Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 26 ಗ್ರಾ.ಪಂ ಮತದಾನ ಮತಗಟ್ಟೆಗಳಲ್ಲಿ ಲಸಿಕೆ ನೀಡುವ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಕಡಿಮೆ ಪ್ರಮಾಣ ಲಸಿಕೆ ಪಡೆದಿರುವ ಗ್ರಾಮಗಳಲ್ಲಿ ಲಸಿಕೆ ನೀಡುವ ಯೋಜನೆ ರೂಪಿಸಲಾಗಿದೆ. ಸೋಮವಾರ ತುಂಗಳ ಗ್ರಾಮದಲ್ಲಿ ಲಸಿಕೆ ವಿತರಣೆ ನಡೆಯಲಿದ್ದು, ಗ್ರಾಮಸ್ಥರು ಮತದಾನ ಬೂತ್‌ಗಳಲ್ಲಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರದೊಂದಿಗೆ ಸಾಲಾಗಿ ನಿಂತು ಲಸಿಕೆ ಪಡೆದುಕೊಳ್ಳಬೇಕು.
Related Articles
Advertisement
ಸಾವಳಗಿ ಮತ್ತು ಕೊಣ್ಣೂರ ಹೋಬಳಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕರ ಅನುದಾನದಲ್ಲಿ 1 ಕೋಟಿ ವೆಚ್ಚದಲ್ಲಿ 100ಕ್ಕೂ ಹೆಚ್ಚು ಬೆಡ್‌ಗಳಿಗೆ ಆಕ್ಸಿಜನ್ ಪೈಪ್‌ಲೈನ್ ಮಾಡಲಾಗುವದು. ನಮ್ಮ ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿನವರೆಗೆ 20226 ಜನರು ಲಸಿಕೆ ಪಡೆದುಕೊಳ್ಳಲಾಗಿದ್ದು, ಒಂದು ತಿಂಗಳ ಒಳಗಾಗಿ ಗ್ರಾಮೀಣ ಭಾಗದ ಜನರಿಗೆ ಲಸಿಕೆ ನೀಡಲಾಗುವದು ಎಂದರು.
ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ 25928 ಮತ್ತು ದ್ವಿತೀಯ ಹಂತದಲ್ಲಿ 4842 ಜನರು ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದಾರೆ. ಪ್ರಥಮ ಹಂತದಲ್ಲಿ 5973 ಮತ್ತು ದ್ವಿತೀಯ ಹಂತದಲ್ಲಿ 3736 ಜನರು ಕೋವಾಕ್ಸಿನ್ ಲಸಿಕೆ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಹಂಚಿಕೆಗಾಗಿ 20 ತಂಡಗಳನ್ನು ರಚಿಸಲಾಗಿದೆ. ತಾಲೂಕಿನ 26 ಗ್ರಾಮ ಪಂಚಾಯತಗಳಲ್ಲಿ ಬೂತ್‌ಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಒಂದು ತಂಡ ಒಂದು ದಿನಕ್ಕೆ 100 ಜನರಿಗೆ ಲಸಿಕೆ ನೀಡುವ ಮೂಲಕ ಒಂದು ದಿನಕ್ಕೆ ಕನಿಷ್ಠ 2 ಸಾವಿರ ಜನರಿಗೆ ಲಸಿಕೆ ನೀಡಲಿದ್ದಾರೆ ಎಂದರು.
ತಾ.ಪಂ ಅಧಿ ಕಾರಿ ಅಬೀಬ ಗದ್ಯಾಳ, ಸರಕಾರಿ ಆಸ್ಪತ್ರೆ ವೈದ್ಯಾಧಿ ಕಾರಿ ಡಾ.ವೆಂಕಟರಾಜು, ಸಿಪಿಐ ಶಿವಯ್ಯ ಮಠಪತಿ, ಉಮೇಶ ಜೋಶಿ, ಸಿದ್ದು ಮೀಸಿ, ವರ್ಧಮಾನ ನ್ಯಾಮಗೌಡ, ರವಿ ಯಡಹಳ್ಳಿ, ಬಸವರಾಜ ಹರಕಂಗಿ ಸಹಿತ ಹಲವರು ಇದ್ದರು.