Advertisement
ರವಿವಾರಕ್ಕೆ ಮುಕ್ತಾಯವಾದಂತೆ ದೇಶದಲ್ಲಿ 18 ವರ್ಷ ಮೇಲ್ಪಟ್ಟವರ ಒಟ್ಟು ಸಂಖ್ಯೆಯ ಶೇ.50ರಷ್ಟು ಮಂದಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.
Related Articles
ಸಹಜವಾಗಿ ರೋಗ ನಿರೋಧಕ ಲಕ್ಷಣ ಹೊಂದಿಲ್ಲದ ವ್ಯಕ್ತಿಗಳಿಗೆ ಹೆಚ್ಚವರಿ ಡೋಸ್ ಲಸಿಕೆ ನೀಡುವ ಬಗ್ಗೆ ಸೋಮ ವಾರ (ಡಿ.6) ನಿರ್ಧರಿಸಲಾಗುತ್ತದೆ. ಲಸಿಕೆ ಹಾಕುವುದಕ್ಕಾಗಿನ ರಾಷ್ಟ್ರೀಯ ಸಲಹಾ ಸಮಿತಿ (ಎನ್‌ಟಿಎಜಿಐ) ಸಭೆ ನಡೆಯ ಲಿದೆ. ಅದರಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Advertisement
ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆಒಂದೇ ದಿನ 2,796 ಸಾವು
ಬಿಹಾರದಲ್ಲಿ ಸೋಂಕಿನಿಂದ ಅಸುನೀಗಿರುವವರ ಲೆಕ್ಕಾಚಾರ ಪರಿಷ್ಕರಣೆ ಮಾಡಿದ್ದರಿಂದ ಶನಿವಾರದಿಂದ ರವಿವಾರದ ಅವಧಿಯಲ್ಲಿ ಸಾವಿನ ಸಂಖ್ಯೆ 2,796ಕ್ಕೆ ಏರಿಕೆಯಾಗಿದೆ. ಜು.21ರಂದು 3,998 ಮಂದಿ ದಿನವಹಿ ಸಾವಿನ ಸಂಖ್ಯೆ ಏರಿಕೆಯಾಗಿತ್ತು. 24 ಗಂಟೆಗಳ ಅವಧಿಯಲ್ಲಿ 8,895 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಯಾವ್ಯಾವ ದೇಶಗಳಲ್ಲಿ ಕಡ್ಡಾಯ?
ಆಸ್ಟ್ರಿಯಾ, ಜರ್ಮನಿ, ಗ್ರೀಸ್, ಯುಕೆ, ಇಟಲಿ, ಫ್ರಾನ್ಸ್, ಸ್ವೀಡನ್, ಇಂಡೋನೇಷ್ಯಾ, ತುರ್ಕ್ ಮೆನಿಸ್ಥಾನ್, ಕೆನಡಾ, ಕೋಸ್ಟರಿಕಾ, ಡೆನ್ಮಾರ್ಕ್, ಈಜಿಪ್ಟ್, ಫಿಜಿ, ಹಂಗೇರಿ, ಲಾಟ್ವಿಯಾ, ರಷ್ಯಾ, ಸೌದಿ ಅರೇಬಿಯಾ, ಟ್ಯುನೀಶಿಯಾ, ಟರ್ಕಿ, ಉಕ್ರೇನ್, ಯುನೈಟೆಡ್ ಸ್ಟೇಟ್ಸ್, ನ್ಯೂಜಿಲ್ಯಾಂಡ್, ಚೀನ, ಸ್ವಿಟ್ಸರ್ಲೆಂಡ್ ಇತ್ಯಾದಿ. ಪುದುಚೇರಿಯಲ್ಲಿ
“ಲಸಿಕೆ ಕಡ್ಡಾಯ’
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಇನ್ನು ಎಲ್ಲರೂ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದುಕೊಳ್ಳಲೇಬೇಕು. ಇಲ್ಲದಿದ್ದರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಗ್ಯಾರಂಟಿ! ಜಾಗತಿಕವಾಗಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು, ರಾಜ್ಯಗಳು ಕೊರೊನಾ ಪ್ರಸರಣ ತಡೆಯಲು ವಿವಿಧ ಕ್ರಮಗಳನ್ನು ಘೋಷಿಸುತ್ತಿರುವ ನಡುವೆಯೇ ಪುದುಚೇರಿ ಸರಕಾರ ಇಂಥದ್ದೊಂದು ಘೋಷಣೆ ಮಾಡಿದೆ. “ಲಸಿಕೆ ಕಡ್ಡಾಯ’ ನಿಯಮವು ರವಿವಾರದಿಂದಲೇ ಜಾರಿಗೆ ಬಂದಿದೆ. ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯ್ದೆ, 1973ರ ಸೆಕ್ಷನ್ 6 ಮತ್ತು ಸೆಕ್ಷನ್ 54(1)ರ ನಿಬಂಧನೆಗಳ ಪ್ರಕಾರ ಇದನ್ನು ಜಾರಿ ಮಾಡಲಾಗಿದೆ.