Advertisement
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ದಸರಾದಲ್ಲಿ ಆದಿವಾಸಿ ಮಹೋತ್ಸವ: ಮೈಸೂರೆಂದರೆಕೇವಲ ಅರಮನೆ, ಮೃಗಾಲಯ, ವಸ್ತು ಪ್ರದರ್ಶನವಲ್ಲ.ಪ್ರವಾಸಿಗರನ್ನು ಆಕರ್ಷಿಸಲು ಹತ್ತಾರು ಸ್ಥಳಗಳಿವೆ. ದಸರಾ ಮಹೋತ್ಸವ ವಿಶ್ವದ ಗಮನ ಸೆಳೆದಿದ್ದು, ಈ ಬಾರಿ ಕೋವಿಡ್ ಇಲ್ಲದಿದ್ದರೆ ಮತ್ತಷ್ಟು ಆಕರ್ಷಕವಾಗಿಸುವ ಯೋಜನೆ ಇದೆ. ದೆಹಲಿಯಲ್ಲಿ ನಡೆಯುವ ಆದಿವಾಸಿಗಳ ಉತ್ಸವದಂತೆ ದಸರಾದಲ್ಲೂಆದಿವಾಸಿ ಮಹೋತ್ಸವ ಮಾಡುವ ಚಿಂತನೆಯಿದೆ. ಕೋವಿಡ್ ಇಲ್ಲದೆ ಎಂದಿನಂತೆ ದಸರಾ ನಡೆದರೆ ಆ ಮಹೋತ್ಸವ ಹೊಸ ಕಾರ್ಯಕ್ರಮವಾಗಿಸೇರ್ಪಡೆಗೊಳ್ಳಲಿದೆ. ಇದರಿಂದಾಗಿ ಆದಿವಾಸಿಗಳ ಸಂಸ್ಕೃತಿ, ಸಂಪ್ರದಾಯ ತಿಳಿಯಲಿದೆ ಎಂದರು.
ಸಂವಾದದಲ್ಲಿ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಸುಬ್ರಹ್ಮಣ್ಯ, ಎಂ.ಎಸ್. ಬಸವಣ್ಣ, ರಂಗಸ್ವಾಮಿ ಹಾಜರಿದ್ದರು.
ನಿರಂಕುಶಾಧಿಕಾರದಿಂದ ಆದೇಶಿಸುತ್ತಿಲ್ಲ: ಸಿಂಧೂರಿ :
ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆ ಕೇಂದ್ರಗಳನ್ನು ಮೂರು ಭಾಗಗಳಾಗಿ ವಿಭಜಿಸುವ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಜಾತ್ರೆನಿರ್ಬಂಧ ವೇಳೆ ತಾವು ದೈವ ವಿರೋಧಿ ಎಂದುಹಲವರು ಟೀಕಿಸಿದರು. ನಂಜನಗೂಡು ಜಾತ್ರೆವೇಳೆಯೂ ಇದೇ ಆಯಿತು. ದೊಡ್ಡ ರಥ ಎಳೆಯಲುಸಾವಿರಾರು ಜನ ಬೇಕಾಗುತ್ತಾರೆ. ಹೀಗಾಗಿ ಚಿಕ್ಕರಥಎಳೆಯುವಂತೆ ಸೂಚಿಸಲಾಯಿತು. ಹೀಗಾಗಿ ತಾವುನಿರಂಕುಶಾಧಿಕಾರದಿಂದ ಈ ರೀತಿಯ ಆದೇಶಮಾಡುತ್ತಿಲ್ಲ. ಕೇವಲ ಜನರ ಹಿತಾಸಕ್ತಿಯಷ್ಟೇ ಅದರ ಹಿಂದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.
ಕೋವಿಡ್ ಲಸಿಕೆ ಜಾಗೃತಿಗೆ ಮೌಲ್ವಿಗಳ ಬಳಕೆ: ಡೀಸಿ :
ನಗರದ ಎನ್.ಆರ್. ಮೊಹಲ್ಲಾ ಮತ್ತು ಮಂಡಿ ಪ್ರದೇಶಗಳಲ್ಲಿ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಮೌಲ್ವಿಗಳನ್ನೇ ಬಳಸಿ ಕೊಂಡು ಅವರಲ್ಲಿನ ಹಿಂಜರಿಕೆ ಹೋಗಲಾಡಿಸುವ ಯತ್ನ ನಡೆಸಲಾಗಿದೆ. ಲಸಿಕೆ ಹಾಕಿಸಿಕೊಂಡಲ್ಲಿಮುಂದೇನಾಗುತ್ತದೋ ಎಂಬ ಆತಂಕ ಅವಲ್ಲಿದೆ. ಕೆಲವರು ಲಸಿಕೆ ಹಾಕಿಸಿಕೊಂಡ ಬಳಿಕ ಮದ್ಯ, ಮಾಂಸಸೇವಿಸಬಾರದೆಂದು ಹೆದರಿದ್ದಾರೆ. ಹೀಗಾಗಿ ಲಸಿಕೆ ಹಾಕಿಸಿಕೊಂಡ ಮದ್ಯ ವ್ಯಸನಿಗಳಿಂದಲೇ ತಿಳಿಹೇಳಿಸುವ ಯತ್ನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಕೇರಳ ಮಾದರಿ ಪಾರಂಪರಿಕ ಕಟ್ಟಡಗಳ ಬೈನಾಲೆ ಯೋಜನೆ :
ಮೈಸೂರು ಪ್ರಮುಖ ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ನೀಡಲಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕೇರಳದ ಕೊಚ್ಚಿನ್‌ನಲ್ಲಿ ಶಿಪ್‌ಗ್ಳನ್ನೇ ಬಳಸಿಕೊಂಡು ಪ್ರವಾಸಿ ತಾಣವಾಗಿ ಮಾಡಿರುವಂತೆ ಮೈಸೂರಿನಲ್ಲೂ ಅದೇ ಮಾದರಿಯಲ್ಲಿ ಪಾರಂಪರಿಕ ಕಟ್ಟಡಗಳ ಬೈನಾಲೆ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ಪಾರಂಪರಿಕ ಕಟ್ಟಡಗಳ ಹಿನ್ನೆಲೆ ಸೇರಿದಂತೆ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಮೈಸೂರಿನಲ್ಲಿರುವ ಎಲ್ಲ ಪಾರಂಪರಿಕ ಕಟ್ಟಡಗಳ ಮಾಹಿತಿ ಒಂದೆಡೆ ಸಿಗುವಂತೆ ಮಾಡುವ ಉದ್ದೇಶದಿಂದ ಪಾರಂಪರಿಕ ಕಟ್ಟಡಗಳ ಬೈನಾಲೆ ಯೋಜನೆ ಸಿದ್ಧವಾಗುತ್ತಿದೆ. ಯೋಜನೆ ಪ್ರಗತಿಯಲ್ಲಿದ್ದು, ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಜತೆಗೆ ಚಾಮುಂಡಿಬೆಟ್ಟದ ತಪ್ಪಿಲಿನಲ್ಲಿ ಮೈಸೂರು ವಿವಿಗೆ ಸೇರಿದ 22 ಎಕರೆ ಜಾಗವಿದ್ದು, 3 ಎಕರೆಯಲ್ಲಿ ಪ್ಲಾನಿಟೇರಿಯಂ ನಿರ್ಮಾಣವಾಗಲಿದೆ. ಕೇಂದ್ರ ಚುನಾವಣಾ ಆಯೋಗ ಪ್ರಜಾಪ್ರಭುತ್ವ ಕಟ್ಟಡ ನಿರ್ಮಿಸಲು ಜಾಗ ಕೇಳಿದ್ದು, 2 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.