೆ ಇದುವರೆಗೆ 56.81 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇನ್ನೂ 1.09 ಕೋಟಿ ಡೋಸ್ ಪೂರೈಕೆಯ ವಿವಿಧ ಹಂತಗಳಲ್ಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
154 ದಿನಗಳ ಕನಿಷ್ಠಕ್ಕೆ ದೇಶದಲ್ಲಿ ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ 25,166 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. 154 ದಿನಗಳ ಕನಿಷ್ಠಕ್ಕೆ ಸೋಂಕು ಇಳಿಕೆಯಾಗಿದೆ. 437 ಮಂದಿ ಅಸುನೀಗಿದ್ದಾರೆ. 2020ರ ಮಾರ್ಚ್ ಬಳಿಕ ಚೇತರಿಕೆ ಪ್ರಮಾಣ ಶೇ.97.51ಕ್ಕೆ ಹೆಚ್ಚಿದೆ.ಸಕ್ರಿಯ ಸೋಂಕು 3,69,846ಕ್ಕೆ ಇಳಿಕೆಯಾಗಿದೆ. ಒಂದು ದಿನದಲ್ಲಿ 12,101 ಪ್ರಕರಣಗಳಷ್ಟು ಇಳಿಕೆಯಾಗಿದೆ.
ಒಂದು ಕೇಸ್; ದೇಶಕ್ಕೇ ಲಾಕ್ :
ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ದೇಶಾ ದ್ಯಂತ ಲಾಕ್‌ಡೌನ್ ಜಾರಿ ಮಾಡಲಾಗಿದೆ ಎಂದು ಪ್ರಧಾನಿ ಜೆಸಿಂಡಾ ಆ್ಯಡ್ರೆನ್ ಹೇಳಿದ್ದಾರೆ. 50 ಲಕ್ಷ ಇರುವ ದೇಶದ ಜನರು ಮತ್ತೂಮ್ಮೆ ಕಠಿನ ದಿನಗಳನ್ನು ಎದುರಿಸುವ ಅನಿವಾರ್ಯ ಉಂಟಾಗಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎಂಬ ಬಗ್ಗೆ ಜಗತ್ತಿನ ಹಲವು ಉದಾಹರಣೆ ಗಳಿಂದ ಪಾಠ ಕಲಿಯ ಬೇಕಾಗಿದೆ’ ಎಂದಿದ್ದಾರೆ. ಹೀಗಾಗಿ ನ್ಯೂಜಿಲೆಂಡ್‌ನಾದ್ಯಂತ ಜನರು ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ಗಳ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದಾರೆ.