Advertisement
ಗ್ರೀಸ್, ಆಸ್ಟ್ರಿಯಾ ಲಸಿಕೆ ಪಡೆಯದ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 100 ಯುರೋ(8461 ರೂ.) ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ನವೆಂಬರ್ ವರದಿಯ ಪ್ರಕಾರ ದೇಶದಲ್ಲಿ 5,20,000 ವೃದ್ಧರು ಲಸಿಕೆ ಹಾಕಿಸಿಕೊಂಡಿಲ್ಲ. ಆಸ್ಟ್ರಿಯಾದಲ್ಲಿ ಡಿಸೆಂಬರ್ ಮಧ್ಯದವರೆಗೆ ದೇಶದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರು ಅಥವಾ ಇತ್ತೀಚೆಗೆ ಸೋಂಕಿನಿಂದ ಗುಣಮುಖರಾದ ವರಿಗೆ ಮಾತ್ರವೇ ಲಾಕ್‌ಡೌನ್ ತೆರವುಗೊಳಿಸ ಲಾಗುವುದು. ಲಸಿಕೆ ಪಡೆ ಯದವರಿಗೆ ಫೆಬ್ರವರಿಯಿಂದ 7200 ಯುರೋ ದಂಡ.
ಅಮೆರಿಕದ ಕೆಲವು ರಾಜ್ಯಗಳಲ್ಲಿ ಲಸಿಕೆ ಪಡೆದವರಿಗೆ ಮಾತ್ರ ಕಚೇರಿಗೆ ಬರಲು ಅನುಮತಿ ನೀಡಲಾಗಿದೆ. ತಪ್ಪಿದರೆ ಕಂಪೆ ನಿಗೆ ಕೋಟಿ ರೂಪಾಯಿ ದಂಡ ಹಾಕಲು ನಿರ್ಧರಿಸಲಾಗಿದೆ. ಉಕ್ರೇನ್‌ನಲ್ಲಿ ಲಸಿಕೆ ಪಡೆಯದ ಸರಕಾರಿ ಸಿಬಂದಿಗೆ ಸಂಬಳರಹಿತ ರಜೆ ನೀಡಲಾಗಿದ್ದು ಜಿಮ್, ಬಾರ್, ರೆಸ್ಟೋರೆಂಟ್ ಸಿಬಂದಿ ಸಂಪೂರ್ಣ ಲಸಿಕೆ ಪಡೆದಿದ್ದರೆ ಮಾತ್ರವೇ ಅನುಮತಿ ನೀಡಬೇಕೆಂದು ಸೂಚಿಸಲಾಗಿದೆ. ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸಾರಿಗೆ ಸೌಲಭ್ಯ ಸಿಗಲಿದೆ ಎಂದು ಸರಕಾರ ಹೇಳಿದೆ. ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ
Related Articles
ಭಾರತದಲ್ಲಿ ಲಸಿಕೆ ಪಡೆಯದವರಿಗೆ ಕೆಲವು ರಾಜ್ಯಗಳು ಕಠಿ ನ ಕ್ರಮ ಜಾರಿಗೊಳಿಸಿದೆ. ಮಹಾರಾಷ್ಟ್ರ ದಲ್ಲಿ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯ ಕಲ್ಪಿಸದಿರಲು ಸರಕಾರ ನಿರ್ಧರಿಸಿದೆ. ಕೇರಳ ದಲ್ಲಿ ಲಸಿಕೆ ಪಡೆಯದವರಿಗೆ ಉಚಿತ ಆರೋಗ್ಯ ಚಿಕಿತ್ಸೆಯಿಲ್ಲ. ಮ.ಪ್ರದೇಶದ ಖಾಂಡವಾ ಜಿಲ್ಲಾಡಳಿ ತವು ಪೂರ್ತಿ ಲಸಿಕೆ ಪಡೆದವರಿಗಷ್ಟೇ ಮದ್ಯ ಖರೀದಿಸಲು ಅವಕಾಶ ನೀಡಿದೆ. ಜಿಲ್ಲೆಯ ಎಲ್ಲ ಬಾರ್ ಮಾಲಕರಿಗೂ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.
