ತುಮಕೂರು: ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಇರುವ ಜನರಿಗೆ ಕೋವಿಡ್ ಮಹಾಮಾರಿ ಓಡಿಸುವ ಲಸಿಕೆ ಬಂದಿರುವುದು ಜನರಲ್ಲಿ ಸಂತಸ ಮೂಡಿಸಿದೆ. ಜ.16 ರಂದು ಇಡೀ ದೇಶದಲ್ಲೇ ಏಕಕಾಲದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ತುಮಕೂರು ಜಿಲ್ಲೆಯಲ್ಲೂ ಜಿಲ್ಲಾಡಳಿತ ಆರೊಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಎಲ್ಲಾರೀತಿಯ ತಯಾರಿ ಪೂರ್ಣಗೊಡಿದೆ.
ಕಳೆದ ಹತ್ತು ತಿಂಗಳಿನಿಂದ ಜನರನ್ನು ಆತಂಕ ಪಡಿಸುತ್ತಿದ್ದ ಮಹಾಮಾರಿ ಕೊರೊನಾಗೆ ಲಸಿಕೆ ಕಳೆದ ಜ13 ರಂದು ಸಂಜೆ ತುಮಕೂರಿಗೆ ಪೊಲೀಸ್ ಭದ್ರತೆ ನಡುವೆ ತರಲಾಯಿತು. ಜಿಲ್ಲೆಯಲ್ಲಿ ಕೊರೊನಾ ಇಳಿಮುಖವಾಗಿದ್ದು, ಇದೇ ವೇಳೆಯಲ್ಲಿ ಲಿಸಿಕೆ ಬಂದಿರುವುದು ಜನರಲ್ಲಿ ಸಂತಸ ಮೂಡಿಸಿದೆ. ತುಮಕೂರು ನಗರಕ್ಕೆ ಬಂದಿರುವ ಕೊರೊನಾ ಲಸಿಕೆಯು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ಉಗ್ರಾಣದಲ್ಲಿ ಇಡಲಾಗಿತ್ತು ಈಗ ಜಿಲ್ಲೆಯ 13 ಕಡೆಗಳಲ್ಲಿ ವಿತರಿಸುವ ವ್ಯವಸ್ಥೆಯಾಗಿದೆ.
ಶನಿವಾರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆಯಲ್ಲಿ ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕೆ ವಿತರಿಸುವ ಅಭಿಯಾನ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿರಚಿಸಿದೆ ಅದರ ಅನ್ವಯ ಜಿಲ್ಲೆಯ 13 ಕಡೆ ಲಸಿಕಾ ವಿತರಣಾ ಪರಿಶೀಲನೆ ನಡೆಸಲಾಗಿದೆ.ಮೊದಲ ಹಂತದಲ್ಲಿ ಲಸಿಕೆ ನೀಡಲು ಕೋವಿನ್ ತಂತ್ರಾಂಶದಲ್ಲಿ ಜಿಲ್ಲೆಯಲ್ಲಿ 19,485 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಲಸಿಕೆ ಸಂಗ್ರಹಿಸಲು ಜಿಲ್ಲೆಯಲ್ಲಿ 132 ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಗೆ 12 ಸಾವಿರ ಡೋಸೇಜ್ ಲಸಿಕೆ ಬಂದಿದೆ. ಈ ಲಸಿಕೆಯನ್ನು ಆರೋಗ್ಯ ಸಿಬ್ಬಂದಿಗಳಿಗೆ ಇಂದಿನಿಂದ (ಶನಿವಾರ)13 ಕಡೆಗಳಲ್ಲಿ ನೀಡಲು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಿಸುವ ಈ ಅಭಿಯಾನವನ್ನು ಪರಿಣಾಮಕಾರಿಯಾಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದಾರೆ
ಇದನ್ನೂ ಓದಿ:ಸೇನಾಅಧಿಕಾರಿಗೆ ಅಭಿನಂದನೆ
ಪ್ರಧಾನಮಂತ್ರಿ ಗಳು ಲಸಿಕಾ ವಿತರಣೆಗೆ ಚಾಲನೆ ನೀಡಿದ ಬಳಿಕ ಜಿಲ್ಲೆಯಲ್ಲಿ ಲಸಿಕಾ ವಿತರಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮುಂಚೂಣಿಯ ಕೋವಿಡ್ ಯೋಧರಿಗೆ ಲಸಿಕೆ ವಿತರಿಸಲಾಗುವುದು.
ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
ಚಿ.ನಿ.ಪುರುಷೋತ್ತಮ್