ನವ ದೆಹಲಿ : ದೇಶದಲ್ಲಿ ಪ್ರಸ್ತುತ ಏಳು ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಇನ್ನೂ ಮೂರು ಲಸಿಕೆ ಪ್ರಯೋಗಗಳು ಅಭಿವೃದ್ಧಿಯ ಹಂತದಲ್ಲಿವೆ. ವಿದೇಶದಿಂದ ಲಸಿಕೆಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಲಸಿಕೆ ನಮಗೆ ಸುರಕ್ಷಾ ಕವಚದಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಸೋಮವಾರ, ಜೂನ್ 7) ರಾಷ್ಟ್ರವನ್ನುದ್ದೇಶಿಸಿ ಹೇಳಿದ್ದಾರೆ.
ಇಂದು ವಿಶ್ವದ ಲಸಿಕೆಗಳ ಬೇಡಿಕೆಗೆ ಹೋಲಿಸಿದರೆ, ಲಸಿಕೆಗಳನ್ನು ತಯಾರಿಸುವ ದೇಶಗಳು ಮತ್ತು ಕಂಪನಿಗಳ ಸಂಖ್ಯೆ ತೀರಾ ಕಡಿಮೆ. ನಮ್ಮ ದೇಶದಲದಲಿ ಲಸಿಕೆ ಉತ್ಪಾದನೆಯಾಗುತ್ತಿದೆ. ಲಸಿಕೆ ಉತ್ಪಾದನೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿರದಿದ್ದರೇ ದೇಶದ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ನಮಗೆ ಈ ಮಹಾಪಿಡುಗಿನ ವಿರುದ್ಧ ಹೋರಾಡಲು ಲಸಿಕೆಯೆಂಬ ಸುರಕ್ಷಾ ಕಚಚವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೋವಿಡ್ ; ರಾಜ್ಯದಲ್ಲಿಂದು 27299 ಸೋಂಕಿತರು ಗುಣಮುಖ; 11958 ಹೊಸ ಪ್ರಕರಣ ಪತ್ತೆ
ಇನ್ನು, ನಮ್ಮ ವಿಜ್ಞಾನಿಗಳು ಲಸಿಕೆಗಳನ್ನು ಸಂಶೋಧಿಸುತ್ತಿದ್ದಾಗಲೇ ನಾವು ಈಗಾಗಲೇ ಲಾಜಿಸ್ಟಿಕ್ಸ್ ಗಾಗಿ ಉತ್ಪಾದಿಸಲು ಪ್ರಾರಂಭಿಸಿದ್ದೇವೆ. ಕಳೆದ ವರ್ಷ ಬಹಳ ಕಡಿಮೆ ಪ್ರಕರಣಗಳಿದ್ದಾಗ ಲಸಿಕೆ ಕಾರ್ಯಪಡೆ ರಚಿಸಲಾಗಿತ್ತು. ದೇಶದಿಂದ ಹಲವಾರು ದೇಶಗಳಿಗೆ ಕೋವಿಡ್ ಸೋಂಕನ್ನು ಎದುರಿಸಲು ಲಸಿಕೆಗಳನ್ನು ರವಾನೆ ಮಾಡಲಾಯಿತು. ದೇಶದಲ್ಲಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚು ಮಾಡಲಾಯಿತು. ಹಾಗಾಗಿ ಕೋವಿಡ್ ಸೋಂಕಿನ ವಿರುದ್ಧವಾಗಿ ನಾವು ಇಷ್ಟು ಯಶಸ್ವಿಯಾಗಿ ಹೋರಾಡಲು ಸಾಧ್ಯವಾಯಿತು ಎಂದಿದ್ದಾರೆ.
ಇದನ್ನೂ ಓದಿ : ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ: ಪ್ರಧಾನಿ ಘೋಷಣೆಗೆ ಮುಖ್ಯಮಂತ್ರಿ ಸ್ವಾಗತ