Advertisement

ಕೋಟಿ ಕಾರ್ಯಕರ್ತರಿಗೆ ಲಸಿಕೆ; ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಘೋಷಣೆ

12:58 AM Dec 05, 2020 | mahesh |

ಹೊಸದಿಲ್ಲಿ: ದೇಶದ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ಹಾಕಲು ಆದ್ಯತೆ ನೀಡಲಾಗುತ್ತದೆ. ವಿಜ್ಞಾನಿಗಳು ಅನುಮೋದನೆ ನೀಡಿದ ತತ್‌ಕ್ಷಣವೇ ದೇಶದಲ್ಲಿ ಲಸಿಕೆ ಒದಗಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸುವ ನಿಟ್ಟಿನಲ್ಲಿ 2ನೇ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮಾತನಾಡಿದರು.
ದೇಶೀಯವಾಗಿ ಅಭಿವೃದ್ಧಿಪಡಿಸಲಾಗುವ ಲಸಿಕೆಯನ್ನೇ ಬಳಸಲಾಗುವುದು ಎಂಬ ಸುಳಿವನ್ನೂ ಪ್ರಧಾನಿ ನೀಡಿದ್ದಾರೆ.

Advertisement

ರಾಜ್ಯಗಳ ಜತೆಗೆ ಸಹಭಾಗಿತ್ವ
ಜನರ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತದೆ ಎಂದಿರುವ ಮೋದಿ, ಲಸಿಕೆ ವಿತರಣೆ ಗಾಗಿ ರಾಜ್ಯಗಳ ನೆರವು ಕೋರ ಲಾಗುತ್ತದೆ ಮತ್ತು ಅದಕ್ಕೆ ಯಾವ ರೀತಿ ಯಲ್ಲಿ ದರ ವಿಧಿಸಬೇಕು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.

ಎಂಟು ಲಸಿಕೆಗಳು
8 ಸಂಸ್ಥೆಗಳ ಲಸಿಕೆಗಳು ಪ್ರಯೋಗದ ವಿವಿಧ ಹಂತದಲ್ಲಿವೆ. ಅವುಗಳನ್ನು ಭಾರತ ದಲ್ಲಿಯೇ ಉತ್ಪಾದಿಸಲಾಗುತ್ತದೆ ಎಂದು ಸಂಸ್ಥೆಗಳು ಭರವಸೆ ನೀಡಿವೆ ಎಂದು ಪ್ರಧಾನಿ ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪತ್ತೆ ಪರೀಕ್ಷೆ ಮತ್ತು ಚೇತರಿಕೆ ಹೊಂದಿರುವ, ಸಾವಿನ ಪ್ರಮಾಣ ಕಡಿಮೆ ಪ್ರಮಾಣದಲ್ಲಿರುವ ಕೆಲವೇ ರಾಷ್ಟ್ರ ಗಳಲ್ಲಿ ನಮ್ಮದೂ ಒಂದು ಎಂದರು.

ಭಯ ನಿವಾರಣೆಯಾಗಿದೆ
ಆರಂಭದಲ್ಲಿ ಇದ್ದ ಭಯ, ಈಗ ದೂರವಾಗಿ ಹೊಸ ಭರವಸೆ ಮತ್ತು ವಿಶ್ವಾಸವನ್ನು ಜನರು ಹೊಂದಿದ್ದಾರೆ ಎಂದು ಮೋದಿ ಹೇಳಿದರು.

ಲಕ್ಸಂಬರ್ಗ್‌ ಸಂಸ್ಥೆ ಜತೆಗೆ ಮಾತುಕತೆ
ಲಸಿಕೆಗಳಿಗಾಗಿ ಶೈತ್ಯಾಗಾರ ಸ್ಥಾಪಿಸುವ ನಿಟ್ಟಿ ನಲ್ಲಿ ಲಕ್ಸಂಬರ್ಗ್‌ನ ಬಿ ಮೆಡಿಕಲ್‌ ಸಿಸ್ಟಮ್ಸ್‌ನ ಹಿರಿಯ ಅಧಿಕಾರಿಗಳು ಶನಿವಾರ ಹೊಸದಿಲ್ಲಿಗೆ ಆಗಮಿಸಿ, ಸರಕಾರದ ಜತೆಗೆ ಮಾತುಕತೆ ನಡೆಸಲಿದ್ದಾರೆ. ಅವರು ಲಸಿಕೆ ಸಂಶೋಧನ ಸಂಸ್ಥೆಗಳ ಜತೆಗೂ ಚರ್ಚೆ ನಡೆಸಲಿದ್ದಾರೆ. ಈ ಸಂಸ್ಥೆ -80 ಡಿಗ್ರಿ ಸೆ. ತಾಪಮಾನದಲ್ಲಿ ಲಸಿಕೆಗಳನ್ನು ಇರಿಸುವ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next