Advertisement
ಯೂರೋಪ್‌ನಲ್ಲೇ ಫಸ್ಟ್? ದಕ್ಷಿಣ ಆಫ್ರಿಕಾಗಿಂತಲೂ ಮೊದಲೇ ಯೂರೋಪ್ ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿತ್ತೇ ಎಂಬ ಅನುಮಾನಗಳು ಈಗ ಸೃಷ್ಟಿಯಾಗಿವೆ. ಇಡೀ ಜಗತ್ತಿಗೆ ಹೊಸ ರೂಪಾಂತರಿ ಬಗ್ಗೆ ದಕ್ಷಿಣ ಆಫ್ರಿಕಾ ಎಚ್ಚರಿಕೆ ನೀಡುವ ಒಂದು ವಾರ ಮುಂಚೆಯೇ ಯೂರೋಪ್‌ನ ದೇಶಗಳಲ್ಲಿ ಇದು ಇತ್ತು ಎಂದು ಹೇಳಲಾಗುತ್ತಿದೆ. ಹಂಗೇರಿ, ಸ್ಲೊವಾಕಿಯಾ
ಹಂಗೇರಿಯಲ್ಲಿ ಲಸಿಕೆ ಪಡೆದವರಿಗೆ ಮಾತ್ರ ಕಚೇರಿಗೆ ಬರಲು ಅನುಮತಿ ನೀಡಲಾಗಿದೆ. ಲಸಿಕೆ ಪಡೆಯದವರಿಗೆ ಸಂಬಳರಹಿತ ರಜೆ ಘೋಷಣೆ ಮಾಡಲಾಗಿದೆ. ಸ್ಲೊವಾಕಿಯಾದಲ್ಲಿ ಲಸಿಕೆ ಪಡೆಯಲು ಮುಂದೆ ಬರುವ ಹಾಗೂ ಪಡೆದಿರುವ 60 ವರ್ಷ ಮೇಲ್ಪಟ್ಟವರಿಗೆ ಸರ ಕಾ ರದಿಂದ 500 ಯುರೋ(42 ಸಾವಿರ ರೂ) ಮೌಲ್ಯದ ವೋಚರ್ ನೀಡಲಾಗುತ್ತಿದೆ. ಸಿಂಗಾಪುರ, ಲಿಥುವೇನಿಯಾ
ಸಿಂಗಾಪುರದಲ್ಲಿ ಲಸಿಕೆ ಪಡೆಯದವರು ಸೋಂಕಿಗೆ ತುತ್ತಾದರೆ ಅವರ ವೈದ್ಯಕೀಯ ವೆಚ್ಚ ಅವರೇ ಭರಿಸಬೇಕು. ಲಸಿಕೆ ಪಡೆದವರ ವೈದ್ಯಕೀಯ ವೆಚ್ಚವನ್ನು ಸರ ಕಾ ರ ಭರಿಸುತ್ತದೆ. ಲಿಥುವೇನಿಯಾದಲ್ಲಿ 16 ವರ್ಷ ಮೇಲ್ಪಟ್ಟವರು ಯಾವುದೇ ಸಾರ್ವಜನಿಕ ಸ್ಥಳಕ್ಕೆ ತೆರಳಬೇಕಿದ್ದರೂ ಕೊರೊನಾ ಲಸಿಕೆ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಡಿಸೆಂಬರ್ ಅಂತ್ಯದಿಂದ 12 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಪ್ರಮಾಣ ಪತ್ರ ಕಡ್ಡಾಯ. 75 ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಂಡರೆ 100 ಯುರೋ ಬಹುಮಾನ ಸಿಗುತ್ತದೆ. ಫಿನ್ಲಂಡ್, ಸ್ಪೇನ್
ಫಿನ್ಲಂಡ್ ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ದೇಶದ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಸಂಜೆ 5 ಗಂಟೆಯ ಅನಂತರ ಪ್ರವೇಶವಿಲ್ಲ. ಲಸಿಕೆ ಹಾಕಿಸಿಕೊಳ್ಳು ವವರಿಗೆ ಉಚಿತ ಪ್ಲಾಸ್ಟಿಕ್ ಬಕೆಟ್ ಕೊಡಲಾಗುತ್ತಿದೆ. ಸ್ಪೇನ್‌ನಲ್ಲಿ ಲಸಿಕೆ ಪ್ರಮಾಣಪತ್ರವಿಲ್ಲದ ಯುನೈಟೆಡ್ ಕಿಂಗ್‌ಡಮ್ ನಾಗರಿಕರಿಗೆ ಪ್ರವೇಶ ನಿಷೇಧ.