Advertisement

ಲಸಿಕೆ ವಿತರಣೆ ತೀವ್ರಗೊಳಿಸಲುಡಿಸಿ ಡಾ|ರಾಗಪ್ರಿಯಾ ಸೂಚನೆ

03:01 PM Aug 15, 2021 | Team Udayavani |

ಯಾದಗಿರಿ: ಕೋವಿಡ್‌ ಲಸಿಕೆ ನೀಡುವುದನ್ನುಇನ್ನಷ್ಟು ತೀವ್ರಗೊಳಿಸಿ ದೈನಂದಿನ ಸಾಧನೆಹೆಚ್ಚಿಸಲು ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾಆರ್‌. ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರವಾರ ಅಧಿ ಕಾರಿಗಳ ಸಭೆ ನಡೆಸಿಮಾತನಾಡಿದ ಅವರು, ಮೊದಲನೇಡೋಸ್‌ ಲಸಿಕೆ ಇನ್ನೂ ಪಡೆಯದವರನ್ನುಹೆಚ್ಚು ಗುರಿಯಾಗಿರಿಸಿ ಲಸಿಕೆ ನೀಡಿಕೆಚುರುಕುಗೊಳಿಸಬೇಕು. ಯುವಜನತೆಯಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿಮೂಡಿಸಬೇಕು. ಲಸಿಕೆ ಸಂಗ್ರಹ ಪೂರ್ಣಪ್ರಮಾಣದಲ್ಲಿ ಬಳಕೆಯಾಗುವಂತೆಗಮನಹರಿಸಬೇಕು. ಕಾಲೇಜು ಹಾಗೂಜನಸಂದಣಿಯ ಕಚೇರಿಗಳಲ್ಲೂ ಲಸಿಕೆಕಾರ್ಯಕ್ರಮ ನಡೆಸಬೇಕು ಎಂದರು.

ಶಿಕ್ಷಣ ಇಲಾಖೆ ಎಲ್ಲ ಶಿಕ್ಷಕರುಲಸಿಕೆ ಅಭಿಯಾನದಲ್ಲಿ ಸಂಪೂರ್ಣತೊಡಗಿಸಿಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿಲಸಿಕೆ ಗುರಿ ಹೆಚ್ಚಿಸಲು ಶಿಕ್ಷಕರುಪ್ರಯತ್ನಿಸಬೇಕು. ನಿರ್ಲಕ್ಷé ತೋರಿದವರವಿರುದ್ಧ ಕ್ರಮ ಜರುಗಿಸಲು ಡಿಡಿಪಿಐಗೆನಿರ್ದೇಶಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವಲಸಿಕೆ ಕಾರ್ಯಕ್ರಮ ಡಾಟಾ ಎಂಟ್ರಿ ಆಯಾಗ್ರಾಪಂಗಳಲ್ಲಿ ನಮೂದಿಸಬೇಕು. ಇದಕ್ಕೆಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದುಜಿಲ್ಲಾಧಿ ಕಾರಿ ತಿಳಿಸಿದರು.ಈ ವೇಳೆ ಅಪರ ಜಿಲ್ಲಾಧಿ ಕಾರಿಶಂಕರಗೌಡ ಸೋಮನಾಳ, ಜಿಲ್ಲಾಆರೋಗ್ಯಾ ಧಿಕಾರಿ ಡಾ| ಇಂದುಮತಿಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next