Advertisement

ಗ್ಯಾಸ್‌ ವಿತರಣಾ ಸಿಬ್ಬಂದಿಗೆ ಲಸಿಕೆ

05:26 PM May 23, 2021 | Team Udayavani |

ದೇವನಹಳ್ಳಿ: ಲಾಕ್‌ಡೌನ್‌ ವೇಳೆಯಲ್ಲಿರಾಜ್ಯ ಸರ್ಕಾರ ಘೋಷಣೆ ಪರಿಹಾರದಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಎಂಬಂತಾಗಿದೆ. ಬಹಳಷ್ಟು ವರ್ಗಗಳನ್ನುಕೈ ಬಿಟ್ಟು ಕೆಲವರನ್ನು ಮಾತ್ರಪರಿಗಣಿಸಲಾಗಿದೆ ಎಂದು ಶಾಸಕ ಎಲ್‌ಎನ್‌ ನಾರಾಯಣಸ್ವಾಮಿ ತಿಳಿಸಿದರು.ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ಯಾಸ್‌ ವಿತರಣಾ ಸಿಬ್ಬಂದಿಗೆ ಲಸಿಕೆಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ರೈತಾಪಿವರ್ಗದವರಿಗೆ ನೀಡುತ್ತಿರುವ ಪರಿಹಾರವನ್ನು ಗಮನಿಸಿದರೆ ರೈತರನ್ನು ಅಣಕಿಸುವಂತಿದೆ.ಖಾಸಗಿ ಶಾಲಾ ಕಾಲೇಜುಗಳ ಉಪನ್ಯಾಸಕರನ್ನೂ ಪರಿಗಣಿಸಬೇಕಾಗಿತ್ತು. ಮತ್ತಷ್ಟು ಪರಿಹಾರವನ್ನು ಘೋಷಣೆಮಾಡಬೇಕು, ಎಲ್ಲಾ ವರ್ಗಗಳನ್ನೂ ಗಮನದಲ್ಲಿಟ್ಟುಕೊಂಡು ಪರಿಹಾರ ನೀಡಬೇಕು ಎಂದುಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ.ಈಗ ಘೋಷಣೆ ಮಾಡಿರುವ ಪರಿಹಾರದ ಹಣವನ್ನು ಮಧ್ಯವರ್ತಿಗಳನ್ನುಹೊರತು ಪಡಿಸಿ, ಅರ್ಹರಿಗೆ ತಲುಪುವಂತೆ ಸರ್ಕಾರ ನೋಡಿಕೊಳ್ಳಬೇಕುಎಂದು ಆಗ್ರಹಿಸಿದರು.

ದೇವನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್‌ ಇರುವ ಕಾರಣ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ವಿಜಯಪುರ ಹಾಗೂಬೂದಿಗೆರೆ ಗ್ರಾಮಗಳಲ್ಲಿ ಸೋಮವಾರದಿಂದ ನಿರ್ಗತಿಕರಿಗೆ ರಾತ್ರಿಯ ವೇಳೆ ಉಚಿತವಾಗಿ ಊಟ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿಡಾ.ಸಂಜಯ್ , ಪುರಸಭೆ ಅಧ್ಯಕ್ಷೆ ರೇಖಾವೇಣುಗೋಪಾಲ…, ಪುರÓಭಾ ಸದಸ್ಯರವೀಂದ್ರ, ಟೌನ್‌ ಜೆಡಿಎಸ್‌ ಘಟಕದಅಧ್ಯಕ್ಷ ಮುನಿನಂಜಪ್ಪ, ಮುಖಂಡರಾದ ಲಕ್ಷ್ಮೀನಾರಾಯಣ, ಎಂ. ಕುಮಾರ್‌,ಭರತ್‌ ಗ್ಯಾಸ್‌ ವ್ಯವಸ್ಥಾಪಕ ವೇಣುಗೋಪಾಲ್‌.ವಿ, ಉಪವ್ಯವಸ್ಥಾಪಕಮೇಘರಾಜ್‌, ಸಿಬ್ಬಂದಿ ಸತೀಶ್‌.ಆರ್‌,ನಲ್ಲೂರು ಮುನಿರಾಜು, ರಾಘವೇಂದ್ರಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next